ಸಾರಾಂಶ
ಹೊಸಕೋಟೆ: ಸಂಘದ ಬಡಾವಣೆಯಲ್ಲಿ ನಿವೇಶನ ಹೊಂದಿರುವ ಸದಸ್ಯರಿಗೆ ಶೀಘ್ರದಲ್ಲಿಯೇ ಕ್ರಯಪತ್ರ ನೋಂದಣಿ ಮಾಡಿಕೊಡಲು ನಿರ್ಧರಿಸಲಾಗಿದೆ ಎಂದು ತಾಲೂಕು ಸರಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಎಂ. ನರೇಶ್ ತಿಳಿಸಿದರು.
ಹೊಸಕೋಟೆ: ಸಂಘದ ಬಡಾವಣೆಯಲ್ಲಿ ನಿವೇಶನ ಹೊಂದಿರುವ ಸದಸ್ಯರಿಗೆ ಶೀಘ್ರದಲ್ಲಿಯೇ ಕ್ರಯಪತ್ರ ನೋಂದಣಿ ಮಾಡಿಕೊಡಲು ನಿರ್ಧರಿಸಲಾಗಿದೆ ಎಂದು ತಾಲೂಕು ಸರಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಎಂ. ನರೇಶ್ ತಿಳಿಸಿದರು.
ನಗರದ ಟಿಜಿ ಬಡಾವಣೆಯಲ್ಲಿರುವ ಸಂಘದ ಆವರಣದಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಸುಮಾರು 210 ಸದಸ್ಯರ ಒಡಂಬಡಿಕೆ ನೋಂದಣಿಯಾಗಿದ್ದು, ಉಳಿದಿರುವ 50-60 ನಿವೇಶನದಾರರ ಒಡಂಬಡಿಕೆ ಕಾರ್ಯವನ್ನು ಒಂದು ವಾರದೊಳಗಾಗಿ ಪೂರ್ಣಗೊಳಿಸಲಾಗುವುದು. ಗುಂಪು ಮನೆಗಳ ನಿರ್ಮಾಣ ಕಾರ್ಯವನ್ನು ಸಹ ಅಕ್ಟೋಬರ್‌ನಲ್ಲಿ ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಸದಸ್ಯರುಗಳು ತಮ್ಮ ಬದಲಾವಣೆಯಾಗಿರುವ ವಿಳಾಸವನ್ನು ಸಂಘಕ್ಕೆ ತಿಳಿಸುವ ಮೂಲಕ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯಲು ಸಾಧ್ಯವಾಗಲಿದೆ ಎಂದು ಹೇಳಿದರು.ಸಂಘದ ಉಪಾಧ್ಯಕ್ಷ ಪಿ.ರಾಜಣ್ಣ, ನಿರ್ದೇಶಕರಾದ ಬಿ.ಶ್ರೀನಿವಾಸ್, ಎಚ್.ಗೋವಿಂದರಾಜ್, ಎಂ.ವನಜಾಕ್ಷಿ, ಟಿ.ಎಸ್.ವೆಂಕಟರಮಣಪ್ಪ, ಜಿ.ಆರ್.ಪ್ರಕಾಶ್, ಸಂಘದ ಹಿತರಕ್ಷಣಾ ಸಮಿತಿ ಸದಸ್ಯರಾದ ಡಾ: ಸಿ.ಎನ್.ನಾರಾಯಣಸ್ವಾಮಿ, ಬಿ.ಚನ್ನಪ್ಪ, ಮುನಿಸ್ವಾಮಿಗೌಡ, ಸತ್ಯರಾಜ್ ಉಪಸ್ಥಿತರಿದ್ದರು.
ಫೋಟೋ: 19 ಹೆಚ್‌ಎಸ್‌ಕೆ 2ಹೊಸಕೋಟೆ ನಗರದ ಟಿಜಿ ಬಡಾವಣೆಯಲ್ಲಿರುವ ನಿವೃತ್ತ ಸರ್ಕಾರಿ ನೌಕರರ ಸಂಘದ ಆವರಣದಲ್ಲಿ ನಡೆದ ಸರಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯನ್ನು ಸಂಘದ ಅಧ್ಯಕ್ಷ ಎಂ.ನರೇಶ್ ಉದ್ಘಾಟಿಸಿದರು.