ಶೃಂಗೇರಿ ಸರ್ಕಾರಿ ಪ್ರೌಡಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ಪ್ರಭ ವಿದ್ಯಾರ್ಥಿ ಆವೃತ್ತಿ ವಿತರಣೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಶೃಂಗೇರಿಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆಯಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮೊಬೈಲ್ ಬಿಟ್ಟು ಪುಸ್ತಕ ಹಿಡಿ ಎಂಬ ಸಂಸ್ಕೃತಿಗೆ ಮುನ್ನುಡಿ ಹಾಡಬೇಕು ಎಂದು ಶೃಂಗೇರಿ ಪೊಲೀಸ್ ಠಾಣೆ ಸಹಾಯಕ ಪೋಲೀಸ್ ಉಪನಿರೀಕ್ಷಕ ಡಾ.ಸಿ,ಆರ್.ಮೋಹನ್ ಕುಮಾರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಡಶಾಲೆ ವಿದ್ಯಾರ್ಥಿಗಳಿಗೆ ಮೂಡಿಗೆರೆ ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಒಂದು ವರ್ಷದ ಕನ್ನಡ ಪ್ರಭ ವಿದ್ಯಾರ್ಥಿ ಆವೃತಿ ಕೊಡುಗೆ ಹಾಗೂ ವಿತರಣೆ ಸಮಾರಂಭದಲ್ಲಿ ವಿತರಿಸಿ ಮಾತನಾಡಿದರು. ಪುಸ್ತಕ ಮತ್ತು ಪತ್ರಿಕೆಗಳು ವಿದ್ಯಾರ್ಥಿಗಳಿಗೆ ಜ್ಞಾನದ ಕಣ್ಣುಗಳಿದ್ದಂತೆ. ಮನಸ್ಸಿನ ಜ್ಞಾನ ಅರಳುವಿಕೆಯಿಂದ ಎಲ್ಲರೂ ವ್ಯಕ್ತಿತ್ವ ವಿಕಸನ ಹೊಂದಬೇಕು. ಪ್ರತಿಯೊಬ್ಬರೂ ಮೌಡ್ಯತೆ ಬಿಟ್ಟು ಅಕ್ಷರ ಜ್ಞಾನ ಪಡೆಯುವ ಮೂಲಕ ಅಂಧಕಾರ ಹೋಗಲಾಡಿಸಿ ಸಮಾಜದ ಮುಖ್ಯವಾಹಿನಿ ಕಡೆ ಸಾಗಬೇಕು ಎಂದರು.ವಿದ್ಯಾರ್ಥಿಗಳು ಶಾಲೆಯಲ್ಲಿ, ಗ್ರಂಥಾಲಗಳಲ್ಲಿ ಪತ್ರಿಕೆ, ಒಳ್ಳೆಯ ಸಾಹಿತ್ಯ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು. ಓದು ಜ್ಞಾನದ ಬೆಳಕು. ಒಂದು ಒಳ್ಳೆಯ ಪುಸ್ತಕ ನೂರು ಗೆಳೆಯರಿಗೆ ಸಮ, ಮನುಷ್ಯನ ಬದುಕಿನ ದಿಕ್ಕನ್ನೆ ಬದಲಾಯಿಸುವ ಅದ್ಭುತ ಶಕ್ತಿ ಹೊಂದಿದೆ. ಪತ್ರಿಕೆಗಳಲ್ಲಿ ನಮ್ಮ ಸಾಮಾನ್ಯ ಜ್ಞಾನ ಬೆಳೆಸುವ ಎಲ್ಲಾ ವಿಷಯ ಒಳಗೊಂಡಿರುತ್ತದೆ.
ಇತ್ತೀಚಿನ ದಿನಗಳಲ್ಲಿ ಮೊಬೈಲ್ ಹಾವಳಿಯಿಂದ ಮಕ್ಕಳಿಂದ ಮುದುಕರವರೆಗೂ ಮೊಬೈಲ್ ನತ್ತ ಆಕರ್ಷಿತರಾಗುತ್ತಿದ್ದಾರೆ. ಮೊಬೈಲ್ ನಿಂದ ಎಷ್ಟು ಉಪಯೋಗವೋ ಅಷ್ಟೇ ದುಷ್ಪರಿಣಾವೂ ಇದೆ.ವಿದ್ಯಾರ್ಥಿಗಳ ಕಣ್ಣು, ಮನಸ್ಸು ಸೇರಿದಂತೆ ಆರೋಗ್ಯದ ಮೇಲೆ ಪರಿಣಾಮ ಬೀರಿ ಭವಿಷ್ಯದ ಮೇಲೆ ಪರಿಣಾಮ ಉಂಟುಮಾಡುತ್ತಿದೆ ಎಂದರು.
