ಶ್ರೀರಂಗಪಟ್ಟಣ ವಿವಿಧ ದೇಗುಲಗಳಲ್ಲಿ ಪೂಜೆ, ಪ್ರಸಾದ ವಿತರಣೆ

| Published : Jan 23 2024, 01:47 AM IST

ಸಾರಾಂಶ

ಶ್ರೀರಂಗಪಟ್ಟಣದ ಪ್ರಮುಖ ವೃತ್ತಗಳಲ್ಲಿ ಬೃಹತಾಕಾರದ ಕಟೌಟ್‌ಗಳು ರಾರಾಜಿಸಿದರು. ಶ್ರೀರಾಮನಿಗೆ ಪೂಜೆ ಸಲ್ಲಿಸಿ ಭಕ್ತರಿಗೆ ಮಜ್ಜಿಗೆ, ಪಾನಕ, ಕೋಸಂಬರಿ ಸೇರಿದಂತೆ ಸಿಹಿ ಹಾಗೂ ಪ್ರಸಾದವನ್ನು ರಾಮನ ಭಕ್ತರು ನೀಡುತಿದ್ದ ದೃಷ್ಯ ಸಾಮಾನ್ಯವಾಗಿತ್ತು. ಪಟ್ಟಣದ ಕಾವೇರಿ ನದಿ ಸ್ನಾನಘಟ್ಟ ಬಳಿ ರಸ್ತೆ ಬದಿ ವ್ಯಾಪಾರಿಗಳಿಂದ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಿ ದೂರದ ಊರುಗಳಿಂದ ಬಂದಿದ್ದ ಭಕ್ತರಿಗೆ ಮಜ್ಜಿಗೆ, ಪಾನಕ ನೀಡಿ ಸತ್ಕರಿಸಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ಪಟ್ಟಣ ವಿವಿಧ ದೇವಾಲಯಗಳಲ್ಲಿ ಪೂಜೆ, ಪ್ರಮುಖ ವೃತ್ತದಲ್ಲಿ ರಾಮನ ಜಪ-ತಪಗಲು ನಡೆದು ಮಜ್ಜಿಗೆ, ಪಾನಕ, ಕೋಸಂಬರಿ, ಸಿಹಿ ಸೇರಿದಂತೆ ಪ್ರಸಾದ ವಿತರಿಸಿ ಭಕ್ತಿ ಭಾವ ಮೆರೆದರು.

ಪಟ್ಟಣದ ಪೇಟೆನಾರಾಯಣ ಸ್ವಾಮಿ ದೇವಾಲಯದಲ್ಲಿ ಹಿಂದು ಜಾಗರಣಾ ವೇದಿಕೆ ನೇತೃತ್ವದಲ್ಲಿ ದೇವರಿಗೆ ಅಭಿಷೇಕ, ಅಲಂಕಾರ, ವಿಶೇಷ ಪೂಜೆಯೊಂದಿಗೆ ಪ್ರಸಾದ ವಿನಿಯೋಗ ನೆರವೇರಿಸಿದರು. ದೇವಾಲಯದ ಮುಂಭಾಗದಲ್ಲಿ ಶ್ರೀರಂಗನಾಯಕಿ ಸ್ತ್ರೀ ಸಮಾಜದ ಮಹಿಳೆಯರಿಂದ ಶ್ರೀರಾಮ ಭಜನೆ, ಜಪ ತಪಗಳು ಸೇರಿದಂತೆ ಪಾರಾಯನವನ್ನು ಮಾಡಿ ನೆರೆದಿದ್ದ ಭಕ್ತರನ್ನು ರಂಜಿಸಿದರು.

ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಬೃಹತಾಕಾರದ ಕಟೌಟ್‌ಗಳು ರಾರಾಜಿಸಿದರು. ಶ್ರೀರಾಮನಿಗೆ ಪೂಜೆ ಸಲ್ಲಿಸಿ ಭಕ್ತರಿಗೆ ಮಜ್ಜಿಗೆ, ಪಾನಕ, ಕೋಸಂಬರಿ ಸೇರಿದಂತೆ ಸಿಹಿ ಹಾಗೂ ಪ್ರಸಾದವನ್ನು ರಾಮನ ಭಕ್ತರು ನೀಡುತಿದ್ದ ದೃಷ್ಯ ಸಾಮಾನ್ಯವಾಗಿತ್ತು. ಪಟ್ಟಣದ ಕಾವೇರಿ ನದಿ ಸ್ನಾನಘಟ್ಟ ಬಳಿ ರಸ್ತೆ ಬದಿ ವ್ಯಾಪಾರಿಗಳಿಂದ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಿ ದೂರದ ಊರುಗಳಿಂದ ಬಂದಿದ್ದ ಭಕ್ತರಿಗೆ ಮಜ್ಜಿಗೆ, ಪಾನಕ ನೀಡಿ ಸತ್ಕರಿಸಿದರು.

