ಹರಿಹರ: ನಗರದ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ನಡೆದ ಟ್ರಸ್ ಸಭೆಯಲ್ಲಿ ವಿವಾದ ವೇಳೆ ನಡೆದ ತಳ್ಳಾಟದಿಂದ ಅಸ್ವಸ್ತಗೊಂಡ ಆಡಳಿತ ಅಧಿಕಾರಿ ಡಾ. ಎಚ್.ಪಿ. ರಾಜಕುಮಾರ್‌ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದ ಘಟನೆ ನಡೆದಿದೆ.

ಪಂಚಮಸಾಲಿ ಮಠದ ಆವರಣದಲ್ಲಿ ಮಧ್ಯಾಹ್ನ 3 ಗಂಟೆಗೆ ಟ್ರಸ್ಟ್ ಸರ್ವ ಸದಸ್ಯರ ಸಭೆ ಆರಂಭವಾಗಿತ್ತು. ಆರಂಭದಲ್ಲಿ ಹಲವು ವರ್ಷಗಳ ಹಿಂದೆ ಸರ್ಕಾರದಿಂದ ಹಣ ಬಿಡುಗಡೆ ಆಗಿರುವ ವಿಚಾರಕ್ಕೆ ಸಂಬಂಧಿಸಿದಂತೆ, ಲೆಕ್ಕಪತ್ರಗಳ ಬಗ್ಗೆ ಮಾಹಿತಿಯನ್ನು ಭಕ್ತರು ಕೇಳುತ್ತಿದ್ದರು. ಲೆಕ್ಕಪತ್ರ ನೀಡುವಂತೆ ಕೆಲವು ಟ್ರಸ್ಟ್ ಸದಸ್ಯರು ಮತ್ತು ಆಡಳಿತ ಅಧಿಕಾರಿಗಳು ಸಭೆ ಮುಂದೆ ಪ್ರಸ್ತಾಪ ಮಾಡಿದ್ದಾರೆ. ಈ ವಿಚಾರಕ್ಕೆ ಮಾತಿನ ಚಕಮಕಿ ನಡೆದು ಆಡಳಿತ ಅಧಿಕಾರಿ ಡಾ. ಎಚ್.ಪಿ‌. ರಾಜಕುಮಾರ ಆರೋಗ್ಯದಲ್ಲಿ ವ್ಯತ್ಯಾಸವಾಯಿತು. ಕೂಡಲೇ ಅವರನ್ನು ಗಡಿನಾಡು ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ್ ಮತ್ತು ಎಚ್.ಪಿ. ಬಾಬಣ್ಣ ಅವರು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಆಡಳಿತ ಅಧಿಕಾರಿ ಡಾ. ಎಚ್.ಪಿ. ರಾಜಕುಮಾರ ಅವರು ಗುತ್ತೂರು ಗ್ರಾಮಾಂತರ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಪಿ.ಡಿ. ಶಿರೂರು, ಹಾವೇರಿ ಮಹೇಶ್, ಡಾ. ವೀರಪುರ, ಡಾ ರಾಜಕುಮಾರ ಕುಟುಂಬದ ಸದಸ್ಯರು ಮತ್ತು ಸಂಬಂಧಿಗಳು ಇದ್ದರು.

- - -

-10 HRR05: