ಅಂಗವಿಕಲರಲ್ಲಿ ವಿಶೇಷ ಜ್ಞಾನಶಕ್ತಿ ಅಡಗಿದೆ. ಪುಟ್ಟರಾಜ ಕವಿ ಗವಾಯಿಗಳು ಅಂಧ ಮಕ್ಕಳಿಗೆ ಬೆಳಕು ನೀಡುವ ಮೂಲಕ ಬದುಕಿಗೆ ಮಾರ್ಗದರ್ಶಿಯಾಗಿದ್ದಾರೆ. ಅವರ ಆಶ್ರಮದಲ್ಲಿ ನೂರಾರು ಮಕ್ಕಳು ಬದುಕು ಕಟ್ಟಿಕೊಂಡಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ಅಂಗವಿಕಲರಲ್ಲಿ ವಿಶೇಷ ಜ್ಞಾನಶಕ್ತಿ ಅಡಗಿದೆ. ಪುಟ್ಟರಾಜ ಕವಿ ಗವಾಯಿಗಳು ಅಂಧ ಮಕ್ಕಳಿಗೆ ಬೆಳಕು ನೀಡುವ ಮೂಲಕ ಬದುಕಿಗೆ ಮಾರ್ಗದರ್ಶಿಯಾಗಿದ್ದಾರೆ. ಅವರ ಆಶ್ರಮದಲ್ಲಿ ನೂರಾರು ಮಕ್ಕಳು ಬದುಕು ಕಟ್ಟಿಕೊಂಡಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ನಗರದ ತಾಲೂಕು ಪಂಚಾಯತಿ ಸಭಾ ಭವನದಲ್ಲಿ ಅಖಿಲ ಕರ್ನಾಟಕ ವಿಕಲಚೇತನರ ಒಕ್ಕೂಟ ಹಮ್ಮಿಕೊಂಡ ವಿಶ್ವ ವಿಕಲಚೇತನರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಅಂಗವಿಕಲ ಮಕ್ಕಳಿಗೆ ಅನುಕಂಪ ತೋರಿಸುವ ಬದಲಾಗಿ ಅವರ ಬದುಕಿನ ಉತ್ತೇಜನಕ್ಕಾಗಿ ಪ್ರೋತ್ಸಾಹ, ಬೆಂಬಲ ನೀಡುವುದು ಮುಖ್ಯ. ಅದರಿಂದ ಅವರೂ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯ ಎಂದರು.ಕ್ಷೇತ್ರದ ಅಂಗವಿಕಲ ಮಕ್ಕಳಿಗೆ ಶಾಸಕರ ಪ್ರದೇಶಾಭಿವೃದ್ಧಿ ಅನುಧಾನದ ಶೇ.10 ರಷ್ಟುಅನುಧಾನ ತ್ರಿಚಕ್ರ ವಾಹನ ನೀಡುವ ಯೋಜನೆ ನಮ್ಮದಾಗಿದೆ. ವಿಕಲಚೇತನರು ಕೀಳರಿಮೆ ಬಿಟ್ಟು ತಮ್ಮ ಸವಾಲುಗಳನ್ನು ಸ್ವೀಕರಿಸಿ ಸಾಮರ್ಥ್ಯವನ್ನು ಅರಿತು ಸಮಾಜದ ಮುಖ್ಯವಾಹಿನಿಗೆ ಬರಬೇಕು. ದೇವರು ಎಲ್ಲರಿಗೂ ಆಳುವ ಶಕ್ತಿ ನೀಡಿದ್ದಾನೆ. ಪ್ರತಿಯೊಬ್ಬರಲ್ಲಿಯೂ ಅಗಾಧ ಶಕ್ತಿ, ಸಾಮರ್ಥ್ಯ, ಜ್ಞಾನ, ಕೌಶಲ್ಯ ಅಡಗಿರುತ್ತದೆ. ವಿಕಲಚೇತನರು ಸಕರಾತ್ಮಕವಾಗಿ ಆಲೋಚನೆ ಮಾಡಬೇಕು. ಸವಾಲುಗಳನ್ನು ಸ್ವೀಕರಿಸಿ ಮುನ್ನಡೆಯಬೇಕು. ಉನ್ನತ ಶಿಕ್ಷಣವನ್ನು ಪಡೆದು ಅಭಿವೃದ್ಧಿಯಾಗಬೇಕು ಎಂದು ತಿಳಿಸಿದರು.ತಾಪಂ ಇಒ ಡಾ.ಭೀಮಾಶಂಕರ ಕನ್ನೂರ ಮಾತನಾಡಿದರು. ಶಿವಲಿಂಗಪ್ಪ ನಾಯ್ಕೊಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾಂತೇಶ ಹಿರೇಮಠ ಸಾನ್ನಿಧ್ಯ ವಹಿಸಿ ಆಶೀರ್ಚನ ನೀಡಿದರು. ಡಿವೈಎಸ್ಪಿ ಸದಾಶಿವ ಕಟ್ಟಿಮನಿ, ರಾಜೇಶ ಪವಾರ, ಶಿವಯೋಗೆಪ್ಪ ಚನಗೊಂಡ, ಇಲಿಯಾಸ ಬೊರಾಮಣಿ, ಧನರಾಜ ಮುಜಗೊಂಡ, ಪರಶುರಾಮ ಭೊಸಲೆ, ಎಸ್.ಎಂ.ಮಕಂದಾರ, ಮಹಾನಂದ ಬಂಡಿವಡ್ಡರ, ಬಾಬುಷಾ ಹೊಸಮನಿ, ಸಿದ್ದಪ್ಪ ಗುಳೆ, ಶಿವಾನಂದ ನಸಗರಳ್ಳಿ, ಶಿವಕಾಂತವ್ವ ಕುಂಬಾರ ಸೇರಿದಂತೆ ವಿಕಲಚೇತನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಪ್ಪುರಾಜ ಕಾಂಬಳೆ ಪ್ರಾರ್ಥಿಸಿದರು. ಬಸವರಾಜ ಗೊರನಾಳ ನಿರೂಪಿಸಿ, ವಂದಿಸಿದರು.