ಸಾರಾಂಶ
ವೀರಶೈವ ಲಿಂಗಾಯತ ಮಹಿಳಾ ಘಟಕದ ವಾರ್ಷಿಕೋತ್ಸವಕನ್ನಡಪ್ರಭ ವಾರ್ತೆ ಬೇಲೂರು
ಕಳೆದ ನಾಲ್ಕು ವರ್ಷದಲ್ಲಿ ಹಿಂದೆ ಆರಂಭವಾದ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಈಗ ಹತ್ತು ಜಿಲ್ಲೆಯಲ್ಲಿ ಸಾವಿರಾರು ಮಹಿಳಾ ಸ್ವ ಸಹಾಯ ಸಂಘ ಸ್ಥಾಪಿಸುವ ಮೂಲಕ ಸ್ತ್ರೀ ಸಬಲೀಕರಣಕ್ಕೆ ಮುಂದಾಗಿದೆ ಎಂದು ಪುಷ್ಪಗಿರಿ ಮಹಾಸಂಸ್ಥಾನ ಶ್ರೀ ಮಠದ ಜಗದ್ಗುರು ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿ ಹೇಳಿದರು.ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ತಾಲೂಕು ವೀರಶೈವ ಲಿಂಗಾಯತ ಮಹಿಳಾ ಘಟಕದಿಂದ ಹಮ್ಮಿಕೊಂಡ ೫ ನೇ ವಾರ್ಷಿಕೋತ್ಸವ ಸಮಾರಂಭದ ಉದ್ಘಾಟನೆ ನಡೆಸಿ ಮಾತನಾಡಿ, ಪುಷ್ಪಗಿರಿ ಮಠ ಒಂದು ಜಾತಿ, ಧರ್ಮಕ್ಕೆ ಎಂದಿಗೂ ಸೀಮಿತವಾಗಿಲ್ಲ ಎಂಬ ಕಾರಣದಿಂದಲೇ ಪುಷ್ಪಗಿರಿಯಲ್ಲಿ ನಡೆಯುವ ಪ್ರತಿ ಚಟುವಟಿಕೆಗಳು ಜಾತ್ಯತೀತ ಮನೋಭಾವಯಲ್ಲಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದ ಹತ್ತು ಹಲವು ಜಿಲ್ಲೆಯಲ್ಲಿ ಸಾವಿರಾರು ಮಹಿಳಾ ಸ್ವ ಸಹಾಯ ಸಂಘ ಸ್ಥಾಪನೆ ಮಾಡಿದೆ. ಈಗಾಗಲೇ ಹಾಸನ ಮತ್ತು ಹಾವೇರಿ ಜಿಲ್ಲೆಯಲ್ಲಿ ಬೃಹತ್ ಸಮಾವೇಶ ನಡೆಸಿದ್ದು, ಸದ್ಯ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಫೆಬ್ರವರಿ ೧೧ ರಂದು ಬೃಹತ್ ಸಮಾವೇಶ ನಡೆಸಲಾಗುತ್ತದೆ. ಪುಷ್ಪಗಿರಿ ಮಹಿಳಾ ಸ್ವ ಸಹಾಯ ಸಂಘದಲ್ಲಿ ಎಲ್ಲಾ ಜಾತಿ ಮತ್ತು ಧರ್ಮದವರು ಒಟ್ಟಾಗಿ ಭಾಗವಹಿಸಿ ಸಂಸ್ಥೆಯಿಂದ ಫಲ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಪುಷ್ಪಗಿರಿ ಮಠ ಮತ್ತು ಅಲ್ಲಿನ ಮಲ್ಲಿಕಾರ್ಜುನ ಸ್ವಾಮಿ ದೇಗುಲಕ್ಕೆ ಅವಿನಾಭಾವ ಸಂಬಂಧವಿದೆ. ಆದರೆ ಮಠವನ್ನು ದೂರವಿಟ್ಟು ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಹಿಂದಿನ ಶಾಸಕ ಕೆ.