ಶರಣರ ವಿಚಾರ ತಲುಪಿಸುವ ಉದ್ದೇಶ: ಕೆ.ವಿರೂಪಾಕ್ಷಪ್ಪ

| Published : Jul 23 2025, 04:08 AM IST / Updated: Jul 23 2025, 04:09 AM IST

ಸಾರಾಂಶ

ಹನ್ನೆರಡನೇ ಶತಮಾನದ ಬಸವಾದಿ ಶರಣರ ವಿಚಾರಧಾರೆಗಳನ್ನು ಜನಮಾನಸಕ್ಕೆ ತಲುಪಿಸುವ ವಿಶೇಷ ಅಭಿಯಾನದ ಕಾರ್ಯಕ್ರಮವೇ ಶ್ರಾವಣ ಸಂಜೆ ಶರಣರ ಸಂದೇಶ ಕಾರ್ಯಕ್ರಮ ಎಂದು ಕಡೂರು ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಕಡೂರು

ಹನ್ನೆರಡನೇ ಶತಮಾನದ ಬಸವಾದಿ ಶರಣರ ವಿಚಾರಧಾರೆಗಳನ್ನು ಜನಮಾನಸಕ್ಕೆ ತಲುಪಿಸುವ ವಿಶೇಷ ಅಭಿಯಾನದ ಕಾರ್ಯಕ್ರಮವೇ ಶ್ರಾವಣ ಸಂಜೆ ಶರಣರ ಸಂದೇಶ ಕಾರ್ಯಕ್ರಮ ಎಂದು ಕಡೂರು ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ ಹೇಳಿದರು.

ಪಟ್ಟಣದ ಯಳನಾಡು ಮಹಾಸಂಸ್ಥಾನ ಮಠದ ಆವರಣದಲ್ಲಿ ಕಡೂರು ತಾಲೂಕು ಶರಣ ಸಾಹಿತ್ಯ ಪರಿಷತ್ತು, ತಾಲೂಕು ಕದಳಿ ಮಹಿಳಾ ವೇದಿಕೆ ಮತ್ತು ಹೋಬಳಿ ಘಟಕಗಳು ಹಾಗೂ ಯಳನಡು ಮಹಾಸಂಸ್ಥಾನ ಮಠದ ಸಂಯುಕ್ತಾಶ್ರಯದಲ್ಲಿ ನಡೆಯುವ ಶ್ರಾವಣ ಸಂಜೆ ಶರಣರ ಸಂದೇಶ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿವರ್ಷದಂತೆ ಜು.25 ರಿಂದ ಆ.22 ರವರೆಗೆ ಕಡೂರು ತಾಲ್ಲೂಕಿನ ಆಯ್ದ 29 ಸ್ಥಳಗಳಲ್ಲಿ ಪ್ರತಿ ದಿನ ಸಂಜೆ 12ನೇ ಶತಮಾನದ ಬಸವಾದಿ ಶರಣರ ವಿಚಾರಧಾರೆಗಳನ್ನು ಉಪನ್ಯಾಸ ಮಾಲಿಕೆಯ ಮೂಲಕ ಜನಮಾನಸಕ್ಕೆ ಮುಟ್ಟಿಸುವ ಕೆಲಸವನ್ನು ಈ ಕಾರ್ಯಕ್ರಮದಲ್ಲಿ ಮಾಡಲಾಗುವುದು ಎಂದರು.

ಬಡವ-ಬಲ್ಲಿದನೆಂಬ ವರ್ಗ ಭೇದ, ಗಂಡು- ಹೆಣ್ಣು ಎಂಬ ಲಿಂಗ ಭೇದ, ಮೇಲು-ಕೀಳು ಎಂಬ ಜಾತಿಭೇದ ಆಳು - ಅರಸ ಎಂಬ ಅಸಮಾನತೆ ತೊಡೆದು ಸಮ-ಸಮಾಜದ ನಿರ್ಮಾಣಕ್ಕೆ ಕಂಕಣಬದ್ಧರಾಗಿ ನಿಂತವರು 12ನೇ ಶತಮಾನದ ಬಸವಾದಿ ಶರಣರು. ಅಜ್ಞಾನ,ಮೂಢನಂಬಿಕೆ, ಅಂದ ಶ್ರದ್ಧೆ, ಕಂದಾಚಾರ, ಗಳನ್ನು ಹೋಗಲಾಡಿಸಿ ಜನರಲ್ಲಿ ವೈಚಾರಿಕ ಪ್ರಜ್ಞೆಯನ್ನು ಮೂಡಿಸಿದ ಆ ಎಲ್ಲ ಶರಣರ ವಿಚಾರಗಳನ್ನು ಈ ಕಾರ್ಯಕ್ರಮಗಳಲ್ಲಿ ತಿಳಿಸಲಾಗುವುದು. ಈ ಕಾರ್ಯಕ್ರಮದಲ್ಲಿ ವಚನ - ವಾಚನ-ವ್ಯಾಖ್ಯಾನ, ಸಂವಾದ, ವಚನ ಗೀತ, ಗಾಯನ ಹಾಗೂ ವಚನ ನೃತ್ಯ ರೂಪಕ ಕಾರ್ಯಕ್ರಮಗಳು ಈ ಕಾರ್ಯಕ್ರಮದ ವಿಶೇಷವಾಗಿವೆ ಎಂದರು.

