ಪುಣ್ಯ ಕ್ಷೇತ್ರ ಶ್ರೀಶೈಲ ಸರ್ವ ಧರ್ಮಗಳ ಪ್ರೇರಣೆಯ ನೆಲೆ

| Published : Aug 02 2024, 12:49 AM IST

ಪುಣ್ಯ ಕ್ಷೇತ್ರ ಶ್ರೀಶೈಲ ಸರ್ವ ಧರ್ಮಗಳ ಪ್ರೇರಣೆಯ ನೆಲೆ
Share this Article
  • FB
  • TW
  • Linkdin
  • Email

ಸಾರಾಂಶ

ಸಾರಂಗ ಮಠಕ್ಕೆ ಮಹಾನ್ ಹೋರಾಟದ ಪರಂಪರೆ ಇದೆ, ಪೀಠಧಿಪತಿಗಳಾದ ಸಾರಾಂಗಾಧರ ದೇಶಿಕೇಂದ್ರ ಶ್ರಿಗಳು ಮಠಕ್ಕೆ ಹೊಸತನ. ತುಂಬಿದ್ದಾರೆ, ಅವರಿಗೆ ದೇವರು ಆಯುಷ್ಯ, ಅರೋಗ್ಯ ಕೊಟ್ಟು ಉತ್ತಮ ಕೆಲಸ ಮಾಡಲು ಹರಸಲಿ. ಅವರ ಈ ಮಠ ಕಟ್ಟುವ ಸಾಧನೆ ಧರ್ಮಕ್ಕೆ ಮಾಡುವ ಸೇವೆ.

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಶ್ರೀಶೈಲಂ (ಆಂಧ್ರಪ್ರದೇಶ )

ದ್ವಾದಶ ಜ್ಯೋತಿರ್ ಲಿಂಗಗಳಲ್ಲಿ ಒಂದಾದ ಶ್ರೀ ಮಲ್ಲಿಕಾರ್ಜುನ ಜ್ಯೋತಿರ್ ಲಿಂಗದ ವಿಶೇಷ ನೆಲೆ, ಪ್ರಭಾವ ಹಾಗೂ ಪ್ರಖರ ಪ್ರಭೆ ಇರುವ ಕೃಷ್ಣಾ ನದಿ ತೀರದಲ್ಲಿನ ಶ್ರೀಶೈಲದ ಸಾರಂಗ ಮಠದಲ್ಲಿ ಗುರುವಾರ ಭಕ್ತರ ಭಕ್ತಿಯ ಪರಕಾಷ್ಟೇ ಉಕ್ಕೆರಿತ್ತು, ಗುರುಗಳಿಗೆ ನಮಿಸುತ್ತಾ ಭಕ್ತರು ಪವಿತ್ರ ಭಾವದಲ್ಲಿ ಮುಳುಗೆದ್ದರು. ಗುರುಗಳ ಬಳಿ ಸೇರೀದ್ದ ಭಕ್ತರ ಶೃದ್ಧೆ, ಗೌರವ ಮುಗಿಲು ಮುಟ್ಟಿತ್ತು. ಅನೇಕರು ದಂಪತಿ ಸಮೇತ ಪಾದಪೂಜೆ ನೆರವೇರಿಸಿದರು.

ಆಂಧ್ರಪ್ರದೇಶ ನಂದ್ಯಾಲ ಜಿಲ್ಲೆ ಶ್ರೀಶೈಲಂನ ಜಗದ್ಗುರು ಸಾರಂಗಮಠದಲ್ಲಿ ಆ.1ರಂದು ಗುರುವಾರ ಬೆಳಗ್ಗೆ 10 ಗಂಟೆಗೆ ಕಂಡು ಬಂದ ನೋಟವಿದು. ಗುರುವಾರ ಇಡೀ ದಿನ ಗುರುವಂದನೆ, ವಸತಿ ಸಮುಚ್ಚಯ ಹಾಗೂ ಬಯಲು ಗ್ರಂಥಾಲಯ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ, ಆಂಧ್ರ, ತೆಲಂಗಾಣ ರಾಜ್ಯದ ನೂರಾರು ಭಕ್ತರು ಪಾಲ್ಗೊಂಡಿದ್ದರು. ಭಜನಾಧಿಗಲ್ಲಿ ಭಾಗವಹಿಸಿದ್ದರು.

