ಪುತ್ತೂರಿನ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ಕಾರ್ತಿಕ ದೀಪೋತ್ಸವ, ಲಕ್ಷದೀಪೋತ್ಸವ, ಕುರಿಂದೋತ್ಸವ ಕಾರ್ಯಕ್ರಮವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಪುತ್ತೂರು: ಪುತ್ತೂರಿನ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ಕಾರ್ತಿಕ ದೀಪೋತ್ಸವ, ಲಕ್ಷದೀಪೋತ್ಸವ, ಕುರಿಂದೋತ್ಸವ ಕಾರ್ಯಕ್ರಮವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.ಬೆಳಗ್ಗೆ ದೇವಳದಲ್ಲಿ ಪ್ರಾರ್ಥನೆ, ವನಭೋಜನ ಕಟ್ಟಿಗೆ ದೇವರು ಚಿತ್ತೈಸಿ ಧಾತ್ರಿ ಹೋಮ, ಮಧ್ಯಾಹ್ನ ವನದಲ್ಲಿ ದೇವರಿಗೆ ಮಹಾಪೂಜೆ ನಡೆಯಿತು. ಸಂಜೆ ಗಂಟೆ 7ಕ್ಕೆ ದೀಪ ನಮಸ್ಕಾರ, ರಾತ್ರಿ ಪೂಜೆ, ದೇವರು ವನಭೋಜನ ಕಟ್ಟೆಯಲ್ಲಿ ಆಸೀನರಾದ ಬಳಿಕ ಒಂದುವರೆ ಗಂಟೆಗಳ ಕಾಲ ಆಕರ್ಷಕ ಸುಡುಮದ್ದು ಪ್ರದರ್ಶನ ನಡೆಯಿತು.
ಬಳಿಕ ದೇವರ ಪೇಟೆ ಸವಾರಿ ಉತ್ಸವ, ಕಟ್ಟೆಪೂಜೆಗಳು, ದರ್ಬೆ ವೃತ್ತದಲ್ಲಿ ಕುರಿಂದೋತ್ಸವ ನಡೆಯಿತು. ಬಳಿಕ ಪರ್ಲಡ್ಕ ರಸ್ತೆಯಾಗಿ ಸಾಗಿ ದೇವಸ್ಥಾನದಲ್ಲಿ ಸವಾರಿ ಸಮಾಪ್ತಿಯಾಯಿತು. ಈ ಸಂದರ್ಭದಲ್ಲಿ ದರ್ಬೆಯಲ್ಲಿ ಭಜನಾ ಕಾರ್ಯಕ್ರಮ ನಡೆದವು. ದೇವಸ್ಥಾನದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಸದಸ್ಯರು, ಭಕ್ತರು ಉಪಸ್ಥಿತರಿದ್ದರು.