ಇಲ್ಲಿನ ಶ್ರೀ ಮುತ್ತಪ್ಪ ಭಗವತಿ ದೇವಾಲಯದಲ್ಲಿ ವರ್ಷಂಪ್ರತಿ ನಡೆಯುವ ಪುತ್ತರಿ ವೆಳ್ಳಾಟಂ ನಡೆಯಿತು.
ಸಿದ್ದಾಪುರ: ಇಲ್ಲಿನ ಶ್ರೀ ಮುತ್ತಪ್ಪ ಭಗವತಿ ದೇವಾಲಯದಲ್ಲಿ ವರ್ಷಂ ಪ್ರತಿ ನಡೆಯುವ ಪುತ್ತರಿ ವೆಳ್ಳಾಟಂ ಶ್ರದ್ಧಾಭಕ್ತಿಯೊಂದಿಗೆ ಶನಿವಾರ ನಡೆಯಿತು.
ಶನಿವಾರ ಸಂಜೆ 5 ಗಂಟೆಗೆ ಮುತ್ತಪ್ಪನ ಮಲೆ ಇಳಿಸಲಾಯಿತು ನಂತರ ಮುತ್ತಪ್ಪ ಮತ್ತು ತಿರುವಪ್ಪನ ವೆಳ್ಳಾಟಂ ನೆರವೇರಿತು. ಸಿದ್ದಾಪುರ ನೆಲ್ಯಹುದಿಕೇರಿ ಕರಡಿಗೋಡು ಇಂಜಿಲಿಗೆರೆ ಸೇರಿದಂತೆ ಸುತ್ತಮುತ್ತಲಿನ ನೂರಾರು ಭಕ್ತರು ಪಾಲ್ಗೊಂಡು ಮುತ್ತಪ್ಪ ದೇವರ ಆರ್ಶೀವಾದ ಹಾಗೂ ಪೈಯಂಕುತ್ತಿ ಪ್ರಸಾದ ಸ್ವೀಕರಿಸಿದರು. ವೆಳ್ಳಾಟಂ ಪ್ರಯುಕ್ತ ಆಗಮಿಸಿದ ಭಕ್ತರಿಗೆ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.ಈ ಸಂದರ್ಭ ದೇವಾಲಯದ ಅಧ್ಯಕ್ಷ ಪ್ರದೀಪ್ ಶೆಟ್ಟಿ, ಉಪಾಧ್ಯಕ್ಷ ಪೂಣಚ್ಚ, ಕಾರ್ಯದರ್ಶಿ ಶಿಜು, ಖಜಾಂಚಿ ಬಾಬು, ಗೌರವ ಅಧ್ಯಕ್ಷ ರವಿ, ಶ್ರೀಧರನ್ ನಿರ್ದೇಶಕರಾದ ಸುಬ್ರಮಣಿ, ಅನಿಲ್ ಕುಮಾರ್, ಶಿವರಾಜ್, ವಿನು, ಪ್ರಕಾಶ್, ರಾಜೀವ್ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು ಇದ್ದರು.
