ಬಕ್ರೀದ್ ಸಂದರ್ಭ ಗೋಹತ್ಯೆ, ಅಕ್ರಮ ಗೋ ಸಾಗಾಟ ಮತ್ತು ಬಲಿ ನೀಡುವುದು ಅವ್ಯಾಹತವಾಗಿ ನಡೆಯುತ್ತಿದೆ. ಇದನ್ನು ತಡೆಯಲು ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ಗೋವುಗಳನ್ನು ಹತ್ಯೆ ನಡೆಸಿದ ಸ್ಥಳ, ಮನೆ, ವಾಹನಗಳನ್ನು ಮುಟ್ಟುಗೋಲು ಮಾಡುವ ಹಾಗೂ ಗೋ ಕಳ್ಳರ ಪತ್ತೆಗಾಗಿ ಆಧುನಿಕ ತಂತ್ರಜ್ಞಾನವನ್ನು ಬಳಸುವ ವ್ಯವಸ್ಥೆ ಆಗಬೇಕು ಎಂದು ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ

ಪುತ್ತೂರು: ಬಕ್ರೀದ್ ಸಂದರ್ಭ ಗೋಹತ್ಯೆ, ಅಕ್ರಮ ಗೋ ಸಾಗಾಟ ಮತ್ತು ಬಲಿ ನೀಡುವುದು ಅವ್ಯಾಹತವಾಗಿ ನಡೆಯುತ್ತಿದೆ. ಇದನ್ನು ತಡೆಯಲು ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ಗೋವುಗಳನ್ನು ಹತ್ಯೆ ನಡೆಸಿದ ಸ್ಥಳ, ಮನೆ, ವಾಹನಗಳನ್ನು ಮುಟ್ಟುಗೋಲು ಮಾಡುವ ಹಾಗೂ ಗೋ ಕಳ್ಳರ ಪತ್ತೆಗಾಗಿ ಆಧುನಿಕ ತಂತ್ರಜ್ಞಾನವನ್ನು ಬಳಸುವ ವ್ಯವಸ್ಥೆ ಆಗಬೇಕು ಎಂದು ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಬ್ಬದ ಸಂದರ್ಭ ಹೆಚ್ಚಿನ ಗೋಸಾಗಾಟ ನಡೆಯುವುದರಿಂದ ಪೊಲೀಸ್ ಇಲಾಖೆ ಮೇ 28ರ ವರೆಗೆ ವಿಶೇಷ ಬಂದೋಬಸ್ತ್. ಕಠಿಣ ಕಾನೂನು ಜಾರಿಗೊಳಿಸಬೇಕು. ಹೆಚ್ಚಿನ ಪೊಲೀಸ್ ಪಡೆಯನ್ನು ಬಳಸುವ ಜತೆಗೆ ಆರೋಪಿಗಳ ಪತ್ತೆಗೆ ಶ್ವಾನದಳ, ಆಧುನಿಕ ತಂತ್ರಜ್ಞಾನವನ್ನು ಬಳಸಬೇಕು ಎಂದರು. ಪೊಲೀಸ್ ಇಲಾಖೆ ಗೋಸಾಗಾಟ, ಹತ್ಯೆಯನ್ನು ತಡೆಯದೇ ಇದ್ದರೆ ವಿಶ್ವಹಿಂದೂ ಪರಿಷತ್ ಹೋರಾಟವನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಕೋಶಾಧಿಕಾರಿ ಮಾಧವ ಪೂಜಾರಿ, ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ, ಸಹ ಸಂಯೋಜಕರಾದ ದಿನೇಶ್ ಚಾರ್ಮಾಡಿ, ಸಂತೋಷ್ ಉಪ್ಪಿನಂಗಡಿ ಉಪಸ್ಥಿತರಿದ್ದರು.