ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಪುತ್ತೂರು ಸೆಂಟರ್ ಮತ್ತು ಯುಎಸ್ ಕಮ್ಯೂನಿಕೇಶನ್ ಸಹಭಾಗಿತ್ವದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಎದುರುಗಡೆ ಮೈದಾನದಲ್ಲಿ ಫೆ.೨೧ ರಿಂದ ೨೩ ರ ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಮುಕ್ತ ಬೃಹತ್ ತಾಂತ್ರಿಕ ವಸ್ತು ಪ್ರದರ್ಶನ
ಪುತ್ತೂರು: ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಪುತ್ತೂರು ಸೆಂಟರ್ ಮತ್ತು ಯುಎಸ್ ಕಮ್ಯೂನಿಕೇಶನ್ ಸಹಭಾಗಿತ್ವದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಎದುರುಗಡೆ ಮೈದಾನದಲ್ಲಿ ಫೆ.೨೧ ರಿಂದ ೨೩ ರ ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಮುಕ್ತ ಬೃಹತ್ ತಾಂತ್ರಿಕ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಇಂಡಿಯಾದ ಪುತ್ತೂರು ಸೆಂಟರ್‌ನ ಅಧ್ಯಕ್ಷ ಶಿವರಾಮ ಎಂ.ಎಸ್ ತಿಳಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುದ್ಧಿ ಮಾಹಿತಿ ಟ್ರಸ್ಟ್ ಮತ್ತು ಸುದ್ದಿ ಅರಿವು ಎಂಟರ್‌ಪ್ರೈಸಸ್ ಸಹಯೋಗದಲ್ಲಿ ಈ ವಸ್ತು ಪ್ರದರ್ಶನ ನಡೆಯಲಿದೆ. ಸಾರ್ವಜನಿಕರಿಗೆ ಮತ್ತು ಈಗಾಗಲೇ ಮನೆ ಕಟ್ಟುತ್ತಿರುವವರಿಗೆ ಕಟ್ಟಡ ಸಾಮಗ್ರಿಗಳ ಬಗ್ಗೆ ಸಮಗ್ರ ಮಾಹಿತಿ ಒದಗಿಸುವ ಉದ್ದೇಶದಿಂದ ಒಂದೇ ಸೂರಿನಡಿಯಲ್ಲಿ ಸಮಗ್ರ ಕಟ್ಟಡ ಕಟ್ಟುವ ಸಾಮಗ್ರಿಗಳ ಪ್ರದರ್ಶನ ಮತ್ತು ಮಾಹಿತಿ ಲಭ್ಯವಾಗಲಿದೆ ಎಂದರು.ಸಾಮಾನ್ಯ ಕಟ್ಟಡ ಸಾಮಗ್ರಿಗಳಾದ ಸಿಮೆಂಟ್, ಬ್ರಿಕ್ಸ್, ಅಗ್ರಿಗೇಟ್ ಎಂ ಸ್ಯಾಂಡ್, ಸ್ಟೀಲ್, ಪ್ಲಂಬಿಂಗ್, ಟೈಲ್ಸ್, ಫ್ಲೈವುಡ್, ಇಂಟೀರಿಯರಿಗೆ ಸಂಬಂಧಪಟ್ಟ ಪರಿಕರಗಳು, ಎಕ್ಷೀರಿಯರ್ ಉತ್ಪನ್ನಗಳು, ಸೋಲಾರ್ ಮತ್ತು ಎಲೆಕ್ಟಿಕಲ್ ಉತ್ಪನ್ನಗಳು, ಅತ್ಯಾಧುನಿಕ ಗುಣಮಟ್ಟದ ಸೆಕ್ಯೂರಿಟಿ ಉತ್ಪನ್ನಗಳು, ಯುಪಿವಿಸಿ ಡೋರ್ಸ್ ಮತ್ತು ವಿಂಡೋಸ್ ಪೈಂಟ್ ಮತ್ತು ಆಡೆಸ್ಪೀವ್, ವಾಟರ್ ಪೂಫಿಂಗ್ ಹೀಗೆ ಹತ್ತು ಹಲವಾರು ಉತ್ಪನ್ನಗಳು ವಿವಿಧ ನವ ನವೀನ ವಿನ್ಯಾಸಗಳು ನೋಡಲು ಸಿಗುತ್ತವೆ. ಪ್ರಾಪರ್ಟಿ ಸಂಬಂಧಿತ ಮಳಿಗೆಗಳನ್ನು ಕೂಡ ಇಲ್ಲಿ ಹಾಕಲಾಗಿದ್ದು ಗ್ರಾಹಕರು ಫ್ಲಾಟ್ ನಿವೇಶನಗಳನ್ನು ಖರೀದಿಸಬಹುದು ಮತ್ತು ವಿಶೇಷ ಆಕರ್ಷಣೆಯಾಗಿ ಆಟೋ ಎಕ್ಸ್ಪೋ (ಎಲ್ಲ ತರದ ವಾಹನಗಳ ಮಾರಾಟ ಮೇಳ) ಕೂಡ ಆಯೋಜಿಸಲಾಗಿದೆ ಎಂದರು.ಸುಮಾರು ೬೦-೭೦ ಕಂಪೆನಿಗಳು ಭಾಗವಹಿಸಲಿವೆ. ಸಾರ್ವಜನಿಕರು ಮುಕ್ತವಾಗಿ ಬಂದು ಕಟ್ಟಡ ಸಾಮಗ್ರಿಗಳನ್ನು ವೀಕ್ಷಿಸಿ ತಮ್ಮ ಸಮಸ್ಯೆಗಳನ್ನು ಕಂಪನಿ ಪದಾಧಿಕಾರಿಗಳಿಗೆ ಮತ್ತು ಸ್ಥಳೀಯ ಡೀಲರ್‌ಗಳ ಜೊತೆ ಮುಕ್ತವಾಗಿ ಸಮಾಲೋಚಿಸಬಹುದು. ಶನಿವಾರ, ರವಿವಾರ ಮತ್ತು ಸೋಮವಾರ ಬೆಳಗ್ಗೆ ೧೦.೩೦ ರಿಂದ ರಾತ್ರಿ ೮.೩೦ ರ ತನಕ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತದೆ ಎಂದರು.21ರಂದು ಬೆಳಗ್ಗೆ ಶಾಸಕ ಅಶೋಕ್ ರೈ ಉದ್ಘಾಟಿಸಲಿದ್ದಾರೆ. ಶ್ರೀ ಮಹಾಲಿಂಗೇಶ್ವರ ದೇವಾಲಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಪುಡಾ ಅಧ್ಯಕ್ಷ ಅಮಳ ರಾಮಚಂದ್ರ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ರಾಜೇಶ್ ರೈ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಪುತ್ತೂರು ಸೆಂಟರ್ ಕಾರ್ಯದರ್ಶಿ ವೆಂಕಟರಾಜ, ಸದಸ್ಯರಾದ ಚಂದ್ರಶೇಖರ್ ಆಳ್ವ, ನಮಿತಾ ಕುಮಾರಿ, ಯುಎಸ್ ಕಮ್ಯೂನಿಕೇಶನ್‌ನ ಉಮಾಪತಿ, ಸುದ್ದಿ ಮಾಹಿತಿ ಟ್ರಸ್ಟ್ ಮತ್ತು ಅರಿವು ಎಂಟಪ್ರೈಸಸ್‌ನ ನಮಿತಾ ಇದ್ದರು.