ಉದ್ಘಾಟನಾ ಸಮಾರಂಭ ಬೀರೂರಿನ ಶ್ರೀಮರುಳಸಿದ್ದೇಶ್ವರ ಗದ್ದುಗೆ ಆವರಣದಲ್ಲಿ ಮತ್ತು ಸಮಾರೋಪ ಸಮಾರಂಭವು ಜಿ.ತಿಮ್ಮಾಪುರ ಗ್ರಾಮದಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಸಭೆಯ ಸಾನ್ನಿಧ್ಯ ವಹಿಸಿದ್ದ ಯಳನಡು ಶ್ರೀಮಠದ ಶ್ರೀ ಜ್ಞಾನಪ್ರಭು ಸಿದ್ಧರಾಮ ದೇಶೀಕೇಂದ್ರ ಸ್ವಾಮೀಜಿ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ, ಇದೊಂದು ಅರ್ಥಪೂರ್ಣ ಮತ್ತು ವಿಶೇಷ ಕಾರ್ಯಕ್ರಮ ಜನರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಶಿಸಿದರು.

ಶ. ಸಾ.ಪ ಕೋಶಾಧ್ಯಕ್ಷ ಹೊಸೂರು ಪುಟ್ಟರಾಜು, ಗೌರವಾಧ್ಯಕ್ಷ ಕೆ.ಬಿ.ಬಸವರಾಜಪ್ಪ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸುಜಾತ ಜಡೆಮಲ್ಲಪ್ಪ ಕಾರ್ಯದಶಿ೯ ಉಮಾ ಬಸವರಾಜ್, ಮೋಹನ್ ಕುಮಾರ್ ಹೋಬಳಿ ಅಧ್ಯಕ್ಷರುಗಳಾದ ಶಿವಲಿಂಗಪ್ಪ, ಜಿ.ಟಿ. ರಾಜಶೇಖರ್, ಅನಿಲ್ ಕುಮಾರ್, ರುದ್ರಪ್ಪ, ಜಾಗತಿಕ ಲಿಂಗಾಯಿತ ಮಹಾಸಭಾದ ಜಿಲ್ಲಾಧ್ಯಕ್ಷ ಗಂಗಾಧರ ಶಿವಪುರ ತಾಲ್ಲೂಕಾಧ್ಯಕ್ಷ ಹೊಗರೆಹಳ್ಳಿ ಗಣೇಶಣ್ಣ, ಸಿರಿಗನ್ನಡ ವೇದಿಕೆಯ ಜಿಲ್ಲಾಧ್ಯಕ್ಷ ಎಂ.ಆರ್.ಪ್ರಕಾಶ್ ಮತ್ತು ಶಸಾಪ ಪದಾಧಿಕಾರಿಗಳಾದ ಜಿ.ಬಿ. ಆನಂದಮೂರ್ತಿ, ಹಿರೇನಲ್ಲೂರು ಶಾಂತಕುಮಾರ್, ಶೈಲಾಶಿವಣ್ಣ,ವೀಣಾಈಶ್ವರಪ್ಪ, ಪುಷ್ಪ ಸುಬ್ರಮಣ್ಯ, ಬಿ.ಎಂ. ಶಾಂತಪ್ಪ, ಅನಿತಾ, ಮಮತ ಮಲ್ಲಿಕಾರ್ಜುನ್ ಮುಂತಾದವರು ಭಾಗವಹಿಸಿದ್ದರು.