ಪುತ್ತೂರು ತಾಲೂಕು ಪಂಚಾಯತ್: ವಿಶ್ವ ಸುರಕ್ಷತಾ ಅಂತರ್ಜಾಲ ದಿನ

| Published : Feb 12 2025, 12:30 AM IST

ಪುತ್ತೂರು ತಾಲೂಕು ಪಂಚಾಯತ್: ವಿಶ್ವ ಸುರಕ್ಷತಾ ಅಂತರ್ಜಾಲ ದಿನ
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಮತ್ತು ತಾಲೂಕು ಪಂಚಾಯಿತಿ ಪುತ್ತೂರು ವತಿಯಿಂದ ವಿಶ್ವ ಸುರಕ್ಷತಾ ಅಂತರ್ಜಾಲ ದಿನಾಚರಣೆ ಸಂಪನ್ನಗೊಂಡಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಜಗತ್ತು ಇಂಟರ್ನೆಟ್ ಎಂಬ ಜಾಲದಲ್ಲಿ ಮುಳುಗಿದ್ದು, ಪ್ರಸ್ತುತ ವಿವಿಧ ರೀತಿಯಲ್ಲಿ ವಂಚಿಸುವ ಈ ಜಾಲತಾಣವು ಸಮಾಜವನ್ನು ಕಾಡುತ್ತಿದೆ. ಆದ್ದರಿಂದ ಇಂಟರ್ನೆಟ್ ಬಳಕೆದಾರರು ಎಚ್ಚರಿಕೆಯಿಂದ ಇರಬೇಕು ಎಂದು ಪುತ್ತೂರು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ತಿಳಿಸಿದ್ದಾರೆ.

ಮಂಗಳವಾರ ಪುತ್ತೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಮತ್ತು ತಾಲೂಕು ಪಂಚಾಯಿತಿ ಪುತ್ತೂರು ವತಿಯಿಂದ ನಡೆದ ವಿಶ್ವ ಸುರಕ್ಷತಾ ಅಂತರ್ಜಾಲ ದಿನದಲ್ಲಿ ಅವರು ಮಾತನಾಡಿದರು. ಮೊಬೈಲ್‌ನಲ್ಲಿ ಹಲವು ಆನ್‌ಲೈನ್ ವ್ಯವಹಾರವನ್ನು ಮಾಡುತ್ತಿದ್ದೇವೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡು ಹಲವು ವಂಚಕರು ದುರುಪಯೋಗಪಡಿಸಿಕೊಳ್ಳುವ ಕಾರ್ಯ ಮಾಡುತ್ತಿದ್ದಾರೆ ಹಾಗಾಗಿ ಒಟಿಪಿ ಇನ್ನಿತರ ಕೋಡ್ ಗಳನ್ನು ಅನ್ಯರಿಗೆ ನೀಡದೆ ಅವಶ್ಯಕತೆಗೆ ತಕ್ಕಂತೆ ಬಳಸಿಕೊಳ್ಳಬೇಕಾಗಿ ತಿಳಿಸಿದರು.

ಪುತ್ತೂರು ನಗರ ಠಾಣೆ ಉಪನಿರೀಕ್ಷಕ ಆಂಜನೇಯ ರೆಡ್ಡಿ ಮಾತನಾಡಿ, ಹಿಂದೆ ವಂಚನೆಗಳು ದರೋಡೆ, ಕಳ್ಳತನ ಇಂತಹ ವಂಚನೆಗಳಾಗುತ್ತಿತ್ತು. ಆದರೆ ಈಗ ಆನ್ ಲೈನ್ ಮೂಲಕ ಉದ್ಯೋಗಾವಕಾಶ, ಹಣಕಾಸು, ವೈಯಕ್ತಿಕ ಮಾಹಿತಿ, ದಾರಿತಪ್ಪಿಸುವ, ಸುಳ್ಳು, ಟ್ರೋಲ್, ಬೆದರಿಕೆ, ಕಿರುಕುಳ, ಅನಿಯಂತ್ರಿತ ವೆಚ್ಚಗಳು, ಸ್ಕ್ಯಾಮ್ ಹೀಗೆ ಹಲವು ರೀತಿಯ ಅಪರಾಧಗಳು ನಡೆಯುತ್ತಿದೆ. ಹಾಗೂ ಯಾವುದೇ ಆನ್ ಲೈನ್ ಅಥವಾ ಸೈಬರ್ ಅಪರಾಧಗಳಾದಾಗ ೧೯೩೦ ಗೆ ಕರೆಮಾಡಿ ದೂರು ದಾಖಲಿಸಬಹುದು. ಯಾವುದೇ ಬ್ಯಾಂಕ್‌ಗಳು ಕರೆ ಮಾಡಿ ಓಟಿಪಿಯನ್ನು ಕೇಳುವುದಿಲ್ಲ. ಯಾರಿಗೂ ಅನಗತ್ಯ ಒಟಿಪಿ ನೀಡುವ ಕೆಲಸವನ್ನು ಮಾಡಬೇಡಿ. ಸೈಬರ್ ಅಪರಾಧದ ಕುರಿತ ಹೆಚ್ಚು ಹೆಚ್ಚು ಕಾರ್ಯಾಗಾರಗಳಿಗೆ ಭಾಗವಹಿಸಿ ವಂಚನೆಗಳಿಗೆ ಒಳಗಾಗದಂತೆ ಎಚ್ಚರದಿಂದ ಇರಬೇಕು ಎಂದರು.

ಪ್ರಾತ್ಯಕ್ಷಿಕೆಯ ಮೂಲಕ ಸೈಬರ್ ಅಪರಾಧಗಳ ಕುರಿತು ಜಾಗೃತಿ ಮೂಡಿಸಲಾಯಿತು.

ತಾ.ಪಂ. ವ್ಯವಸ್ಥಾಪಕ ಜಯಪ್ರಕಾಶ್ ಸ್ವಾಗತಿಸಿದರು. ತಾ.ಪಂ.ಐಇಸಿ ಸಂಯೋಜಕ ಭರತ್ ರಾಜ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.