ವಿದ್ಯಾರ್ಥಿಗಳಲ್ಲಿ ನೈತಿಕ ಮಾನವೀಯ ಮೌಲ್ಯ ಬೆಳೆಸುವ ಮಹತ್ತರ ಜವಾಬ್ದಾರಿ ಶಿಕ್ಷಕರು ಪೋಷಕರ ಮೇಲಿದೆ. ವಿದ್ಯಾರ್ಥಿಗಳು ದೇಶದ ಭವಿಷ್ಯದ ರೂವಾರಿಗಳು, ದೇಶದ ಭವಿಷ್ಯ ವಿದ್ಯಾರ್ಥಿಗಳ ಕೈಯಲಿದ್ದರೆ ವಿದ್ಯಾರ್ಥಿಗಳ ಭವಿಷ್ಯ ಶಿಕ್ಷಕರ ಕೈಯಲ್ಲಿದೆ. ಪುಷ್ಪಗಿರಿ ಪ್ರಕಾಶನದಿಂದ ವಿದ್ಯಾರ್ಥಿಗಳಿಗೆ ಒಂದು ವರ್ಷ ಕೊಡುಗೆಯಾಗಿ ನೀಡುತ್ತಿರುವ ಈ ವಿದ್ಯಾರ್ಥಿ ಆವೃತ್ತಿ ವಿದ್ಯಾರ್ಥಿಗಳ ಸಾಧನೆಗೆ ಉತ್ತಮ ಕೈಪಿಡಿಯಾಗಲಿದೆ. ಈ ಸರ್ಕಾರಿ ಪ್ರೌಢಶಾಲೆ ಎಸ್ಎಸ್ಎಲ್ ಸಿಯಲ್ಲಿ ಶೇ 100 ಪಲಿತಾಂಶ ಪಡೆದು ಉತ್ತಮ ಸಾಧನೆ ಮಾಡಿದೆ. ಈ ಸಂಚಿಕೆ ಸದ್ಭಳಕೆ ಮಾಡಿಕೊಂಡು ಇನ್ನಷ್ಠು ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಜೇಶ್ ದುರ್ಗಾದೇವಸ್ಥಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ. ಮನಸಿದ್ದಲ್ಲಿ ಮಾರ್ಗ. ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಪುಷ್ಪಗಿರಿ ಸಾಂಸ್ಕೃತಿ ಪ್ರತಿಷ್ಠಾನ ಕಳೆದ ಹಲವು ವರ್ಷಗಳಿಂದ ಸಮಾಜ ಸೇವೆ ಮಾಡುತ್ತಾ ಬಂದಿದೆ. ಇದರ ಸಂಸ್ಥಾಪಕ ಅಧ್ಯಕ್ಷರಾಗಿ ಡಾ.ಮೋಹನ್ ಕುಮಾರ್ ಉತ್ತಮ ಸಮಾಜ ಸೇವೆ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಶಿಸ್ತು, ಪ್ರಾಮಾಣಿಕತೆ, ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು. ಕನ್ನಡ ಪ್ರಭ ವಿದ್ಯಾರ್ಥಿ ಆವೃತ್ತಿ ಎಲ್ಲಾ ವಿಷಯ ಗಳನ್ನು ಒಳಗೊಂಡಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಉಪಯುಕ್ತವಾಗಿದೆ. ಇದು ವಿದ್ಯಾರ್ಥಿಗಳ ಪಾಲಿಗೆ ಜ್ಞಾನಕೋಶ. ವಿದ್ಯಾರ್ಥಿಗಳು ಇದರ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.ಪತ್ರಕರ್ತ ನೆಮ್ಮಾರ್ ಅಬೂಬಕರ್ ಪ್ರಾಸ್ತಾವಿಕ ಮಾತನಾಡಿ ಕನ್ನಡ ಪ್ರಭ ಯುವ ವಿದ್ಯಾರ್ಥಿ ಸಂಚಿಕೆ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕನ್ನಡ ಪ್ರಭ ಚಿಕ್ಕಮಗಳೂರು ವಿಭಾಗದ ಪ್ರಸಾರಂಗ ವ್ಯವಸ್ಥಾಪಕ ಕಿರಣ್ ರಾಜ್, ಶಾಲೆ ಪ್ರಭಾರ ಮುಖ್ಯ ಶಿಕ್ಷಕ ಕೆ.ಪಿ.ವೆಂಕಟೇಶ್ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. ನಾಗರತ್ನ ಸ್ವಾಗತಿಸಿ ಶ್ರೀಶ ನಿರೂಪಿಸಿ ರಮ್ಯ ವಂದಿಸಿದರು.
5 ಶ್ರೀ ಚಿತ್ರ 1-ಶೃಂಗೇರಿ ಸರ್ಕಾರಿ ಪ್ರೌಡಶಾಲೆಯಲ್ಲಿ ಆಯೋಜಿಸಿದ್ದ ಕನ್ನಡ ಪ್ರಭ ಯುವ ವಿದ್ಯಾರ್ಥಿ ಆವೃತ್ತಿ ಬಿಡುಗಡೆ ಸಮಾರಂಭದಲ್ಲಿ ಡಾ.ಸಿ.ಆರ್.ಮೋಹನ್ ಕುಮಾರ್ ಮಾತನಾಡಿದರು.
5 ಶ್ರೀ ಚಿತ್ರ 2-ಶೃಂಗೇರಿ ಸರ್ಕಾರಿ ಪ್ರೌಡಶಾಲೆಯಲ್ಲಿ ಮೂಡಿಗೆರೆ ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ದಿಂದ ಕನ್ನಡ ಪ್ರಭ ಯುವ ವಿದ್ಯಾರ್ಥಿ ಆವೃತ್ತಿಯನ್ನು ಡಾ.ಸಿ.ಆರ್.ಮೋಹನ್ ಕುಮಾರ್ ಬಿಡುಗಡೆಗೊಳಿಸಿದರು.