ಪುತ್ತೂರು ಕೇಂದ್ರ ಸರಕಾರದ ಎನ್‌ಟಿಎ ಪ್ರಾಧಿಕಾರ ನಡೆಸಿದ ೨೦೨೬ನೇ ಸಾಲಿನ ಜೆಇಇ ಮೈನ್ಸ್ ಪ್ರವೇಶ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ರ‍್ಯಾಂಕ್ ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.
ಪುತ್ತೂರು ಕೇಂದ್ರ ಸರಕಾರದ ಎನ್‌ಟಿಎ ಪ್ರಾಧಿಕಾರ ನಡೆಸಿದ ೨೦೨೬ನೇ ಸಾಲಿನ ಜೆಇಇ ಮೈನ್ಸ್ ಪ್ರವೇಶ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ರ‍್ಯಾಂಕ್ ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳಾದ ರಶ್ಮಿ ಕೆ.ಆರ್. (ಮಡಿಕೇರಿಯ ರಮೇಶ್ ಕೆ. ಕೆ. ಹಾಗೂ ರೇಣುಕಾ ಬಿ.ವಿ. ದಂಪತಿ ಪುತ್ರಿ) ಬಿ. ಪ್ಲಾನಿಂಗ್ ೨೦೯೮ನೇ ರ‍್ಯಾಂಕ್, ಬಿ ಆರ್ಚ್ ೩೩೩೫ನೇ ರ‍್ಯಾಂಕ್, ದೀಕ್ಷಾ ಜೆ. (ಕಾಸರಗೋಡಿನ ಕುಂಬಳೆಯ ಎಸ್. ನಾರಾಯಣ ಹಾಗೂ ಪುಷ್ಪಾ ಕೆ. ದಂಪತಿ ಪುತ್ರಿ) ಬಿ. ಪ್ಲಾನಿಂಗ್ ೧೬೫೦ನೇ ರ‍್ಯಾಂಕ್, ಬಿ ಆರ್ಚ್ ೨೭೩೪ನೇ ರ‍್ಯಾಂಕ್ ಹಾಗೂ ಅದಿತಿ ಯು. (ಬೆಂಗಳೂರಿನ ಉಮಾಶಂಕರ್ ಹಾಗೂ ಸುಮಾ ಕೆ.ಡಿ. ದಂಪತಿ ಪುತ್ರಿ) ಬಿ ಪ್ಲಾನಿಂಗ್ ೨೫೯೭ನೇ ರ‍್ಯಾಂಕ್, ಬಿ ಆರ್ಚ್ ೧೫೮೫೭ನೇ ರ‍್ಯಾಂಕ್ ಗಳಿಸಿದ್ದಾರೆ. ಸಾಧನೆಗೈದ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ.