ಸಾರಾಂಶ
ರಟ್ಟೀಹಳ್ಳಿ ತಾಲೂಕಿನ ಕಣವಿಸಿದ್ಗೇರಿ ಗ್ರಾಮದ ಡಾ. ಪುನೀತ್ ರಾಜಕುಮಾರ ಅವರ ಪುಣ್ಯಸ್ಮರಣೆ ಅಂಗವಾಗಿ ಡಾ. ಪುನೀತ್ ರಾಜಕುಮಾರ ಸ್ವಯಂ ಸೇವಾ ಸಂಸ್ಥೆ ವತಿಯಿಂದ ವಿವಿಧ ಸೇವಾ ಕಾರ್ಯಕ್ರಮ ಹಾಗೂ ಗರ್ಭಿಣಿಯರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ರಟ್ಟೀಹಳ್ಳಿ: ಡಾ. ಪುನೀತ್ ರಾಜಕುಮಾರ ಅವರ ಜೀವಿತಾವಧಿಯ ಸೇವಾ ಮನೋಭಾವನೆ ಹಾಗೂ ಸಮಾಜಮುಖಿ ಕಾರ್ಯಕ್ರಮಗಳು ನಮಗೆ ಸ್ಫೂರ್ತಿ ಎಂದು ಡಾ. ಪುನೀತ್ ರಾಜಕುಮಾರ ಸೇವಾ ಸಂಸ್ಥೆ ಅಧ್ಯಕ್ಷ ರಾಜು ಬಟ್ಲಕಟ್ಟಿ ಹೇಳಿದರು.
ತಾಲೂಕಿನ ಕಣವಿಸಿದ್ಗೇರಿ ಗ್ರಾಮದ ಡಾ. ಪುನೀತ್ ರಾಜಕುಮಾರ ಅವರ ಪುಣ್ಯಸ್ಮರಣೆ ಅಂಗವಾಗಿ ಡಾ. ಪುನೀತ್ ರಾಜಕುಮಾರ ಸ್ವಯಂ ಸೇವಾ ಸಂಸ್ಥೆ ವತಿಯಿಂದ ವಿವಿಧ ಸೇವಾ ಕಾರ್ಯಕ್ರಮ ಹಾಗೂ ಗರ್ಭಿಣಿಯರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪುನೀತ್ ರಾಜಕುಮಾರ ಅವರ ಸೇವಾ ಮನೋಭಾವನೆ ಅವರ ಜೀವಿತಾವಧಿಯಲ್ಲಿ ಯಾರಿಗೂ ತಿಳಿದಿರಲಿಲ್ಲ. ಅವರ ಕಾಲವಾದ ಆನಂತರ ಇಡೀ ಜಗತ್ತಿಗೆ ತಿಳಿಯುವಂತಾಯಿತು. ಅವರು ಸಮಾಜಕ್ಕೆ ನೀಡಿದ ಕೊಡುಗೆಗಳು, ಸಮಾಜಮುಖಿ ಕಾರ್ಯಕ್ರಮಗಳು ನಮಗೆ ಸ್ಪೂರ್ತಿಯಾಗಿವೆ ಎಂದರು.ಡಾ. ಪುನೀತ್ ರಾಜಕುಮಾರ ಸೇವಾ ಸಂಸ್ಥೆಯಿಂದ ಅವರ ಸಮಾಜಮುಖಿ ಕಾರ್ಯಕ್ರಮಗಳನ್ನು ಪ್ರೇರಣೆಯಾಗಿ ಪಡೆದು ಅವರ ಹೆಸರಿನಲ್ಲಿ ಫೌಂಡೇಶನ್‍ನಿಂದ ಗ್ರಾಮದಲ್ಲಿ ಅನೇಕ ಸೇವೆಗಳನ್ನು ಮಾಡುತ್ತಿದ್ದೇವೆ. ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಪ್ರತಿ ಒಂದು ವಿಷಯದಲ್ಲಿ ಕಾರ್ಯಾಗಾರ ನಡೆಸಲಾಗುತ್ತಿದೆ. ಬಡ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕಾಗಿ ಸಹಾಯಹಸ್ತ, ಶಾಲಾ ಮಕ್ಕಳಿಗೆ ನೋಟ್‍ಬುಕ್, ಪೆನ್ ವಿತರಣೆ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ನಮ್ಮ ಫೌಂಡೇಶನ್ ವತಿಯಿಂದ ಸಹಾಯಹಸ್ತ ನೀಡಲಾಗುತ್ತಿದೆ ಹಾಗೂ ಪ್ರಸ್ತುತ ವರ್ಷದ ಪುಣ್ಯಸ್ಮರಣೆ ಅಂಗವಾಗಿ ನಮ್ಮ ಗ್ರಾಮದ ಗರ್ಭಿಣಿಯರಿಗೆ ಚಿಕಿತ್ಸೆ ಹಾಗೂ ಇನ್ನಿತರ ಓಡಾಟಕ್ಕಾಗಿ ಉಚಿತವಾಗಿ ಕಾರು ವ್ಯವಸ್ಥೆ ಮಾಡಲಾಗಿದೆ ಎಂದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ವಿ.ಆರ್. ಪೂಜಾರ ಶುಭ ಹಾರೈಸಿದರು. ಪಿಡಿಒ ರಾಮು ಆಲದಕಟ್ಟಿ, ಸೇವಾ ಸಂಸ್ಥೆ ಕಾರ್ಯದರ್ಶಿ ಮಂಜುನಾಥ ಕರಿಯಣ್ಣನವರ, ಮಂಜಪ್ಪ ಮಾಳಮ್ಮನವರ, ರೇವಣಸಿದ್ದಪ್ಪ ಕರಿಯಣ್ಣನವರ, ಕೆ. ಮಹಾಂತೇಶ, ಗೀತಾ ನಾಯಕ, ಬರಮಗೌಡ ಕೋಟಿಹಾಳ್, ಕುಮಾರ ಹರಿಜನ, ಶಿವಕುಮಾರ ಪಿ., ಪ್ರಕಾಶ ಜಿ., ಪ್ರವೀಣ, ಕಣಿವೆಪ್ಪ ಬಿ., ಬೆಳಕೆರಪ್ಪ ಎಸ್., ಅಂಗನವಾಡಿ ಕಾರ್ಯಕರ್ತೆ ರೂಪಾ ಕೋಟಿಹಾಳ, ಚಂದನ ಪೂಜಾರ ಮುಂತಾದವರು ಇದ್ದರು.;Resize=(128,128))
;Resize=(128,128))