ಸಾರಾಂಶ
ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಮನೆಗಳ ಮುಂದೆ ರಂಗೋಲಿಯನ್ನು ಹಾಕಿ ಮನೆಗಳಿಗೆ ಮಾವಿನ ತೋರಣವನ್ನು ಕಟ್ಟಿ ಹಬ್ಬದ ರೀತಿಯಲ್ಲಿ ಅಯೋದ್ಯೆಯ ಶ್ರೀರಾಮ ಮಂದಿರ ಉಧ್ಘಾಟನೆಯನ್ನು ಸ್ವಾಗತಿಸಿದರು
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಅಯೋಧ್ಯೆಯ ರಾಮಮಂದಿರದಲ್ಲಿ ಸೋಮವಾರ ಶ್ರೀ ರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆಯ ಶುಭ ಮುಹೂರ್ತದಲ್ಲಿ ಜಿಲ್ಲೆಯಾದ್ಯಂತ ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರಗಳು ನಡೆಸಿದರು. ಚಿಕ್ಕಬಳ್ಳಾಪುರದ ದೇವಾಲಯಗಳಲ್ಲಿ ಸಹ ಹೋಮ, ಹವನಗಳು. ಪೂಜೆಗಳು ನಡೆದವು.ಬೆಳಗ್ಗೆ 8 ಗಂಟೆಗೆ ಶ್ರೀ ರಾಮನ ಜಪ 10 ಗಂಟೆಗೆ ರಾಮ ತಾರಕ ಹೋಮ ಮಧ್ಯಾಹ್ನ 12 ಗಂಟೆಗೆ ಪೂರ್ಣ ವತಿ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು. ಮನೆ ಮುಂದೆ ರಂಗೋಲಿ
ಶ್ರೀ ರಾಮ ಮಂದಿರ ಉದ್ಘಾಟನೆಯ ಅಂಗವಾಗಿ ಕಳೆದ ಮೂರುದಿನಗಳಿಂದ ನಗರದ ಎಲ್ಲಡೆ ಮತ್ತು ದೇವಾಲಗಳನ್ನು ಭಾಗವಧ್ವಜ ಮತ್ತು ಕೇಸರಿ ಬಂಟಿಂಗ್ಸ್ ಕಟ್ಟಿ, ವಿದ್ಯುತ್ ದೀಪಾಲಂಕಾರ, ಹೂ ಗಳಿಂದ ಸಿಂಗರಿಸಿದ್ದರು. ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಮನೆಗಳ ಮುಂದೆ ರಂಗೋಲಿಯನ್ನು ಹಾಕಿ ಮನೆಗಳಿಗೆ ಮಾವಿನ ತೋರಣವನ್ನು ಕಟ್ಟಿ ಹಬ್ಬದ ರೀತಿಯಲ್ಲಿ ಅಯೋದ್ಯೆಯ ಶ್ರೀರಾಮ ಮಂದಿರ ಉಧ್ಘಾಟನೆಯನ್ನು ಸ್ವಾಗತಿಸಿದರು.ನಗರದ ಸುಬ್ರಮಣ್ಯೇಶ್ವರ ದೇವಾಲಯ ಗಣಪತಿ ದೇವಾಲಯ ಬಸವೇಶ್ವರ ದೇವಾಲಯ ಕೋದಂಡರಾಮಸ್ವಾಮಿ ದೇವಾಲಯ ಮಹಾಕಾಳಿ ದೇವಾಲಯ,ಗ್ರಾಮದೇವತೆ ಜಾಲಾರಿ ಗಂಗಮ್ಮ ದೇವಾಲಯ, ಕೋವಿಡ್ ಆಸ್ಪತ್ರೆ ಆವರಣದ ಪಂಚಮುಖಿ ಆಂಜನೇಯ ಸ್ವಾಮಿ ದೇವಾಲಯ, ಹೆಚ್.ಎಸ್.ಗಾರ್ಢನ್ ಸಾಯಿ ಬಾಬಾ,ಸುಭ್ರಮಣ್ಯ,ಶನಿಮಹಾತ್ಮ ದೇವಾಲಯ ಸೇರಿದಂತೆ ನಗರದ ಮತ್ತು ಹೊರವಲಯದ ಹಾಗೂ ಗ್ರಾಮೀಣ ಭಾಗಗಗಳ ಎಲ್ಲಾ ದೇವಾಲಯಗಳಲ್ಲಿ ವಿಶೇಷವಾಗಿ ಶ್ರೀರಾಮ ಪಟ್ಟಾಭಿಷೇಕ ಹಾಗೂ ಪಾರಾಯಣ ಮತ್ತು ಬೆಳಗ್ಗೆ 7 ರಿಂದ ಭಜನೆ ಪ್ರಾರಂಭವಾಯಿತು. ಎಲ್‌ಇಡಿ ಅಳವಡಿಕೆ:ಬಲಮುರಿ ವೃತ್ತ, ಅಂಬೇಡ್ಕರ್ ವೃತ್ತದಲ್ಲಿ ಮತ್ತು ಹೆಂಜಾರಾಚಾರಿ ಜ್ಯುವೆಲರ್ಸ್ ಬಳಿಎಲ್ ಇಡಿ ಅಳವಡಿಕೆ ಮಾಡಲಾಗಿತ್ತು. ಕನ್ನಡ ಪರ ಸಂಘಟನೆಗಳು,ವರ್ತಕ ಸಂಘ, ಆಟೋ, ಕಾರು ಮಾಲಿಕರ ಮತ್ತು ಚಾಲಕರ ಸಂಘಟನೆಗಳಿಂದ ನಗರದ ಎಲ್ಲಾ ಕಡೆಗಳಲ್ಲಿ ಮತ್ತು ಎಲ್ಲಾ ದೇವಾಲಯಗಳಲ್ಲಿ ಪ್ರಸಾದ ವಿನಿಯೋಗ ಆಯೋಜನೆ ಮಾಡಿದ್ದರು.ನಗರದ ಮಹಾಕಾಳಿ ಅಮ್ಮನವರ ದೇವಾಲಯದಲ್ಲಿ ಸಂಜೆ ವಿಶೇಷವಾದ ಲಕ್ಷ ದೀಪೋತ್ಸವ ಮತ್ತು ಪ್ರಸಾದ ವಿನಿಯೋಗವನ್ನು ಏರ್ಪಡಿಸಲಾಗಿತ್ತು. ನಗರದೆಲ್ಲಡೆ ಬಾಣ ಬಿರುಸುಗಳಿಂದ ಬಾನಂಗಳದಲ್ಲಿ ಚಿತ್ತಾರ ಮೂಡಿಸಿತು. ಈ ಎಲ್ಲಾ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ಅನುಗ್ರಹಕ್ಕೆ ಪಾತ್ರರಾದರು.ಸಿಕೆಬಿ-4 ಚಿಕ್ಕಬಳ್ಳಪುರ ನಗರದ ಮಹಾಕಾಳಿ ದೇವಾಲಯದಲ್ಲಿ ವೇಶ್ಷ ಅಲಂಕಾರ ಮಾಡಿರುವುದು.