ಮಂಗಳೂರಲ್ಲಿ ಪುಣ್ಯಾಶ್ರಮ ಕಟ್ಟಲು ಸಂಕಲ್ಪಿತರಾಗಿದ್ದ ಪುಟ್ಟರಾಜರು

| Published : Oct 16 2025, 02:01 AM IST

ಮಂಗಳೂರಲ್ಲಿ ಪುಣ್ಯಾಶ್ರಮ ಕಟ್ಟಲು ಸಂಕಲ್ಪಿತರಾಗಿದ್ದ ಪುಟ್ಟರಾಜರು
Share this Article
  • FB
  • TW
  • Linkdin
  • Email

ಸಾರಾಂಶ

ಗದಗಿನ ವೀರೇಶ್ವರ ಪುಣ್ಯಾಶ್ರಮದ ಮಠದ ಮಾದರಿ ಹಾಗೆ ಮಂಗಳೂರು ಗ್ರಾಮದಲ್ಲಿಯೂ ಸಹಿತ ಪಂಡಿತ ಪುಟ್ಟರಾಜ ಗವಾಯಿಗಳ ದೇವಸ್ಥಾನ ನಿರ್ಮಾಣವಾಗಲಿ

ಕುಕನೂರು: ತಾಲೂಕಿನ ಮಂಗಳೂರು ಗ್ರಾಮದಲ್ಲಿ ಸುಮಾರು 65ವರ್ಷದ ಹಿಂದೆ ಲಿಂಗೈಕ್ಯ ಪಂಚಾಕ್ಷರಿ ಗವಾಯಿಗಳು ಈ ಗ್ರಾಮದಲ್ಲಿ ವೀರೇಶ್ವರ ಪುಣ್ಯಾಶ್ರಮ ಮಠ ಕಟ್ಟಲು ಸಂಕಲ್ಪ ಮಾಡಿದ್ದರು. ಆದರೆ ಸಂಕಲ್ಪ ಈಡೇರಿರಲಿಲ್ಲ. ಈಗ ಲಿಂಗೈಕ್ಯ ಪಂಡಿತ ಪುಟ್ಟರಾಜ ಗವಾಯಿಗಳ ದೇವಸ್ಥಾನ ನಿರ್ಮಾಣ ಆಗುತ್ತಿರುವುದು ಅವರ ಸಂಕಲ್ಪ ನೆರವೇರಿದಂತೆ ಎಂದು ಗದಗಿನ ವಿರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜನವರು ಹೇಳಿದರು.

ತಾಲೂಕಿನ ಮಂಗಳೂರು ಗ್ರಾಮದಲ್ಲಿ ಪಂಡಿತ ಪುಟ್ಟರಾಜ ಗವಾಯಿಗಳ ದೇವಸ್ಥಾನ ಅಡಿಗಲ್ಲು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮಂಗಳೂರು ಗ್ರಾಮದ ದಿ. ವಿರೂಪಾಕ್ಷಪ್ಪ ದೇವಬಸಪ್ಪ ಬ್ಯಾಳಿ ಇವರ ಮಕ್ಕಳಾದ ಶರಣಪ್ಪ ದೇವಬಸಪ್ಪ ಬ್ಯಾಳಿ, ಶಂಭು ದೇವಬಸಪ್ಪ ಬ್ಯಾಳಿ ದೇವಸ್ಥಾನಕ್ಕೆ ದಾನವಾಗಿ ಭೂಮಿ ನೀಡಿದ್ದಾರೆ. ಮುಂದಿನ ವರ್ಷವೇ ಪರಮಪೂಜ್ಯರ ನೂತನ ದೇವಸ್ಥಾನ ಲೋಕಾರ್ಪಣೆಗೊಳ್ಳಲಿ. ಪುಟ್ಟರಾಜ ಗವಾಯಿಗಳ ದೇವಸ್ಥಾನ ನಿರ್ಮಾಣದಿಂದ ಗ್ರಾಮ ಹಸನವಾಗಲಿ ಎಂದರು.

ಗ್ರಾಮದ ಅರಳೇಲೆ ಹಿರೇಮಠದ ಶ್ರೀಸಿದ್ದಲಿಂಗ ಶಿವಾಚಾರ್ಯರು, ಶಿವಶರಣೆ ನಂದೀಶ್ವರ ಅಮ್ಮನವರು ಆಶೀರ್ವಚನ ನೀಡಿದರು.