ಐನಪುರ್ ಸ್ವಾಮಿಗಳು ಗುರು ವಂದನೆ ಸಂಕಲ್ಪ ನೆರವೇರಿಸಿದರು. ನಿಡುಮಾಮಿಡಿ ಮಠದ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲ ದೇಶೀಕೇಂದ್ರ ಸ್ವಾಮೀಜಿ ಗುರುವಂದನೆ ಸಲ್ಲಿಸಿದರು. ಸಾರಂಗ ಧರ ದೇಶಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು, ಜಗದ್ಗುರು ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಮಲ್ಲ ಶಿವಾಚಾರ್ಯರು, ಶಿವಾನಂದ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಮಹಾಂತ ಸ್ವಾಮೀಜಿ, ಸೋಮಶೇಖರ ಶಿವಾಚಾರ್ಯರು, ಅಭಿನವ ಬಸವಲಿಂಗ ಸ್ವಾಮೀಜಿ, ಸಿದ್ಧಲಿಂಗ ಶಿವಾಚಾರ್ಯರು ಪಾಲ್ಗೊಂಡಿದ್ದರು. ಎಚ್‌ಕೆಇ ನಿರ್ದೇಶಕ ಅರುಣಕುಮಾರ ಎಂ.ವೈ.ಪಾಟೀಲ್, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಜು ಲೇಂಗಟಿ, ಶರಣಬಸಪ್ಪ ಬೆಣ್ಣೂರ್, ಶಹಪುರ್ ಗುತ್ತಿಗೆದಾರರಾದ ದೇವೇಂದ್ರಪ್ಪ ಗೌಡ ಗೌಡಗೇರಾ ಸೇರಿ ಅನೇಕರು ಭಾಗವಹಿಸಿದ್ದರು.

ತೆಲುಗನ್ನಡ ನೆಲದಲ್ಲಿ ಬಯಲು ಗ್ರಂಥಾಲಯ: ಮ.೧೨ಕ್ಕೆ ದೇವಿಂದ್ರಪ್ಪಗೌಡ ಗೌಡಗೇರ ವಸತಿ ಸಮುಚ್ಚಯ ಹಾಗೂ ಬಯಲು ಗ್ರಂಥಾಲಯ ಉದ್ಘಾಟನಾ ಸಮಾರಂಭ ವೈಭವದಿಂದ ನಡೆಯಿತು. ಜಗದ್ಗುರು ವೀರಭದ್ರ ಚನ್ನಮಲ್ಲ ದೇಶೀಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದ ಸಮಾರಂಭದಲ್ಲಿ ಜಗದ್ಗುರು ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ವೀರಭದ್ರ ಚೆನ್ನಮಲ್ಲ ಶ್ರಿಗಳು, ಅರುಣಕುಮಾರ್ ಪಾಟೀಲ್ ವಸತಿ ಸಮುಚ್ಚಯ ಉದ್ಘಾಟಿಸಿದರು. ನಂತರ ಸನ್ಮಾನ ಸ್ವೀಕರಿಸಿ ಮಾತಾಡಿದ ಗೌಡಗೇರಾ ದೇವಿಂದ್ರಪ್ಪ ಅವರು, ತಮಗೆ ಸಾರಂಗ ಶ್ರಿಗಳು ಶ್ರೀಶೈಲದಲ್ಲಿ ಗೌರವ ಸ್ವೀಕಾರ ನೀಡಿದ್ದಾರೆ. ಅದಕ್ಕೇ ತಾವು ಋಣಿ, ಮಠಕ್ಕೆ ಮುಂದಿನ ದಿನಗಳಲ್ಲಿ ಹೆಚ್ಚು ನೆರವು ನೀಡುವ ಶಕ್ತಿ ತಮಗೇ ಗುರುಗಳು, ಭಗವಂತ ಕರುಣಿಸಲಿ ಎಂದರು.

ಬಯಲು ಗ್ರಂಥಾಲಯ ರೂವಾರಿ ಸುಭಾಷ್ ಬಣಗಾರ್ ಇದ್ದರು. ಇವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಯ್ತು. ನಿತ್ಯ ಕನ್ನಡ ಪತ್ರಿಕೆಗಳು ಹಾಗೂ ವಾರ ಪತ್ರಿಕೆಗಳು ಕಲಬುರಗಿಯಿಂದ ಬಸ್‌ ಮೂಲಕ ಕಳುಹಿಸಿ ಶ್ರೀಶೈಲಕ್ಕೆ ಬರುವ ಭಕ್ತರಿಗೆ ಸುದ್ದಿ, ಲೇಖನ ಓದಲು ಅನುಕೂಲ ಮಾಡುವ ಉದ್ದೇಶವೇ ಬಯಲು ಗ್ರಂಥಾಲಯ ಎಂದರು.

