ಪುತ್ತೂರಿನ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ ಮುಂಭಾಗದಲ್ಲಿ ಶ್ರೀ ದೇವತಾ ಸಮಿತಿ ಕೆಸ್ಸಾರ್ಟಿಸಿ ಪುತ್ತೂರು ನಿಗಮದ ವತಿಯಿಂದ ನಿರ್ಮಿಸಲಾದ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಗೆ ೧೦ ವರ್ಷಗಳು ಪೂರ್ಣಗೊಂಡಿದ್ದು, ಈ ಸಂದರ್ಭ ಕಟ್ಟೆಗೆ ನಿರ್ಮಿಸಲಾಗಿದ್ದ ನೂತನ ಮೇಲ್ಚಾವಣಿಯ ಲೋಕಾರ್ಪಣಾ ಕಾರ್‍ಯಕ್ರಮ ಶನಿವಾರ ನಡೆಯಿತು.

ಪುತ್ತೂರು: ಪುತ್ತೂರಿನ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ ಮುಂಭಾಗದಲ್ಲಿ ಶ್ರೀ ದೇವತಾ ಸಮಿತಿ ಕೆಸ್ಸಾರ್ಟಿಸಿ ಪುತ್ತೂರು ನಿಗಮದ ವತಿಯಿಂದ ನಿರ್ಮಿಸಲಾದ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಗೆ ೧೦ ವರ್ಷಗಳು ಪೂರ್ಣಗೊಂಡಿದ್ದು, ಈ ಸಂದರ್ಭ ಕಟ್ಟೆಗೆ ನಿರ್ಮಿಸಲಾಗಿದ್ದ ನೂತನ ಮೇಲ್ಚಾವಣಿಯ ಲೋಕಾರ್ಪಣಾ ಕಾರ್‍ಯಕ್ರಮ ಶನಿವಾರ ನಡೆಯಿತು.ಬೆಳಗ್ಗೆ ಗಣಹೋಮದೊಂದಿಗೆ ಕಲಶ ಪ್ರತಿಷ್ಠೆ ನಡೆಸಲಾಯಿತು. ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಲೋಕಾರ್ಪಣೆ ಮಾಡಿದರು. ಬಳಿಕ ನಡೆದ ಸಭಾ ಕಾರ್‍ಯಕ್ರಮದಲ್ಲಿ ಮಾತನಾಡಿದ ಅವರು, ದೇವಾಲಯದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಮಾರ್ಗದರ್ಶನದಲ್ಲಿ ಸುಮಾರು ೬೦ ಕೋಟಿ ವೆಚ್ಚದಲ್ಲಿ ಪೂರ್ಣ ಜೀರ್ಣೋದ್ಧಾರ ನಡೆಸಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಮರು ನಿರ್ಮಾಣಗೊಳ್ಳುತ್ತಿರುವ ೫ ಕಟ್ಟೆಗಳ ಕೆಲಸ ಕಾರ್‍ಯಗಳು ಪೂರ್ಣಗೊಂಡಿವೆ. ಅಯ್ಯಪ್ಪನ ಗುಡಿಯ ಕೆಲಸವೂ ಆಗಲಿದೆ ಎಂದರು.

ಕೆಎಸ್ಸಾರ್ಟಿಸಿ ಪುತ್ತೂರು ವಿಭಾಗದ ಸಂಚಲನಾಧಿಕಾರಿ ಜೈಶಾಂತ್ ಅಧ್ಯಕ್ಷತೆ ವಹಿಸಿದ್ದರು. ಕೆಎಸ್ಸಾರ್ಟಿಸಿ ವಲಯ ಯಾಂತ್ರಿಕ ಅಭಿಯಂತರ ವೆಂಕಟೇಶ್, ಭದ್ರತಾ ಅಧಿಕಾರಿ ಪ್ರಸನ್ನ ಉಪಸ್ಥಿತರಿದ್ದರು.

ಶ್ರೀ ದೇವತಾ ಸಮಿತಿ ಅಧ್ಯಕ್ಷ ಲೋಕೇಶ್ ಸ್ವಾಗತಿಸಿದರು. ಘಟಕ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಕಾಶ್ ವಂದಿಸಿದರು.