ದಾಬಸ್‍ಪೇಟೆ: ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ವತಿಯಿಂದ ನೆಲಮಂಗಲ ತಾಲೂಕಿನಲ್ಲಿ ಬೆಂಬಲ ಬೆಲೆಗೆ ರಾಗಿ ಖರೀದಿ ಪ್ರಕ್ರಿಯೆ ಆರಂಭವಾಗಿದ್ದು, ನೋಂದಣಿ ಮಾಡಿಕೊಂಡಿರುವ ರೈತರು ಟ್ರ್ಯಾಕ್ಟರ್ ಹಾಗೂ ಇತರೆ ಗೂಡ್ಸ್ ವಾಹನಗಳಲ್ಲಿ ರಾಗಿ ತುಂಬಿಕೊಂಡು ಕೆಂಪಲಿಂಗನಹಳ್ಳಿ ರಸ್ತೆಯಲ್ಲಿರುವ ರಾಗಿ ಖರೀದಿ ಕೇಂದ್ರದಲ್ಲಿ ಸಾಲುಗಟ್ಟಿ ನಿಲ್ಲುವಂತಾಗಿದೆ
ದಾಬಸ್‍ಪೇಟೆ: ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ವತಿಯಿಂದ ನೆಲಮಂಗಲ ತಾಲೂಕಿನಲ್ಲಿ ಬೆಂಬಲ ಬೆಲೆಗೆ ರಾಗಿ ಖರೀದಿ ಪ್ರಕ್ರಿಯೆ ಆರಂಭವಾಗಿದ್ದು, ನೋಂದಣಿ ಮಾಡಿಕೊಂಡಿರುವ ರೈತರು ಟ್ರ್ಯಾಕ್ಟರ್ ಹಾಗೂ ಇತರೆ ಗೂಡ್ಸ್ ವಾಹನಗಳಲ್ಲಿ ರಾಗಿ ತುಂಬಿಕೊಂಡು ಕೆಂಪಲಿಂಗನಹಳ್ಳಿ ರಸ್ತೆಯಲ್ಲಿರುವ ರಾಗಿ ಖರೀದಿ ಕೇಂದ್ರದಲ್ಲಿ ಸಾಲುಗಟ್ಟಿ ನಿಲ್ಲುವಂತಾಗಿದೆ.
1,10,545 ಕ್ವಿಂಟಲ್ ರಾಗಿ ನೋಂದಣಿ:ಫೆ.16ರಿಂದ ನೆಲಮಂಗಲದ ಕೆಂಪಲಿಂಗನಹಳ್ಳಿ ರಾಗಿ ಖರೀದಿ ಕೇಂದ್ರದ ಆವರಣದಲ್ಲಿ ನೋಂದಣಿ ಮಾಡಿರುವ ರೈತರಿಗೆ ರಾಗಿ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. 2025-26ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ನೆಲಮಂಗಲ ತಾಲೂಕಿನಲ್ಲಿ 5619 ರೈತರಿಂದ 1,10,545 ಕ್ವಿಂಟಲ್ ರಾಗಿ ನೋಂದಣಿ ಮಾಡಿಕೊಳ್ಳಲಾಗಿದೆ.
ಅಗತ್ಯ ಸೌಲಭ್ಯಗಳ ವ್ಯವಸ್ಥೆ:ರೈತರ ಕಷ್ಟವನ್ನು ಮನಗಂಡು ಶಾಸಕ ಶ್ರೀನಿವಾಸ್ ಅವರು ಕಳೆದ ಮೂರು ವರ್ಷದಿಂದ ರಾಗಿ ಖರೀದಿ ಕೇಂದ್ರಕ್ಕೆ ಬರುವ 20 ಸಾವಿರಕ್ಕೂ ಹೆಚ್ಚು ರೈತರಿಗೆ ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ, ರಾತ್ರಿ ಊಟ, ಜತೆಗೆ ಕುಡಿಯುವ ನೀರು ಹಾಗೂ ತಾತ್ಕಾಲಿಕ ಶೌಚಾಲಯದ ವ್ಯವಸ್ಥೆ ಕಲ್ಪಿಸಲಾಗಿದೆ. ನೆರಳಿಗಾಗಿ ಶಾಮಿಯಾನ, ರಾತ್ರಿ ವೇಳೆ ರಾಗಿ ಖರೀದಿ ಕೇಂದ್ರದಲ್ಲಿ ತಂಗುವ ಹಿನ್ನೆಲೆ ಬೆಳಕಿನ ವ್ಯವಸ್ಥೆ ಮಾಡಲಾಗಿದೆ.