ಪ್ರಥಮ ದರ್ಜೆ ಗುತ್ತಿಗೆದಾರ ದೇವೀಂದ್ರಪ್ಪಗೌಡ ಗೌಡಗೇರ ಅವರಿಗೆ ವಿಶೇಷ ಗೌರವ ಸಲ್ಲಿಸಲಾಯಿತು. ಭಾಲ್ಕಿ ಕಿರಿಯ ಪಟ್ಟ ಶೀಗಳು ಮಾತನಾಡುತ್ತ, ಬಸವಾದಿ ಶರಣರ ಪವಿತ್ರ ನೆಲದತ್ತ ಜಗತ್ತು ನೋಡುತ್ತಿದೆ. ನಾವು ಬಸವ ವಚನ ದಾರಿಗುಂಟ ಸಾಗಬೇಕಿದೆ. ಭಕ್ತಿ, ಗುರು, ಹಿರಿಯರು, ದೇವರ ಭಯ ಎಲ್ಲರಿಗೂ ಇರಲಿ ಎಂದು ಹಾರೈಸಿದರು.

ಕಲಬುರಗಿಯ ದೇವಿ, ಮಹಡೆವ ನಗರ, ಜೇವರ್ಗಿ ಬಸವ ನಗರದಿಂದ ಬಂದ ಭಕ್ತರಿಗೆ ಜಗದ್ಗುರು ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಗೌರವಿಸಿ ಹರಸಿದರು.

ಮಹಾನ್ ಪುಣ್ಯ ಭೂಮಿ ಶ್ರೀಶೈಲ ಸಕಲ ಧರ್ಮಗಳಿಗೆ ಪ್ರೇರಣೆ : ನೀಡುಮಾಮಿಡಿ ಶ್ರೀ

ಶೈವ ವೈಷ್ಣವ, ಜೈನ ಬೌದ್ಧ ಶಾಕ್ತ, ವೀರಶೈವ ಲಿಂಗಾಯತ ಸೇರಿದಂತೆ ಇರುವ ಧರ್ಮಗಳಲ್ಲಿನ ಮಹಾನ್ ಸಾಧಕರಿಗೆ ಶ್ರೀಶೈಲ ಪುಣ್ಯ ಭೂಮಿ ಎಂದು ನೀಡುಮಾಮಿಡಿ ಶ್ರಿಗಳು ಹೇಳಿದರು.

ಗಣಪತಿ, ವೀರಭದ್ರ, ಶಿವಾ, ಇವರೆಲ್ಲರ ಜನ್ಮ ಭೂಮಿ, ಆರ್ಯ ದ್ರಾವಿಡರ ಸಮನ್ವಯ ಭೂಮಿ, ಸೂರ್ಯ ಚಂದ್ರರ ಸಮನ್ವಯಭೂಮಿ, ಶೈವರ ಮುಖ್ಯ ಭೂಮಿ, ಉತ್ತರದಲ್ಲಿ ಹಾರ, ದಕ್ಷಿಣದಲ್ಲಿ ಶಿವ ಎಂದು ಶ್ರಿಗಳು ನುಡಿದರು.

ಸಾರಂಗ ಮಠಕ್ಕೆ ಮಹಾನ್ ಹೋರಾಟದ ಪರಂಪರೆ ಇದೆ, ಪೀಠಧಿಪತಿಗಳಾದ ಸಾರಾಂಗಾಧರ ದೇಶಿಕೇಂದ್ರ ಶ್ರಿಗಳು ಮಠಕ್ಕೆ ಹೊಸತನ. ತುಂಬಿದ್ದಾರೆ, ಅವರಿಗೆ ದೇವರು ಆಯುಷ್ಯ, ಅರೋಗ್ಯ ಕೊಟ್ಟು ಉತ್ತಮ ಕೆಲಸ ಮಾಡಲು ಹರಸಲಿ. ಅವರ ಈ ಮಠ ಕಟ್ಟುವ ಸಾಧನೆ ಧರ್ಮಕ್ಕೆ ಮಾಡುವ ಸೇವೆ ಎಂದು ಸಾರಂಗ ಧರ ಶ್ರೀಗಳ ಶ್ರೀಶೈಲದಲ್ಲಿನ ಮಹಾ ಸಾಧನೆಯನ್ನು ಕೊಂಡಾಡಿದರು.