ಮನುಷ್ಯನ ಅಂತರಾಳದ ಶುದ್ಧೀಕರಣವೇ ಪುರಾಣದ ಸದುದ್ದೇಶ

| Published : Nov 03 2025, 02:30 AM IST

ಮನುಷ್ಯನ ಅಂತರಾಳದ ಶುದ್ಧೀಕರಣವೇ ಪುರಾಣದ ಸದುದ್ದೇಶ
Share this Article
  • FB
  • TW
  • Linkdin
  • Email

ಸಾರಾಂಶ

ತಳಕಲ್ಲ ಗ್ರಾಮಸ್ಥರು ಸ್ಥಳೀಯ ಅನ್ನದಾನಿಶ್ವರ ಮಠದ ಅಭಿವೃದ್ಧಿ ಕೇವಲ ಒಂದೇ ವರ್ಷದಲ್ಲಿ ಅತ್ಯಂತ ಭಕ್ತಿಯಿಂದ ಮಾಡಿದ್ದಾರೆ.

ಕುಕನೂರು: ಮನುಷ್ಯನ ಅಂತರಾಳದ ಶುದ್ಧೀಕರಣವೇ ಪುರಾಣದ ಸದುದ್ದೇಶ ಎಂದು ಕುಕನೂರಿನ ಅನ್ನದಾನೀಶ್ವರ ಶಾಖಾಮಠದ ಶ್ರೀಮಹಾದೇವ ಸ್ವಾಮೀಜಿ ಹೇಳಿದರು.

ತಾಲೂಕಿನ ತಳಕಲ್ ಗ್ರಾಮದ ಮುಂಡರಗಿ ಅನ್ನದಾನಿಶ್ವರ ಶಾಖಾಮಠದ ಜಾತ್ರಾಮಹೋತ್ಸವದ ನಿಮಿತ್ತ ಆರಂಭಗೊಂಡ ಕಲಬುರ್ಗಿ ಶ್ರೀ ಶರಣಬಸವೇಶ್ವರ ಪುರಾಣ ಉದ್ಘಾಟಿಸಿ ಮಾತನಾಡಿದ ಅವರು, ಶರಣರ ನಡೆ-ನುಡಿಗಳು ಮಾನವ ಜೀವನಕ್ಕೆ ಮಾರ್ಗದರ್ಶನದ ಶಕ್ತಿಯಾಗಿದೆ.ಗುರುತತ್ವ, ಸತ್ಯ, ತಾಳ್ಮೆ, ಪ್ರೀತಿ, ಸಹನೆ, ಸಮಾನತೆ, ದೈವಭಕ್ತಿದ ಸಮ್ಮಿಶ್ರಣವೇ ಶರಣರ ಬದುಕಿನ ಮೂಲಾಧಾರ. ಶರಣರು ತಮ್ಮ ಜೀವನ ಕೇವಲ ತ್ಯಾಗಮಯವನ್ನಾಗಿಸದೆ, ಸಮಾಜಮುಖಿ ಮೌಲ್ಯ ಅಳವಡಿಸಿಕೊಂಡು ಬದುಕಿನ ಮಾದರಿ ತೋರಿಸಿದ್ದಾರೆ ಎಂದರು.

ಬೆಟಗೇರಿ ಗ್ರಾಮದ ಮುಖಂಡ ಬಸವರೆಡ್ಡಿ ಮಾತನಾಡಿ, ತಳಕಲ್ಲ ಗ್ರಾಮಸ್ಥರು ಸ್ಥಳೀಯ ಅನ್ನದಾನಿಶ್ವರ ಮಠದ ಅಭಿವೃದ್ಧಿ ಕೇವಲ ಒಂದೇ ವರ್ಷದಲ್ಲಿ ಅತ್ಯಂತ ಭಕ್ತಿಯಿಂದ ಮಾಡಿದ್ದಾರೆ. ಧರ್ಮ ಮತ್ತು ಸದಾಚಾರ ಅನುಸರಿಸಿದರೆ, ಅದು ನಮ್ಮನ್ನು ಸಂಕಷ್ಟಗಳಿಂದ ರಕ್ಷಿಸುತ್ತದೆ ಎಂದರು.

ಪುರಾಣ ಪ್ರವಚನಕಾರ ಕುಮಾರ ಶಾಸ್ತ್ರಿ ತೊಳಲಿ ಮಾತನಾಡಿ, ಶರಣರ ಪುರಾಣ ಕೇಳುವುದರಿಂದ ಮಾನಸಿಕ ನೆಮ್ಮದಿ ಸಿಗಲು ಸಾಧ್ಯ ಎಂದರು.

ಪ್ರಮುಖರಾದ ಶಶಿಧರಯ್ಯ ಅರಲೆಲೆಮಠ, ಹಂಚ್ಯಾಲಪ್ಪ ಚಿಲವಾಡಿಗಿ, ಪಕ್ಕಪ್ಪ ಮುರಿಗಿ, ಮುದಿಯಪ್ಪ ಯೊಗೇಮ್ಮನವರ, ಮಲ್ಲಪ್ಪ ಬಂಗಾರಿ, ಶಿವಪ್ಪ ಬ್ಯಾಳಿ, ಶೇಖಪ್ಪ ಕರ್ಜಗಿ, ಪಕ್ಕಪ್ಪ ಅಳವಂಡಿ, ಮಲ್ಲಯ್ಯ, ರಾಮಣ್ಣ ನಿಟ್ಟಾಲಿ, ಬೆಟಗೇರಿ ಗ್ರಾಮದ ಮುತ್ತಯ್ಯ ಹಿರೇಮಠ, ಸೋಮಪ್ಪ ಮತ್ತೂರು, ಪ್ರಭು ಶಿವಸಿಂಪರ, ಬಸವರಾಜ ಕುರಹಟ್ಟಿ, ವೆಂಕರಡ್ಡಿ ಕವಲೂರ ಮತ್ತು ಇತರರು ಇದ್ದರು.