ತಾಲೂಕಿನ ಗುಡ್ಡೆಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಗುವಿಗೆ ಲಸಿಕೆ ಹಾಕುವ ಮೂಲಕ ಭಾನುವಾರ ಶಾಸಕ ಆರಗ ಜ್ಞಾನೇಂದ್ರ ಪಲ್ಸ್ ಪೋಲಿಯೋಗೆ ಚಾಲನೆ ನೀಡಿದರು.
ತೀರ್ಥಹಳ್ಳಿ: ತಾಲೂಕಿನ ಗುಡ್ಡೆಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಗುವಿಗೆ ಲಸಿಕೆ ಹಾಕುವ ಮೂಲಕ ಭಾನುವಾರ ಶಾಸಕ ಆರಗ ಜ್ಞಾನೇಂದ್ರ ಪಲ್ಸ್ ಪೋಲಿಯೋಗೆ ಚಾಲನೆ ನೀಡಿದರು.
ನಂತರ ಪಟ್ಟಣದ ಜೆಸಿ ಆಸ್ಪತ್ರೆಗೆ ಆಗಮಿಸಿ ತಾಲೂಕಿನಲ್ಲಿ ನಡೆದಿರುವ ಪಲ್ಸ್ ಪೊಲಿಯೋ ಬಗ್ಗೆ ಆರೋಗ್ಯಾಧಿಕಾರಿಗಳೊಂದಿಗೆ ಮಾಹಿತಿ ಪಡೆದರು.ಭಾನುವಾರದಿಂದ ಮಂಗಳವಾರದವರೆಗೆ ನಿರಂತರ ಮೂರು ದಿನಗಳ ಪರ್ಯಂತ ತಾಲೂಕಿನಾದ್ಯಂತ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಗುವುದು. ನಾಲ್ಕನೇ ದಿನ ಬುಧವಾರದಂದು ಪಟ್ಟಣ ವ್ಯಾಪ್ತಿಯಲ್ಲಿ ಪಲ್ಸ್ ಪೋಲಿಯೋ ಇರುತ್ತದೆ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದರು.ಬಾಕ್ಸ್
ಕೆಎಫ್‍ಡಿ ಒಂದು ಪ್ರಕರಣ:ಕೋಣಂದೂರಿನಲ್ಲಿ ಶನಿವಾರ 50 ವರ್ಷದ ಓರ್ವ ಮಹಿಳೆಗೆ ಮಂಗನ ಖಾಯಿಲೆ ತಗುಲಿರುವುದು ದೃಢಪಟ್ಟಿದೆ. ಕೂಲಿ ಕಾರ್ಮಿಕರಾಗಿರುವ ಈ ಮಹಿಳೆಯನ್ನು ಪಟ್ಟಣದ ಸರ್ಕಾರಿ ಜೆಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೆಸಿ ಅಸ್ಪತ್ರೆಯಲ್ಲಿ ಸೊನಲೆಯ ಓರ್ವ ಪುರುಷ ಸೇರಿದಂತೆ ಇಬ್ಬರು ಸೋಂಕಿತ ರೋಗಿಗಳಿದ್ದು ಅವರ ಆರೋಗ್ಯ ಸ್ಥಿರವಾಗಿದೆ ಎಂದು ಜೆಸಿ ಆಸ್ಪತ್ರೆ ವೈಧ್ಯಾಧಿಕಾರಿ ಡಾ.ಅರವಿಂದ್ ತಿಳಿಸಿದರು.
-----------------------------ಫೋಟೋ 21 ಟಿಟಿಎಚ್ 02: ಗುಡ್ಡೆಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಗುವಿಗೆ ಲಸಿಕೆ ಹಾಕುವ ಮೂಲಕ ಶಾಸಕ ಆರಗ ಜ್ಞಾನೇಂದ್ರ ಪಲ್ಸ್ ಪೋಲಿಯೋಗೆ ಚಾಲನೆ ನೀಡಿದರು.