ಪಾಲಗ್ರಹಾರ ಗ್ರಾಪಂ ಅಧ್ಯಕ್ಷರಾಗಿ ಪುಷ್ಪಾಂಜಲಿ ಗಿರೀಶ್ ಆಯ್ಕೆ

| Published : Aug 15 2024, 01:46 AM IST

ಸಾರಾಂಶ

ಈ ಹಿಂದೆ ಬ್ಯಾಡರಹಳ್ಳಿಯ ರಾಧಾ ನಾಗರಾಜು ಅಧ್ಯಕ್ಷೆಯಾಗಿದ್ದರು. ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಪುಷ್ಪಾಂಜಲಿ ಮತ್ತು ಜೆಡಿಎಸ್ ಬೆಂಬಲಿತ ವಿಜಯಕುಮಾರ್ ನಾಮಪತ್ರ ಸಲ್ಲಿಸಿದ್ದರು. 5 ಮತಗಳನ್ನು ಪಡೆದು ಪುಷ್ಪಾಂಜಲಿ ಗಿರೀಶ್ ಗೆಲುವು ಸಾಧಿಸಿದರೆ, 3 ಮತಗಳನ್ನು ಪಡೆದ ವಿಜಯಕುಮಾರ್ ಪರಾಭವಗೊಂಡರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ಪಾಲಗ್ರಹಾರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಹಾಲ್ತಿ ಗ್ರಾಮದ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಪುಷ್ಪಾಂಜಲಿ ಗಿರೀಶ್ ಗೆಲುವು ಸಾಧಿಸಿದ್ದಾರೆ.

9 ಮಂದಿ ಸದಸ್ಯ ಬಲ ಹೊಂದಿರುವ ಗ್ರಾಪಂ ಈ ಹಿಂದೆ ಬ್ಯಾಡರಹಳ್ಳಿಯ ರಾಧಾ ನಾಗರಾಜು ಅಧ್ಯಕ್ಷೆಯಾಗಿದ್ದರು. ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಪುಷ್ಪಾಂಜಲಿ ಮತ್ತು ಜೆಡಿಎಸ್ ಬೆಂಬಲಿತ ವಿಜಯಕುಮಾರ್ ನಾಮಪತ್ರ ಸಲ್ಲಿಸಿದ್ದರು. 5 ಮತಗಳನ್ನು ಪಡೆದು ಪುಷ್ಪಾಂಜಲಿ ಗಿರೀಶ್ ಗೆಲುವು ಸಾಧಿಸಿದರೆ, 3 ಮತಗಳನ್ನು ಪಡೆದ ವಿಜಯಕುಮಾರ್ ಪರಾಭವಗೊಂಡರು.

ಪುಷ್ಪಾಂಜಲಿ ಗಿರೀಶ್ ನೂತನ ಅಧ್ಯಕ್ಷೆಯಾಗಿ ಗೆಲುವು ಸಾಧಿಸಿದರೆಂಬ ಮಾಹಿತಿ ಪ್ರಕಟಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಗ್ರಾಪಂ ಮುಂಭಾಗದಲ್ಲಿ ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿ ಹಂಚಿಕೆ ಮಾಡಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಪರ ಜಯಘೋಷಮೊಳಗಿಸಿ ವಿಜಯೋತ್ಸವ ಆಚರಿಸಿದರು.

ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷೆ ರಾಧಾ ನಾಗರಾಜು, ಉಪಾಧ್ಯಕ್ಷೆ ಲತಾ ಚನ್ನಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಎಚ್.ಎನ್.ಗಿರೀಶ್, ಮುಖಂಡರಾದ ಬಿ.ಎನ್.ವನರಾಜು, ಬಿ.ಎನ್.ರಾಜೇಶ್, ನಾಗರಾಜು, ಮಂಜು ಸೇರಿದಂತೆ ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯರು ಉಪಸ್ಥಿತರಿದ್ದು ನೂತನ ಅಧ್ಯಕ್ಷೆಯನ್ನು ಅಭಿನಂದಿಸಿದರು.

ಇಂದು ಕಾವೇರಿ ಮಾತೆಗೆ ಯದುವೀರ್‌ ಬಾಗಿನ

ಕನ್ನಡಪ್ರಭ ವಾರ್ತೆ ಮಂಡ್ಯಮೈದುಂಬಿರುವ ಕೃಷ್ಣರಾಜಸಾಗರ ಜಲಾಯದಲ್ಲಿ ಮೈಸೂರು ರಾಜವಂಶಸ್ಥ ಹಾಗೂ ಸಂಸದ ಯದುವೀರ್‌ ಅವರು ಗುರುವಾರ (ಆ.15) ಕಾವೇರಿ ಮಾತೆಗೆ‌ ಬಾಗಿನ ಸಮರ್ಪಿಸುವರು. ಬೆಳಗ್ಗೆ 10.30ಕ್ಕೆ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಶಯದಲ್ಲಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸುವರು. ಖ್ಯಾತ ವೈದಿಕ ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ ಪೂಜಾ ವಿಧಿ-ವಿಧಾನಗಳು ನಡೆಯಲಿವೆ. ಬಿಜೆಪಿ ಪಕ್ಷದ ಹಲವು ಮುಖಂಡರು ಹಾಜರಿರುವರು.