೩೦ ವರ್ಷಗಳ ನಂತರವೂ ಉಪನ್ಯಾಸಕರಿಗೆ ಹೃದಯದಲ್ಲಿ ಸ್ಥಾನ ನೀಡಿ, ಕೃತಜ್ಞತೆಯಿಂದ ಗುರುವಂದನಾ ಕಾರ್ಯಕ್ರಮ ಆಯೋಜಿಸಿ, ನೀವು ನೀಡುತ್ತಿರುವ ಗೌರವ ಸಮರ್ಪಣೆಯೂ ನಮ್ಮ ಗುರುಗಳಿಗೆ ಸಲ್ಲುತ್ತದೆ ಎಂದು ನಿ. ಪ್ರಾಂಶುಪಾಲರಾದ ನಿರ್ವಾಣೆ ಗೌಡ್ರು ಅಭಿಪ್ರಾಯಪಟ್ಟರು. ಹೊಳೆನರಸೀಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ೧೯೯೬-೧೯೯೯ನೇ ಸಾಲಿನ ಪದವಿ ವಿದ್ಯಾರ್ಥಿ ಬಳಗದ ವತಿಯಿಂದ ಭಾನುವಾರ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹೊಳೆನರಸೀಪುರ: ೩೦ ವರ್ಷಗಳ ನಂತರವೂ ಉಪನ್ಯಾಸಕರಿಗೆ ಹೃದಯದಲ್ಲಿ ಸ್ಥಾನ ನೀಡಿ, ಕೃತಜ್ಞತೆಯಿಂದ ಗುರುವಂದನಾ ಕಾರ್ಯಕ್ರಮ ಆಯೋಜಿಸಿ, ನೀವು ನೀಡುತ್ತಿರುವ ಗೌರವ ಸಮರ್ಪಣೆಯೂ ನಮ್ಮ ಗುರುಗಳಿಗೆ ಸಲ್ಲುತ್ತದೆ ಎಂದು ನಿ. ಪ್ರಾಂಶುಪಾಲರಾದ ನಿರ್ವಾಣೆ ಗೌಡ್ರು ಅಭಿಪ್ರಾಯಪಟ್ಟರು.

ತಾಲೂಕಿನ ಕಟ್ಟಬೆಳಗುಲಿ ಗ್ರಾಮದ ಪಾಲಿಕಾ ರೆಸಾರ್ಟ್‌ನಲ್ಲಿ ಹೊಳೆನರಸೀಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ೧೯೯೬-೧೯೯೯ನೇ ಸಾಲಿನ ಪದವಿ ವಿದ್ಯಾರ್ಥಿ ಬಳಗದ ವತಿಯಿಂದ ಭಾನುವಾರ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜೀವನದಲ್ಲಿ ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸುವ ಗುಣ ಹಾಗೂ ಸ್ಮರಿಸುವ ಗುಣವೂ ಯಶಸ್ವಿ ಜೀವನಕ್ಕೆ ಮುನ್ನುಡಿಯಾಗಿದೆ ಎಂದರು.

ನಿವೃತ್ತ ಪ್ರಾಂಶುಪಾಲ ಇರ್ಷಾದ್ ಎಂ.ಬಿ. ಮಾತನಾಡಿ ಸಾರ್ಥಕ ಬದುಕು ರೂಪಿಸಿಕೊಂಡ ನೀವು ನಿಮ್ಮ ಗುರುಗಳು ಹಾಗೂ ಮಾರ್ಗದರ್ಶಕರಿಗೆ ನೀಡುತ್ತಿರುವ ಗೌರವ ಅಮೂಲ್ಯವಾಗಿದೆ ಎಂದು ಅತ್ಮೀಯವಾಗಿ ಅಭಿನಂದಿಸಿದರು.ನಿ. ಪ್ರಾಂಶುಪಾಲರಾದ ನಿರ್ವಾಣೆಗೌಡ್ರು ಹಾಗೂ ಇರ್ಷಾದ್ ಎಂಬಿ, ನಿ. ಉಪನ್ಯಾಸರಾದ ಬೋರೇಗೌಡ್ರು, ಆನಂದಸ್ವಾಮಿ, ಚೇತನ್‌ಕುಮಾರ್, ಪ್ರಭಾಮಣಿ, ಸಂಪತ್ತೇಗೌಡ್ರು, ಪ್ರಭುಶಂಕರ್‌ ಹಾಗೂ ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಬಿ.ಕೆ.ವೆಂಕಟೇಶ ಅಧ್ಯಕ್ಷತೆ ವಹಿಸಿ, ಮಾತನಾಡಿದರು ಹಾಗೂ ನಾಗೇಂದ್ರಪ್ರಭು ಜಿ.ಡಿ. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಮುನರಾಣಿ ಪ್ರಾರ್ಥಿಸಿದರು, ಆನಂದ ಜಿ.ಆರ್‌. ಸ್ವಾಗತಿಸಿದರು, ಶಿವಣ್ಣ ಯು.ಸಿ. ವಂದಿಸಿದರು ಹಾಗೂ ತಮ್ಮಯ್ಯ ಆರ್‌.ಜೆ. ಮತ್ತು ಬಲರಾಮೇಗೌಡ ಆರ್‌.ಎಸ್. ನಿರೂಪಿಸಿದರು. ಗೀತಾ, ವರದರಾಜು, ಮುಕ್ತಾರ್ ಶರೀಫ್, ಕುಸುಮ, ರೂಪ ಇತರರು ಇದ್ದರು.