ಸಾರಾಂಶ
Puja to Ilakal Shivayogi portrait on the occasion of Addiction Free Day
ಮುದಗಲ್ ಪುರಸಭೆ ಕಾರ್ಯಲಯದಲ್ಲಿ ವ್ಯಸನಮುಕ್ತ ದಿನಾಚರಣೆ ಪ್ರಯುಕ್ತ ಇಳಕಲ್ ಡಾ.ಮಹಾಂತ ಶಿವಯೋಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ನಾಡ ಕಾರ್ಯಾಲಯ ಸೇರಿ ಸರ್ಕಾರಿ ಕಚೇರಿಗಳಲ್ಲಿ ವ್ಯಸನಮುಕ್ತ ದಿನ ಆಚರಿಸಲಾಯಿತು. ಸಿಬ್ಬಂದಿ ಚನ್ನಮ್ಮಾ, ನಿಸಾರ್ ಅಲಿ, ಆರಿಫ್ ಉನ್ನಿಸಾ ಬೇಗಂ ಸೇರಿ ಪೌರ ಕಾರ್ಮಿಕರು ಇತರರು ಇದ್ದರು. ಇದಲ್ಲದೇ ತಿಮ್ಮಾಪೂರ ಕಲ್ಯಾಣಾಶ್ರದಲ್ಲಿಯೂ ಕೂಡ ವ್ಯಸನ ಮುಕ್ತ ದಿನವನ್ನು ಶ್ರಧ್ಧಾ ಭಕ್ತಿಯಿಂದ ಆಚರಿಸಲಾಯಿತು. ಮಾತೋಶ್ರೀ ವಚನ ಗೀತಮ್ಮಾ, ಶಿಕ್ಷಕರಾದ ತಿಮ್ಮಣ್ಣ ಬಿಂಗಿ, ಅನುಸೂಯಾ, ಪದ್ಮಮ್ಮಾ ಬಯ್ಯಾಪೂರ ಇದ್ದರು.
------