ಪೂಜೆ, ಪುನಸ್ಕಾರ ಭಾರತೀಯ ಸಂಪ್ರದಾಯದ ಆಧಾರಸ್ತಂಭ

| Published : Feb 15 2024, 01:31 AM IST

ಸಾರಾಂಶ

ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರ ಮಾತನಾಡಿ, ಪೂಜೆ, ಪುನಸ್ಕಾರ ಭಾರತೀಯ ಸಂಪ್ರದಾಯದ ಆಧಾರಸ್ತಂಭ ಎಂದಿದ್ದಾರೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಸಂಪ್ರದಾಯದಂತೆ ಪೂಜಾ ವಿಧಿ-ವಿಧಾನಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗುತ್ತದೆ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.

ರಬಕವಿ ಜೀರಗಾಳ ಪರಿವಾರದವರ ಮನೆಯಂಗಳದಲ್ಲಿ ಜರುಗಿದ ಸಮಾರಂಭದಲ್ಲಿ ಭಕ್ತರಿಂದ ಪಾದ ಪೂಜೆ ಸ್ವೀಕರಿಸಿ ಆಶೀರ್ವಚನ ನೀಡಿ, ತಂದೆ-ತಾಯಿಗಳು ಮಾಡಿದ ಆಚಾರ ವಿಚಾರಗಳನ್ನು ಮಕ್ಕಳು ಅನುಸರಿಸುತ್ತಾರೆ. ಮಕ್ಕಳು ಬಾಲ್ಯಾವಸ್ಥೆಯಲ್ಲಿರುವಾಗಲೇ ಸಂಸ್ಕೃತಿ, ಸಂಸ್ಕಾರ ನೀಡಿದರೆ ಅದು ಪಾರಂಪರಿಕವಾಗಿ ನಡೆದುಕೊಂಡು ಹೋಗುತ್ತದೆ. ಎಷ್ಟೇ ಹಣ ಗಳಿಕೆ ಮಾಡಿದರೂ ಆಧ್ಯಾತ್ಮದ ಅರಿವು ಯಾರಿಗಿರುತ್ತದೋ ಅವರಲ್ಲಿ ಧಾನ, ಧರ್ಮದ ಕಾರ್ಯಗಳು ನಡೆಯುತ್ತಿರುತ್ತವೆ. ದೇವರು ಕೊಟ್ಟ ಕಾಲಕ್ಕೆ ಧಾನ-ಧರ್ಮ ಮಾಡುತ್ತಲಿರಬೇಕು. ನೆಮ್ಮದಿ ಹಾಗೂ ಆರೋಗ್ಯವಂತ ಬದುಕು ಸಾಗಿಸಬಹುದು ಎಂದರು.

ಇಂದು ಜನರು ಆರೋಗ್ಯದತ್ತ ಗಮನ ಹರಿಸದೆ ಆಹಾರ ಹಾಗೂ ಜೀವನ ಶೈಲಿ ಮರೆಯುತ್ತಿದ್ದಾರೆ. ಆದ್ದರಿಂದ ಸಾವಯವ ಕೃಷಿ ಪದಾರ್ಥಗಳನ್ನು ಬೆಳೆಯುವುದು ಮತ್ತು ಬಳಸುವುದು ಆಗಬೇಕು. ರೈತರು ಸಹ ವಾಣಿಜ್ಯ ಬೆಳೆಗಳನ್ನು ಬೆಳೆಯುವುದು ತಪ್ಪಲ್ಲ, ಆದರೆ ಅದನ್ನೇ ಸಾವಯವ ಬೇಸಾಯದಲ್ಲಿ ಬೆಳೆಯಿರಿ ಎಂದು ಸಲಹೆ ನೀಡಿದರು.

ಶಂಕರ ಜೀರಗಾಳ, ವಿಶ್ವನಾಥ ಕೊಕಟನೂರ, ಡಾ.ಬಸವರಾಜ ಡಂಗಿ, ಡಾ.ದೀಪಾಲಿ ಡಂಗಿ, ಪ್ರವೀಣಕುಮಾರ ಪಾವಟೆ, ಡಾ. ಸಿದ್ದು ವಂಟಗುಡಿ, ರಾಜು ಗಾಣಿಗೇರ, ಡಾ.ವಿನೋದ ಮೇತ್ರಿ, ಸವಿತಾ ಜೀರಗಾಳ, ಸಾವಿತ್ರಿ ಗಾಣಿಗೇರ, ಅಶ್ವಿನಿ ಕೊಕಟನೂರ ಇತರರು ಇದ್ದರು.