ಎಸ್.ಲಿಂಗೇಶ್ ಮಾಡಿದ ಪ್ರಯತ್ನ ನಡೆಸಲಿಲ್ಲ. ಸದ್ಯ ಇರುವ ಹಾಲಿ ಶಾಸಕ ಎಚ್.ಕೆ.ಸುರೇಶ್ ಪ್ರಯತ್ನ ಮಾಡಬೇಕಿದೆ. ತಾಲೂಕು ವೀರಶೈವ ಮಹಿಳಾ ಸಂಘದಿಂದ ಹಮ್ಮಿಕೊಂಡ ಈ ಕಾರ್ಯಕ್ರಮ ಅಚ್ಚುಕಟ್ಟಾಗಿ ಮಾಡಿದ್ದಾರೆ. ಆದರೆ ಇದರ ಉದ್ದೇಶವೇ ಮಹಿಳೆಯರಿಗೆ ತಿಳಿದಿಲ್ಲ, ಸಂಘಟನೆಯಿಂದ ಏನಾದರೂ ಸಾಧನೆ ಮಾಡುವ ಶಕ್ತಿ ಇರುತ್ತದೆ ಎಂದರು.ಬೇಲೂರು ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ವೀರಶೈವ ಲಿಂಗಾಯತ ಸಮುದಾಯದಕ್ಕೆ ೨ಎ ವರ್ಗಕ್ಕೆ ಸೇರ್ಪಡೆ ಮಾಡಬೇಕು ಎಂಬ ಒತ್ತಾಯಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಪಟ್ಟಣದ ಹೃದಯ ಭಾಗದಲ್ಲಿ ಸ್ಥಾಪಿಸಲು ಮುಂದಾಗಿರುವುದು ಸಂತೋಷವಾಗಿದೆ. ಪುಷ್ಪಗಿರಿ ಮಲ್ಲಿಕಾರ್ಜುನ ಸ್ವಾಮಿಯ ದೇಗುಲದಲ್ಲಿನ ಗೊಂದಲವನ್ನು ಶೀಘ್ರವೇ ಬಗೆಹರಿಸಲಾಗುವುದು ಎಂದು ತಿಳಿಸಿದರು.
ಅರಕಲಗೂಡು ದೊಡ್ಡಮಠದ ಮಲ್ಲಿಕಾರ್ಜುನ ಮಹಾಸ್ವಾಮೀಜಿ, ಮಾಜಿ ಶಾಸಕ ಕೆ.ಎಸ್.ಲಿಂಗೇಶ್, ಹಾಸನ ಜಿಲ್ಲಾ ವೀರಶೈವ ಸಂಘದ ಅಧ್ಯಕ್ಷ ಬಿ.ಆರ್.ಗುರುದೇವ್, ತಾಲೂಕು ಅಧ್ಯಕ್ಷ ಬಿ.ಎಂ.ರವಿಕುಮಾರ್, ಮಹಿಳಾ ಅಧ್ಯಕ್ಷೆ ಅನ್ನಪೂರ್ಣ ಚಂದ್ರಶೇಖರ, ಯುವ ಘಟಕದ ಅಧ್ಯಕ್ಷ ಗೆಂಡೇಹಳ್ಳಿ ಚೇತನ್, ರಾಷ್ಟ್ರೀಯ ಕಾರ್ಯಾಗಾರಿ ಸಮಿತಿ ಸದಸ್ಯ ಬಿ.ಕೆ.ಚಂದ್ರಕಲಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಗರಹಳ್ಳಿ ನಟರಾಜ್, ಉಪಾಧ್ಯಕ್ಷೆ ಪಾರ್ವತಿ ಕಾ ರೆಡ್ಡಿ, ಜಿಲ್ಲಾಧ್ಯಕ್ಷೆ ಸುಧಾ ವಿನೋದ, ರಾಜ್ಯ ಘಟಕದ ಸದಸ್ಯ ಜಯಶೀಲ ಜಯಶಂಕರ್, ಪ್ರೇಮಾಲತಾ ನಾಗರಾಜ್, ಕಾರ್ಯದರ್ಶಿ ಹೇಮಾ ವಿರೂಪಾಕ್ಷ, ದಿನೇಶ್ ಹಾಜರಿದ್ದರು.ತಾಲೂಕು ವೀರಶೈವ ಮಹಿಳಾ ಘಟಕದಿಂದ ನಡೆದ ೫ ನೇ ವಾರ್ಷಿಕೋತ್ಸವ ಸಮಾರಂಭವನ್ನು ಪುಷ್ಪಗಿರಿ ಜಗದ್ಗುರುಗಳು ಉದ್ಘಾಟಸಿದರು.