ಆರ್.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಬಸವರಾಜ ರಾಜೂರು ಮಾತನಾಡಿ, ದೇವಸ್ಥಾನ ನಿರ್ಮಾಣಕ್ಕೆ ಶ್ರದ್ಧಾ, ಭಕ್ತಿಯಿಂದ ಸೇವೆ ಸಲ್ಲಿಸಲಾಗುವುದು ಎಂದರು.

ಜಿಪಂ ಮಾಜಿ ಸದಸ್ಯ ಈರಪ್ಪ ಕುಡಗುಂಟಿ ಮಾತನಾಡಿ, ಗದಗಿನ ವೀರೇಶ್ವರ ಪುಣ್ಯಾಶ್ರಮದ ಮಠದ ಮಾದರಿ ಹಾಗೆ ಮಂಗಳೂರು ಗ್ರಾಮದಲ್ಲಿಯೂ ಸಹಿತ ಪಂಡಿತ ಪುಟ್ಟರಾಜ ಗವಾಯಿಗಳ ದೇವಸ್ಥಾನ ನಿರ್ಮಾಣವಾಗಲಿ ಎಂದರು.

ತಾಪಂ ಮಾಜಿ ಉಪಾದ್ಯಕ್ಷ ವಿಶ್ವನಾಥ ಮರಿಬಸಪ್ಪನವರ ಮಾತನಾಡಿ, ಗದಗಿನ ವೀರೇಶ್ವರ ಪುಣ್ಯಶ್ರಮದಲ್ಲಿ ಸುಮಾರು ಹತ್ತು ಸಾವಿರಕ್ಕಿಂತಲೂ ಹೆಚ್ಚು ಅಂದ ಅನಾಥ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನಮ್ಮ ಗ್ರಾಮದಲ್ಲಿ ಈ ನೂತನ ದೇವಸ್ಥಾನದಲ್ಲಿ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಸಂಗೀತ ಪಾಠಶಾಲೆ ಪ್ರಾರಂಭ ಮಾಡಿ ಮಕ್ಕಳಿಗೆ ಉಚಿತ ಸಂಗೀತ ಶಿಕ್ಷಣ ನೀಡಲು ನಾವೆಲ್ಲರೂ ಕಂಕಣ ಬದ್ಧರಾಗಿ ನಿಲ್ಲೋಣ ಎಂದರು.

ಸುಜಾತಾ ಮಹೇಶ ಬಂಡ್ರಕಲ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಗ್ರಾಪಂ ಅಧ್ಯಕ್ಷ ಸಕ್ರಪ್ಪ ಮಂಗಳಪ್ಪ ಚಿನ್ನೂರು, ಶರಣಪ್ಪ ಉಮಚಗಿ, ಶೇಖರಗೌಡ್ರ ಪೋಲೀಸಪಾಟೀಲ, ರೇವಣಸಿದ್ದಯ್ಯ ಅರಳಲೆಹಿರೇಮಠ, ಶೇಖರಗೌಡ್ರ ಮಾಲಿಪಾಟೀಲ, ನಿಂಗನಗೌಡ್ರ ಮಾಲಿಪಾಟೀಲ, ಶಿವಪುತ್ರಪ್ಪ ಶಿವಶಿಂಪಿ, ರಾಜು ಚಿನ್ನೂರು, ಮಾಬುಸಾಬ ನೂರಬಾಷ, ನೂರುದ್ದೀನ ವಣಗೇರಿ, ಪ್ರಕಾಶ ಬೆಲ್ಲದ, ಶರಣಯ್ಯ ಕಲ್ಮಠ, ವಿರೇಶ ಕಮ್ಮಾರ, ಶಿವಪುತ್ರಪ್ಪ ದೇವಬಸಪ್ಪನವರ ಬ್ಯಾಳಿ, ಮಹೇಶ ಬಂಡ್ರಕಲ್, ಮುದಕಯ್ಯ ವಣಗೇರಿಮಠ, ಮಂಗಳೇಶಯ್ಯ ವಣಗೇರಿಮಠ ಇತರರಿದ್ದರು.