ಗಂಜಾಂನ ಪೇಟೆಬೀದಿ, ರಾಮಮಂದಿರದಲ್ಲಿ ಧ್ವನಿ ವರ್ದಕಳ ಹಾಕಿ ಶ್ರೀರಾಮನಿಗೆ ವಿಶೇಷ ಪೂಜೆಗಳು ನಡೆಯುತ್ತಿರುವುದು ಕಂಡು ಬಂತು. ಕುರಾದ್ ಬೀದಿಯ ಯುವಕರ ತಂಡದಿಂದ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನೆರದಿದ್ದ ಭಕ್ತರಿಗೆ ಬಾತು, ಮೊಸರನ್ನ, ಸಿಹಿ ವಿತರಿಸಿ, ಮಜ್ಜಿಗೆ ಪಾನಕ ನೀಡಿ ದೇವರ ಪ್ರಾರ್ಥನೆ ಮಾಡಿದರು.

ಶ್ರೀರಾಮ, ಹನುಮನ ದೇಗುಲಗಳಲ್ಲಿ ಪೂಜಾ ಕೈಂಕರ್ಯ

ಶ್ರೀರಂಗಪಟ್ಟಣ ತಾಲೂಕಿನಾದ್ಯಂತ ವಿವಿಧೆಡೆಗಳಲ್ಲಿ ಶ್ರೀರಾಮ ಮಾತ್ರವಲ್ಲದೆ ಹನುಮನ ದೇವಾಲಯಗಳಲ್ಲೂ ಸಹ ಪೂಜಾ ಕೈಂಕರ್ಯಗಳು ಮೊಳಗಿದವು.

ಗ್ರಾಮದ ಪ್ರತಿ ಮನೆಗಳಲ್ಲಿ ಮಹಿಳೆಯರು ಸೇರಿದಂತೆ ಶ್ರೀರಾಮನ ಭಕ್ತರು ಶ್ರೀರಾಮನ ಭಜನೆ, ಜಪ ತಪಗಳನ್ನು ಮಾಡಿ ಮಂತ್ರಾಕ್ಷತೆಗಳೊಂದಿಗೆ ವಿಶೇಷ ಪೂಜೆಗಳ ನೆರವೇರಿಸಿ ಹಬ್ಬದಂತೆ ಸಂಭ್ರಮಿಸಿ ಖುಷಿಪಟ್ಟರು.ತಾಲೂಕಿನ ನೆಲಮನೆ ಗ್ರಾಮದಲ್ಲಿ ಗ್ರಾಮಸ್ಥರು ಜೊತೆಗೂಡಿ ಗ್ರಾಮದ ಪಟ್ಟಾಭಿ ರಾಮನ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀರಾಮನ ಭಜನೆ ನೆರವೇರಿಸುವ ಮೂಲಕ ವಿಭಿನ್ನವಾಗಿ ಆಚರಿಸಿದರು. ಬಳಿಕ ನೆಲಮನೆ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ಭಕ್ತರಿಗೆ ಅನ್ನಸಾಂಬರ್, ಪಾಯಸ, ಮೈಸೂರು ಪಾಕ್, ಕೋಸಂಬರಿ, ಪಲ್ಯ ಸೇರಿದಂತೆ ಇತರೆ ಖ್ಯಾದ್ಯಗಳನ್ನು ಸಿದ್ದಪಡಿಸಿ ಗ್ರಾಮಸ್ಥರಿಗೆ ಉಣಬಡಿಸಿದರು. ಗ್ರಾಮದ ನಂಜೇಗೌಡ, ಶ್ರೀಕಂಠ, ಸೋಮ, ಬಾಬು, ಗುರುಪ್ರಸಾದ್, ಹರೀಶ್ ಸೇರಿದಂತೆ ಇತರರು ಇದ್ದರು.ಶ್ರೀ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ತಾಲೂಕಿನ ಬಲ್ಲೇನಹಳ್ಳಿ, ದೊಡ್ಡಪಾಳ್ಯ, ಹೊಸಹಳ್ಳಿ, ಬೆಳಗೊಳ ಸೇರಿದಂತೆ ತಾಲೂಕಿನಾದ್ಯಂತ ಶ್ರೀರಾಮನ ಭಜನೆ, ಜಪ-ತಪಗಳು, ಶ್ರೀರಾಮನ ಪರ ಘೋಷಣೆಗಳು ಕಿವಿಗೆ ಮುಟ್ಟುವಂತೆ ಮಾಡುವ ಮೂಲಕ ಸಂಭ್ರಮದಿಂದ ಆಚರಿಸಿದರು.