ಬೀರಮಲೆ ಬೆಟ್ಟದಲ್ಲಿರುವ ಪ್ರಜ್ಞಾ ಆಶ್ರಮದಲ್ಲಿರುವ ಭಿನ್ನ ಸಾರ್ಮರ್ಥ್ಯದ ೧೫ ಮಂದಿಗೆ ಬಪ್ಪಳಿಗೆ ಅಮರ್ ಅಕ್ಬರ್ ಅಂತೋಣಿ ಸಂಘಟನೆ ವತಿಯಿಂದ ಶುಕ್ರವಾರ ಜರ್ಸಿ (ವಸ್ತ್ರ)ಗಳನ್ನು ವಿತರಣೆ ಮಾಡಲಾಯಿತು.
ಪುತ್ತೂರು: ನಗರದ ಬೀರಮಲೆ ಬೆಟ್ಟದಲ್ಲಿರುವ ಪ್ರಜ್ಞಾ ಆಶ್ರಮದಲ್ಲಿರುವ ಭಿನ್ನ ಸಾರ್ಮರ್ಥ್ಯದ ೧೫ ಮಂದಿಗೆ ಬಪ್ಪಳಿಗೆ ಅಮರ್ ಅಕ್ಬರ್ ಅಂತೋಣಿ ಸಂಘಟನೆ ವತಿಯಿಂದ ಶುಕ್ರವಾರ ಜರ್ಸಿ (ವಸ್ತ್ರ)ಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಮಹಾವೀರ ಆಸ್ಪತ್ರೆ ವೈದ್ಯ ಡಾ. ಪ್ರದೀಪ್ ಬೋರ್ಕರ್ ಮಾತನಾಡಿ, ಈ ಆಶ್ರಮದಲ್ಲಿರುವ ಮಂದಿಯನ್ನು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಸಾಕುತ್ತಿರುವ ಅಣ್ಣಪ್ಪ ಮತ್ತು ಜ್ಯೋತಿ ದಂಪತಿಯ ಕಾರ್‍ಯ ಸಮಾಜದ ಅತ್ಯುನ್ನತ ಸೇವೆಯಾಗಿದೆ ಎಂದರು.ಪತ್ರಕರ್ತ ಸಂಶುದ್ದೀನ್ ಸಂಪ್ಯ ಮಾತನಾಡಿ, ಈ ದಂಪತಿಯ ಸೇವಾ ಚಟುವಟಿಕೆಯು ಪುಣ್ಯದ ಕಾರ್ಯವಾಗಿದೆ. ಸಾಮಾಜಿಕ ಜವಾಬ್ದಾರಿಯಿಂದ ಸಮಾಜವು ಇವರ ಜತೆಗೆ ನಿಲ್ಲಬೇಕಾಗಿದೆ ಎಂದರು.ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕವಾಗಿ ಬೇವು, ಕಬ್ಬು, ಬೆಲ್ಲ ನೀಡಿ ಬಳಿಕ ವಸ್ತ್ರ ವಿತರಣೆ ನಡೆಸಲಾಯಿತು. ಡಾ. ಪ್ರದೀಪ್ ಬೋರ್ಕರ್ ಅವರನ್ನು ಸನ್ಮಾನಿಸಲಾಯಿತು. ಅಮರ್ ಅಕ್ಬರ್ ಅಂತೋಣಿ ಸಂಘಟನೆಯ ವ್ಯವಸ್ಥಾಪಕ ಸೀತಾರಾಮ ಅಯ್ಯರ್, ಉದ್ಯಮಿ ಗಣೇಶ್ ಕಾಮತ್, ಪತ್ರಕರ್ತರಾದ ಮೇಘ ಪಾಲೆತ್ತಾಡಿ, ಲೋಕೇಶ್ ಬನ್ನೂರು, ಅಜಿತ್ ಕುಮಾರ್, ರಾಜೇಶ್ ಪಟ್ಟೆ, ಅನೀಶ್ ಕುಮಾರ್, ಯತೀಶ್ ಬಪ್ಪಳಿಗೆ ಉಪಸ್ಥಿತರಿದ್ದರು.ಅಮರ್ ಅಕ್ಬರ್ ಅಂತೋಣಿ ಸಂಘಟನೆ ತಂಡದ ಮುಖ್ಯಸ್ಥ ರಝಾಕ್ ಬಪ್ಪಳಿಗೆ ಸ್ವಾಗತಿಸಿ ವಂದಿಸಿದರು.