ಸಾರಾಂಶ
ದೊಡ್ಡ ಪ್ರಮಾಣದ ಆಲೋಚನೆಗಳು ಮೂಡಬೇಕಾದರೆ ಉತ್ತಮವಾದ ಕಾರ್ಯಗಳ ಮಾಡಬಲ್ಲೆ ಎಂಬ ಇಚ್ಛಾಶಕ್ತಿಯೊಂದಿಗೆ ದೃಢಸಂಕಲ್ಪ ಮಾಡಬೇಕು.
ಕನ್ನಡಪ್ರಭ ವಾರ್ತೆ ಹರಿಹರ
ಸಾರ್ಥಕ ಬದುಕು ಕಟ್ಟಿಕೊಳ್ಳಲು ಪರಿಶ್ರಮದ ಅವಶ್ಯಕತೆ ಇದ್ದು, ಅದರೊಂದಿಗೆ ಧ್ಯಾನ ಸಾಧನೆಯಿಂದ ಗುಣಾತ್ಮಕ ವ್ಯಕ್ತಿತ್ವ ಬೆಳೆಯುತ್ತದೆ. ಇದರಿಂದ ಮನುಷ್ಯನಲ್ಲಿ ಧನಾತ್ಮಕ ಅಲೋಚನೆ ಹುಟ್ಟಲು ಸಾಧ್ಯ ಎಂದು ಸ್ವಾಮಿ ವಿವೇಕಾನಂದ ಆಶ್ರಮದ ಶ್ರೀ ಶಾರದೇಶಾನಂದ ಜೀ ಮಹಾರಾಜ ಕಿವಿಮಾತು ಹೇಳಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟೀಯ ಸೇವಾ ಯೋಜನೆ ವತಿಯಿಂದ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ದೊಡ್ಡ ಪ್ರಮಾಣದ ಆಲೋಚನೆಗಳು ಮೂಡಬೇಕಾದರೆ ಉತ್ತಮವಾದ ಕಾರ್ಯಗಳ ಮಾಡಬಲ್ಲೆ ಎಂಬ ಇಚ್ಛಾಶಕ್ತಿಯೊಂದಿಗೆ ದೃಢಸಂಕಲ್ಪ ಮಾಡಬೇಕು ಎಂದರು.
ವಿದ್ಯಾದಾಯಿನಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮೇಘಾಲಯದ ಅನಾಥ ಮಕ್ಕಳಿಗೆ ಕಾಲೇಜಿನ ಅಧ್ಯಾಪಕರು ಪುಸ್ತಕ, ಪೆನ್ನು, ಬಟ್ಟೆ ಮತ್ತು ಆಹಾರ ಧಾನ್ಯ ಸೇರಿ ಇನ್ನಿತರ ಶೈಕ್ಷಣಿಕ ಉಪಯುಕ್ತ ಸಾಮಗ್ರಿಗಳ ಕೊಡುಗೆಯಾಗಿ ಈ ಸಮಯದಲ್ಲಿ ನೀಡಿದರು. ನಂತರ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.ಪ್ರಾಂಶುಪಾಲ ಪ್ರೊ.ಎಚ್.ವಿರುಪಾಕ್ಷಪ್ಪ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾದಾಯಿನಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಡಿ.ಜಿ.ರಾಜೇಶ್ವರಿ ಮಾತನಾಡಿದರು. ಐಕ್ಯೂಎಸ್‌ಸಿ ಸಂಯೋಜಕ ಜಿ.ಎಸ್.ಸುರೇಶ, ಪಿ.ಎಸ್.ಐ ಶ್ರೀಪತಿ ಗಿನ್ನಿ, ಡಾ.ರಮೇಶ್.ಎಂ.ಎನ್, ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಡಾ.ಚಂದ್ರಶೇಖರ್ ಎಸ್., ದಾವಣಗೆರೆ ವಿವಿಯ ಅಧ್ಯಾಪಕ ಡಾ.ಉಚ್ಚೇಗೌಡ, ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಎಸ್.ಗೌರಮ್ಮ ಉಪಸ್ಥಿತರಿದ್ದರು.
ಪ್ರಥಮ ಬಿ.ಎ. ವಿದ್ಯಾರ್ಥಿನಿ ಅರ್ಪಿತಾ ಪ್ರಾರ್ಥಿಸಿದರು. ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ.ಕುಮಾರ ಎಂ. ಸ್ವಾಗತಿಸಿದರು. ಪ್ರಥಮ ಬಿ.ಕಾಂ ವಿದ್ಯಾರ್ಥಿನಿ ಅನುರಾಧಾ ನಿರೂಪಿಸಿದರು. ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ.ಬಿ.ಕೆ.ಮಂಜುನಾಥ್ ವಂದಿಸಿದರು.