ಪುತ್ತೂರು: ಆಯುರ್ವೇದ ತಜ್ಞ ವೈದ್ಯ ಡಾ.ರಾಘವೇಂದ್ರ ಪ್ರಸಾದ್ ಬಂಗಾರಡ್ಕ ನೇತೃತ್ವದ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ, (www.Prasadini.com) ನರಿಮೊಗರು, ಪುತ್ತೂರು ಆಶ್ರಯದಲ್ಲಿ "ಯಕ್ಷ ಪ್ರಸಾದಿನೀ-2026 " ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ, ಶ್ರೀ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ, ಪೆರ್ಡೂರು ಅವರಿಂದ, ಪೌರಾಣಿಕ ಕಥಾನಕ "ಕಾರ್ತವೀರ್ಯ -ಚಕ್ರ ಚಂಡಿಕೆ " ಪೌರಾಣಿಕ ಯಕ್ಷಗಾನ ಪ್ರದರ್ಶನ ಜರುಗಿತು.ರಾಘವೇಂದ್ರ ಆಚಾರ್ಯ ಜನ್ಸಾಲೆ ಹಾಗೂ ಪ್ರಸನ್ನಭಟ್ ಬಾಳ್ಕಲ್ ಭಾಗವತಿಕೆಯೊಂದಿಗೆ ಪಾತ್ರಧಾರಿಗಳ ಭಾಗವಹಿಸುವಿಕೆಯಲ್ಲಿ ಆಯೋಜಿಸಲಾಯಿತು.ನೀಲ್ಕೋಡು ಶಂಕರ ಹೆಗಡೆ ಕಾರ್ತವೀರ್ಯನಾಗಿ , ಕಾರ್ತಿಕ್ ಚಿಟ್ಟಾಣಿ ಬರ್ಬರಿಕನಾಗಿ , ಸನ್ಮಯ್ ಕೃಷ್ಣ ಮಳವಳ್ಳಿ ಕೃಷ್ಣನಾಗಿ , ನಾಗರಾಜ್ ಭಟ್ ಕುಂಕಿಪಾಲ ವತ್ಸಲೆಯಾಗಿ ಮಿಂಚಿದರು.ಸಾವಿರಕ್ಕೂ ಮಿಕ್ಕಿದ ಪ್ರೇಕ್ಷಕರು ಯಕ್ಷಗಾನ ವೀಕ್ಷಿಸಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು .ಸಂಘಟಕ ಡಾ.ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಹಾಗೂ ಡಾ .ಶ್ರುತಿ ಎಂ.ಎಸ್ . ಸ್ವಾಗತಿಸಿದರು.ಕಾರ್ಯಕ್ರಮದ ಆಯೋಜಕ ಡಾ.ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಮಾತನಾಡಿ, ಚಂದ್ರ ಗ್ರಹಣ ಬರುತ್ತದೆ ಹೋಗುತ್ತದೆ. ಆದರೆ ಮನಸ್ಸು ಬುದ್ಧಿಗಳಿಗೆ ಹಿಡಿದ ಗ್ರಹಣ ಯಾವಾಗಲೂ ಇರುತ್ತದೆ. ಅದಕ್ಕೆ ಮೋಕ್ಷ ನೀಡುವುದಕ್ಕೆ ಯಕ್ಷಗಾನದಂತಹ ಆರಾಧನಾ ಕಲೆಗಳಿಗೆ ಸಾಮರ್ಥ್ಯ ಇದೆ. ಯಕ್ಷಗಾನ ಕೇವಲ ಮನರಂಜನೆ ಅಲ್ಲ , ಉಪಾಸನೆ ಎಂದು ತಿಳಿಸಿದರು.ಸ್ಥಳದಾನದ ಸಹಕಾರವನ್ನು ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ನರಿಮೊಗರು ಮುಖ್ಯಗುರು, ಸಿಬ್ಬಂದಿವರ್ಗ , ಎಸ್ .ಡಿ .ಎಂ .ಸಿ. ಅಧ್ಯಕ್ಷರು ಹಾಗೂ ಸದಸ್ಯರು , ಶ್ರೀ ಮೃತ್ಯುಂಜಯ ದೇವಸ್ಥಾನದ ಆಡಳಿತಾಧಿಕಾರಿಗಳು, ಅರ್ಚಕರು ಹಾಗೂ ಸಿಬ್ಬಂದಿವರ್ಗ, ನರಿಮೊಗರಿನ ಮರಾಟಿ ಸಮಾಜಸೇವಾ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಜರಿದ್ದರು. ನರಿಮೊಗರು ಸುವರ್ಣ ಎಸ್ಟೇಟ್ ವೇದನಾಥ್ ಸುವರ್ಣ, ವಿಶ್ರಾಂತ ಪ್ರಾಚಾರ್ಯ ದುಗ್ಗಪ್ಪ , ಮೃತ್ಯುಂಜಯೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಕೆ .ಟಿ .ಗೋಪಾಲ್, ಸಂಚಾಲಕ ಗಂಗಾಧರ ಸುವರ್ಣ , ಸ್ಥಳೀಯ ಸಾಮಾಜಿಕ ಮುಂದಾಳು ಪ್ರವೀಣ್ ಆಚಾರ್ಯ , ಸಾಮಾಜಿಕ ಮುಂದಾಳು ವಿಶ್ವೇಶ್ವರ ಭಟ್ ಬಂಗಾರಡ್ಕ, ನರಿಮೊಗರು ಶಾಲಾ ಎಸ್ .ಡಿ.ಎಂ .ಸಿ .ಅಧ್ಯಕ್ಷ ಪ್ರವೀಣ್ ಪೂಜಾರಿ , ಮುಖ್ಯಗುರು ಚರಣ್ ಕುಮಾರ್ , ಶಿಕ್ಷಕಿ ಶ್ರೀಲತಾ , ಪೂರ್ಣಿಮಾ ಸೋಪ್ ಇಂಡಸ್ಟ್ರಿಯ ಶ್ರೀನಿವಾಸ್ ರಾವ್ , ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಸದಸ್ಯ ಈಶ್ವರ ಬಡೇಕಾರ್ , ಕೆ .ಎಸ್ .ಆರ್ .ಟಿ .ಸಿ ಡಿಪೋ ಮ್ಯಾನೇಜರ್ ಸುಬ್ರಮಣ್ಯ ಪ್ರಕಾಶ್, ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷ ಮಹಾಲಿಂಗ ನಾಯ್ಕ್ , ಕೆ .ಎಂ .ಎಫ್ ಉದ್ಯೋಗಿ ಸದಾಶಿವ ನಾಯ್ಕ್, ಸಾಮಾಜಿಕ ಮುಂದಾಳು ಅರುಣ್ ಕುಮಾರ್ ಪುತ್ತಿಲ, ನಾರಾಯಣ ಬನ್ನಿಂತಾಯ , ವೈದ್ಯ ಡಾ . ಸುರೇಶ್ ಪುತ್ತೂರಾಯ, ರೋಟರಿ ಕ್ಲಬ್ ಅಧ್ಯಕ್ಷ ಡಾ . ಪ್ರಕಾಶ್ ಬಂಗಾರಡ್ಕ ಮತ್ತಿತರರು ಉಪಸ್ಥಿತರಿದ್ದರು .
ಶಾಸಕ ಅಶೋಕ್ ರೈ ಕೋಡಿಮ್ಬಾಡಿ ಹಾಗೂ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ್ ಭಟ್ ಶುಭ ಹಾರೈಸಿದರು. ಪ್ರಸಾದಿನೀ ಆಯುರ್ವೇದ ಆಸ್ಪತ್ರೆ ಸಿಬ್ಬಂದಿ ವರ್ಗ, ಮುಖ್ಯ ಜೀವವಿಮಾ ಸಲಹೆಗಾರ ಎಂ .ಎಸ್. ಭಟ್ ಸಹಕರಿಸಿದರು.ಯಕ್ಷ ಪ್ರಸಾದಿನೀ-2026 ಯಕ್ಷಗಾನ ಪ್ರದರ್ಶನ ಸಂಪನ್ನ
ಆಯುರ್ವೇದ ತಜ್ಞ ವೈದ್ಯ ಡಾ.ರಾಘವೇಂದ್ರ ಪ್ರಸಾದ್ ಬಂಗಾರಡ್ಕ ನೇತೃತ್ವದ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ, (www.Prasadini.com) ನರಿಮೊಗರು, ಪುತ್ತೂರು ಆಶ್ರಯದಲ್ಲಿ "ಯಕ್ಷ ಪ್ರಸಾದಿನೀ-2026 " ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ, ಶ್ರೀ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ, ಪೆರ್ಡೂರು ಅವರಿಂದ, ಪೌರಾಣಿಕ ಕಥಾನಕ "ಕಾರ್ತವೀರ್ಯ -ಚಕ್ರ ಚಂಡಿಕೆ " ಪೌರಾಣಿಕ ಯಕ್ಷಗಾನ ಪ್ರದರ್ಶನ ಜರುಗಿತು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
