ಹಿಂದುಗಳ ರಕ್ಷಣೆಗೆ ವಿಶ್ವ ಸಂಸ್ಥೆ ಮೇಲೆ ಒತ್ತಡ ತನ್ನಿ

| Published : Aug 13 2024, 12:52 AM IST

ಸಾರಾಂಶ

ನೆರೆಯ ಬಾಂಗ್ಲಾ ದೇಶದ ಹಿಂದುಗಳ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ವಿಶ್ವ ಸಂಸ್ಥೆ ಹಾಗೂ ವಿಶ್ವ ಸಮುದಾಯದ ಮೇಲೆ ಒತ್ತಡ ಹೇರುವಂತೆ ಕೇಂದ್ರ ಸರ್ಕಾರಕ್ಕೆ ಹಿಂದು ಹಿತರಕ್ಷಣಾ ಸಮಿತಿ ಸಂಚಾಲಕ ಸತೀಶ ಪೂಜಾರಿ ದಾವಣಗೆರೆಯಲ್ಲಿ ಒತ್ತಾಯಿಸಿದ್ದಾರೆ.

- ಬಾಂಗ್ಲಾದಲ್ಲಿ ಹಿಂದೂಗಳ ವಿರುದ್ಧ ಹೇಯ ಕೃತ್ಯ: ಸತೀಶ ಪೂಜಾರಿ ಆಕ್ರೋಶ । ಸಾಣೇಹಳ್ಳಿ ಶ್ರೀ ವಿರುದ್ಧ ಕೇಸ್ ದಾಖಲು

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ನೆರೆಯ ಬಾಂಗ್ಲಾ ದೇಶದ ಹಿಂದುಗಳ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ವಿಶ್ವ ಸಂಸ್ಥೆ ಹಾಗೂ ವಿಶ್ವ ಸಮುದಾಯದ ಮೇಲೆ ಒತ್ತಡ ಹೇರುವಂತೆ ಕೇಂದ್ರ ಸರ್ಕಾರಕ್ಕೆ ಹಿಂದು ಹಿತರಕ್ಷಣಾ ಸಮಿತಿ ಸಂಚಾಲಕ ಸತೀಶ ಪೂಜಾರಿ ಒತ್ತಾಯಿಸಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಂಗ್ಲಾದಲ್ಲಿ ಕಳೆದ ಕೆಲವು ದಿನಗಳಿಂದ ಹಿಂದುಗಳನ್ನೇ ಗುರಿಯಾಗಿಟ್ಟುಕೊಂಡು ಅಲ್ಲಿನ ಮತಾಂಧರು ಅಮಾನವೀಯ ವರ್ತನೆ ತೋರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಿಂದುಗಳ ರಕ್ಷಣೆಗೆ ಭಾರತ ಸರ್ಕಾರವು ಜಾಗತಿಕ ಮಟ್ಟದಲ್ಲಿ ಧ್ವನಿ ಎತ್ತಬೇಕು ಎಂದರು.

ರಾಜ್ಯಾದ್ಯಂತ ಸಾಮೂಹಿಕ ಪ್ರತಿಭಟನೆ ಮೂಲಕ ವಿಶ್ವ ಸಂಸ್ಥೆ ಮೇಲೆ ಒತ್ತಡ ಹೇರಲು ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಡಬೇಕೆಂದು ರಾಜ್ಯವ್ಯಾಪಿ ಸಾಮೂಹಿಕ ಪ್ರತಿಭಟನೆ ಮೂಲಕ ಒತ್ತಾಯಿಸಲಾಗುತ್ತಿದೆ. ಬಾಂಗ್ಲಾದಲ್ಲಿ ಅನೇಕ ದಿನಗಳಿಂದ ಹಿಂದು ಧಾರ್ಮಿಕ ಸ್ಥಳಗಳು, ಹಿಂದು ವ್ಯಾಪಾರ ಸಂಸ್ಥೆಗಳು, ಹಿಂದುಗಳ ಮನೆ, ಅಂಗಡಿ, ಕಚೇರಿಗಳನ್ನೇ ಗುರಿಯಾಗಿಟ್ಟುಕೊಂಡು ದಾಳಿ ಮಾಡಲಾತ್ತಿದೆ. ಅತ್ಯಂತ ಬರ್ಬರವಾಗಿ, ಕ್ರೂರವಾಗಿ ಮಹಿಳೆಯರು, ಮಕ್ಕಳು, ಹಿರಿಯರು, ಯುವಕರು, ಪುರುಷರೆನ್ನೆದೇ ಹಿಂಸಿಸುವ, ಮಹಿಳೆಯರು, ಮಕ್ಕಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗುತ್ತಿದೆ ಎಂದು ಆರೋಪಿಸಿದರು.

ಹಿಂದುಗಳು ನಿರಂತರವಾಗಿ ಜಿಹಾದಿಗಳ ಕಿರುಕುಳಕ್ಕೆ ಬಲಿಯಾಗುತ್ತಿದ್ದಾರೆ. ಮನೆ, ಮಠ, ಅಂಗಡಿ, ಕಚೇರಿ, ವಾಣಿಜ್ಯ ಸಂಸ್ಥೆಗಳು, ಮಹಿಳೆಯರು, ಮಕ್ಕಳು ಹಾಗೂ ಅಲ್ಲಿನ ಹಿಂದುಗಳ ನಂಬಿಕೆಯ ಶ್ರದ್ಧಾಕೇಂದ್ರಗಳು ಈಗ ಅಲ್ಲಿ ಸುರಕ್ಷಿತವಾಗಿಲ್ಲ. ಬಾಂಗ್ಲಾದಲ್ಲಿ ಜಿಹಾದಿಗಳಿಂದ ತುಳಿತಕ್ಕೊಳಗಾದ ಅಲ್ಪಸಂಖ್ಯಾತ ಹಿಂದುಗಳ ಸ್ಥಿತಿ ತುಂಬಾ ಹದಗೆಡುತ್ತಿದೆ. ಅಲ್ಲಿ ಅಲ್ಪಸಂಖ್ಯಾತರ ಹಿಂದುಗಳ ಸುರಕ್ಷತೆಗಾಗಿ ಮತ್ತು ಅಂತಹವರನ್ನು ಮಾನವ ಹಕ್ಕುಳನ್ನು ರಕ್ಷಿಸಲು ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳಬೇಕಾದುದು ವಿಶ್ವ ಸಮುದಾಯದ ಜವಾಬ್ದಾರಿ ಎಂದರು.

ಭೀಕರ ಪರಿಸ್ಥಿತಿಯ ಲಾಭ ಪಡೆದು, ಗಡಿಯಾಚೆಯಿಂದ ಜಿಹಾದಿಗಳು ಭಾರತಕ್ಕೆ ಒಳನುಸುಳುವಿಕೆ ಪ್ರಯತ್ನ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ, ನಮ್ಮ ಭದ್ರತಾ ಪಡೆಗಳ ಮೂಲಕ ಭಾರತ-ಬಾಂಗ್ಲಾದೇಶ ಗಡಿ ಪ್ರದೇಶದಲ್ಲಿ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳುವ ಕೆಲಸವು ಕೇಂದ್ರ ಸರ್ಕಾರದಿಂದ ಆಗಬೇಕು. ಯಾವುದೇ ಕಾರಣಕ್ಕೂ ಸಹ ನೆರೆರಾಷ್ಟ್ರ ಬಾಂಗ್ಲಾದ ಜಿಹಾದಿಗಳು, ಉಗ್ರರು ಭಾರತದೊಳಗೆ ಕಾಲಿಡದಂತೆ ನೋಡಿಕೊಳ್ಳಬೇಕು ಎಂದು ಸತೀಶ ಪೂಜಾರಿ ಆಗ್ರಹಿಸಿದರು.

ಸಮಿತಿ ಸಹ ಸಂಚಾಲಕ ಸಿ.ಎಸ್.ರಾಜು, ಶಿವಾಜಿ ರಾವ್, ಹರೀಶ ಪವಾರ್, ಮನೋಜ. ಎಂ.ವೀರೇಶ, ಜಿ.ವೀರೇಶ, ಉಮೇಶ ನವಲೆ ಇತರರು ಇದ್ದರು.

- - -

ಬಾಕ್ಸ್‌ * ಸಾಣೇಹಳ್ಳಿ ಶ್ರೀ ವಿರುದ್ಧ ಠಾಣೆಗೆ ದೂರು ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೆರೆಯ ಚಿತ್ರದುರ್ಗ ಜಿಲ್ಲೆ ಸಮಾರಂಭವೊಂದರಲ್ಲಿ ಹಿಂದುಗಳ ಭಾವನೆಗೆ ನೋವುಂಟು ಮಾಡುವ ರೀತಿ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಉತ್ತಮ ಮಠದಲ್ಲಿರುವ, ಸಮಾಜವನ್ನು ತಿದ್ದಬೇಕಾದ ಸ್ಥಾನದಲ್ಲಿರುವ ಡಾ.ಪಂಡಿತಾರಾಧ್ಯ ಸ್ವಾಮೀಜಿ ಹೊಳಲ್ಕೆರೆ ಸಮಾರಂಭದಲ್ಲಿ ಹಿಂದು ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಸತೀಶ ಪೂಜಾರಿ ಹೇಳಿದರು.

- - - -12ಕೆಡಿವಿಜಿ5, 6:

ದಾವಣಗೆರೆಯಲ್ಲಿ ಸೋಮವಾರ ಹಿಂದು ಹಿತರಕ್ಷಣಾ ಸಮಿತಿ ಸಂಚಾಲಕ ಸತೀಶ ಪೂಜಾರಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.