ಸಾರಾಂಶ
ಮಹನೀಯರು ಮತ್ತು ಮಹರ್ಷಿಗಳ ಜಯಂತಿಯನ್ನು ಒಂದೇ ದಿನಕ್ಕೆ ಸೀಮಿತ ಮಾಡದೆ ಎಲ್ಲರೂ ಸದಾಕಾಲ ಅವರ ಜೀವಿತಾವಧಿಯ ಸಾಧನೆ ಮತ್ತು ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಇತರರಿಗೂ ಆ ಬಗ್ಗೆ ಮನವರಿಕೆ ಮಾಡಬೇಕೆಂದು
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ತನ್ನ ಘೋರ ತಪ್ಪಸ್ಸಿನ ಮೂಲಕ ದೇವಗಂಗೆಯನ್ನು ಧರೆಗಿಳಿಸಿದ ಮಹರ್ಷಿ ಭಗೀರಥರು ಸರ್ವ ಕಾಲಕ್ಕೂ ಪೂಜಿತರು ಎಂದು ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ ಹೇಳಿದರು.ಪಟ್ಟಣದ ಆಡಳಿತ ಸೌಧದ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ಮಂಗಳವಾರ ನಡೆದ ಶ್ರೀ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಸಂತ ಋತುವಿನ ವೈಶಾಖ ಮಾಸದ ಸಪ್ತಮಿಯಂದು ದೇವಗಂಗೆ ಧರೆಗೆ ಬಂದ ಗಂಗಾ ಸಪ್ತಮಿ ದಿನವಾಗಿದ್ದು, ಆ ಪವಿತ್ರ ದಿವಸವನ್ನು ಭಗೀರಥ ಜಯಂತಿಯನ್ನಾಗಿ ಆಚರಣೆ ಮಾಡಲಾಗುತ್ತಿದೆ ಎಂದರು.
ಮಹನೀಯರು ಮತ್ತು ಮಹರ್ಷಿಗಳ ಜಯಂತಿಯನ್ನು ಒಂದೇ ದಿನಕ್ಕೆ ಸೀಮಿತ ಮಾಡದೆ ಎಲ್ಲರೂ ಸದಾಕಾಲ ಅವರ ಜೀವಿತಾವಧಿಯ ಸಾಧನೆ ಮತ್ತು ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಇತರರಿಗೂ ಆ ಬಗ್ಗೆ ಮನವರಿಕೆ ಮಾಡಬೇಕೆಂದು ಸಲಹೆ ನೀಡಿದರು.ಇಂದಿನ ಜಯಂತಿ ಕಾರ್ಯಕ್ರಮವನ್ನು ಲೋಕಸಭಾ ಚುನಾವಣೆ ನೀತಿ ಸಂಹಿತೆ ಸಲುವಾಗಿ ಸರಳವಾಗಿ ಆಚರಣೆ ಮಾಡಿದ್ದು, ಮುಂದಿನ ವರ್ಷ ಸಮಾಜದವರ ಬೇಡಿಕೆ ಮತ್ತು ಸಹಕಾರದೊಂದಿಗೆ ಅತ್ಯಂತ ವಿಜೃಂಭಣೆಯಿಂದ ಶಾಸಕರ ನೇತೃತ್ವದಲ್ಲಿ ಆಚರಣೆ ಮಾಡಬೇಕೆಂದು ಉಪ್ಪಾರ ಸಮಾಜದ ಮುಖಂಡರು ಮನವಿ ಸಲ್ಲಿಸಿದಾಗ ಇದಕ್ಕೆ ತಹಸೀಲ್ದಾರರು ಸಹಮತ ವ್ಯಕ್ತಪಡಿಸಿದರು.
ಶಿಕ್ಷಕ ಮಂಜುನಾಥ್ ಕೋಗಿಲೂರು ಮಾತನಾಡಿ, ಭಗೀರಥ ಮಹರ್ಷಿಗಳ ಜೀವನ, ಸಾಧನೆ ಮತ್ತು ಸಂದೇಶಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.ಉಪ್ಪಾರ ಸಂಘದ ತಾಲೂಕು ಅಧ್ಯಕ್ಷ ಕಾಟ್ನಾಳುಮಹದೇವ್, ಗ್ರೇಡ್-2 ತಹಶೀಲ್ದಾರ್ ಕೆ.ಎಸ್.ಬಾಲಸುಬ್ರಹ್ಮಣ್ಯ ಮಾತನಾಡಿದರು.
ನಿವೃತ್ತ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶ್ರೀಧರ್, ಉಪ್ಪಾರ ಸಮಾಜದ ಮುಖಂಡರಾದ ಕೆ.ಎಲ್. ಜಯರಾಮ್, ಕೃಷ್ಣೇಗೌಡ, ಟಿ.ಎಸ್. ಯೋಗೇಶ್ ಕುಮಾರ್, ಸಂತೋಷ್, ಗೋವಿಂದೇಗೌಡ, ರಾಮಕೃಷ್ಣ, ರಾಕೇಶ್, ರಂಗನಾಥ್, ಮಲ್ಲೇಶ್, ಎಂ. ಕುಮಾರ್, ತಿಪ್ಪೂರು ರವಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಎಸ್. ರಾಜಾರಾಮ್ವೈಲಾಯ, ಸಿಡಿಪಿಒ ಅಣ್ಣಯ್ಯ, ಉಪನೋಂದಣಿ ಇಲಾಖೆಯ ರಾಜಕುಮಾರ್ ಇದ್ದರು.