ರೈತರಿಗೆ ಅನುಕೂಲ:ರಾಗಿ ಖರೀದಿ ಆರಂಭಿಸಿರುವುದರಿಂದ ರೈತರು ಟ್ರ್ಯಾಕ್ಟರ್, ಟಾಟಾ ಎಸಿಗಳಲ್ಲಿ ರಾಗಿ ಮೂಟೆಗಳನ್ನು ತರಲಿದ್ದಾರೆ. ರೈತರ ಜೊತೆ ಚಾಲಕರು, ಕೂಲಿಯವರು ಸಹ ಇರಲಿದ್ದು ರಾಗಿ ಖರೀದಿ ಕೇಂದ್ರಗಳಲ್ಲಿ ಸರ್ವರ್ ಸಮಸ್ಯೆ, ಹೆಚ್ಚು ರೈತರು ಆಗಮಿಸುವ ಕಾರಣ ಸಮಯಕ್ಕೆ ಸರಿಯಾಗಿ ಖರೀದಿಸಲು ಕಷ್ಟವಾಗಲಿದ್ದು, ಕನಿಷ್ಠ ನಾಲೈದು ದಿನದವರೆಗೂ ರೈತರು ರಾಗಿ ಮೂಟೆಗಳ ಬಳಿಯೇ ತಂಗಲಿದ್ದು, ಐದಾರು ಸಾವಿರ ಖರ್ಚು ಆಗಲಿದೆ. ಶಾಸಕರು ಊಟ, ನೀರು, ನೆರಳು, ಬೆಳಕು ವ್ಯವಸ್ಥೆ ಮಾಡಿರುವುದು ರೈತರಿಗೆ ಅನುಕೂಲವಾಗಿದೆ.
ಕೋಟ್............ನಾನು ಕ್ಷೇತ್ರದಲ್ಲಿ ಪ್ರವಾಸ ಮಾಡುವಾಗ ರಾಗಿ ಖರೀದಿ ಕೇಂದ್ರದಲ್ಲಿನ ಸಮಸ್ಯೆ ಬಗ್ಗೆ ಮನಗಂಡು ಊಟದ ವ್ಯವಸ್ಥೆ ಮಾಡಲಾಗಿತ್ತು. ರೈತರ ಆಶೀರ್ವಾದದಿಂದ ನಾನು ಶಾಸಕನಾಗಿದ್ದು, ನಂತರವೂ ಖರೀದಿ ಕೇಂದ್ರದಲ್ಲಿ ರೈತರಿಗೆ ಸೌಲಭ್ಯ ಒದಗಿಸಲಾಗಿದೆ. ಸದಾ ರೈತರ ಸಂಕಷ್ಟಕ್ಕೆ ಸ್ಪಂದಿಸುವೆ.
-ಎನ್.ಶ್ರೀನಿವಾಸ್, ಶಾಸಕ, ನೆಲಮಂಗಲಪೋಟೋ 7 : ರಾಗಿ ಖರೀದಿ ಕೇಂದ್ರಕ್ಕೆ ಆಗಮಿಸಿದ ನೂರಾರು ಟ್ರ್ಯಾಕ್ಟರ್‌ಗಳು.
(ಕೆಳಗಿನ ಫೋಟೋವನ್ನು ಪ್ಯಾನಲ್‌ನಲ್ಲಿ ಬಳಸಿ)ಪೋಟೋ 8 : ನೆಲಮಂಗಲ ತಾಲೂಕಿನಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಆರಂಭಿಸಿರುವ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಕೇಂದ್ರಕ್ಕೆ ಬರುವ ರೈತರಿಗಾಗಿ ಶಾಸಕ ಶ್ರೀನಿವಾಸ್ ಅವರಿಂದ ಊಟ, ತಿಂಡಿ, ನೆರಳು, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿರುವುದು.
ಪೋಟೋ 9 : ನೆರಳಿನ ವ್ಯವಸ್ಥೆ ಮಾಡಿರುವುದು