ಕುಡಿತ ಬಿಟ್ಟು ಕುಟುಂಬದ ಏಳಿಗೆಯಲ್ಲಿ ಸ್ತ್ರೀಯೊಂದಿಗೆ ಸಹಕರಿಸಿ

| Published : Oct 14 2025, 01:00 AM IST

ಕುಡಿತ ಬಿಟ್ಟು ಕುಟುಂಬದ ಏಳಿಗೆಯಲ್ಲಿ ಸ್ತ್ರೀಯೊಂದಿಗೆ ಸಹಕರಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಾಥಪುರದ ಕಾವ್ಯಾಂಜಲಿ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಟ್ರಸ್ಟ್‌ ವತಿಯಿಂದ 3ನೇ ದಿನದ ಮದ್ಯವರ್ಜನ ಶಿಬಿರದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಧರ್ಮಸ್ಥಳದ ಡಾ. ಶ್ರೀ ವೀರೇಂದ್ರ ಹೆಗ್ಗಡೆಯವರು ಕರ್ನಾಟಕದಲ್ಲಿ ಈಗಾಗಲೇ 1993 ಮದ್ಯವರ್ಜನ ಶಿಬಿರ ಹಮ್ಮಿಕೊಂಡು ಮದ್ಯವರ್ಜನ ವ್ಯಸನ ಮುಕ್ತಿ ಮಾಡಲು ಇಂತಹ ಕಾರ್ಯಕ್ರಮ ಮಾಡಿಕೊಂಡು ಬಂದಿದ್ದಾರೆ. ದುಶ್ಚಟ ಮುಕ್ತ ಸಮಾಜದ ನಿರ್ಮಾಣ ನಿಮ್ಮೆಲ್ಲರ ಹೊಣೆ ಎಂದರು.

ಕನ್ನಡಪ್ರಭ ವಾರ್ತೆ ರಾಮನಾಥಪುರ

ಕುಟುಂಬದಲ್ಲಿ ಬರುವ ಸಂಕಷ್ಟ, ಸುಧಾರಣೆ, ಪ್ರಗತಿ, ಸಂಸ್ಕೃತಿ, ಉನ್ನತ ವ್ಯಕ್ತಿಯಾಗಿ ರೂಪಿಸುವ ಕಾರ್ಯದಲ್ಲಿ ಸ್ತ್ರೀಯರ ಪಾತ್ರವಿದ್ದು, ಪುರುಷರು ಸಹ ಮದ್ಯ ಸೇವನೆಯಂತ ಚಟಗಳಿಂದ ದೂರವಾಗಿ ಸಹಕಾರ ನೀಡಿದರೆ ಕುಟುಂಬ ಉತ್ತಮ ದಾರಿಯಲ್ಲಿ ಹೋಗಲು ಸಹಕಾರಿಯಾಗುತ್ತದೆ ಎಂದು ಟಿ. ಮಾಯಿಗೌಡನಹಳ್ಳಿ ರಾಜಾಪುರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿಗಳು ತಿಳಿಸಿದರು. ರಾಮನಾಥಪುರದ ಕಾವ್ಯಾಂಜಲಿ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಟ್ರಸ್ಟ್‌ ವತಿಯಿಂದ 3ನೇ ದಿನದ ಮದ್ಯವರ್ಜನ ಶಿಬಿರದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಧರ್ಮಸ್ಥಳದ ಡಾ. ಶ್ರೀ ವೀರೇಂದ್ರ ಹೆಗ್ಗಡೆಯವರು ಕರ್ನಾಟಕದಲ್ಲಿ ಈಗಾಗಲೇ 1993 ಮದ್ಯವರ್ಜನ ಶಿಬಿರ ಹಮ್ಮಿಕೊಂಡು ಮದ್ಯವರ್ಜನ ವ್ಯಸನ ಮುಕ್ತಿ ಮಾಡಲು ಇಂತಹ ಕಾರ್ಯಕ್ರಮ ಮಾಡಿಕೊಂಡು ಬಂದಿದ್ದಾರೆ. ದುಶ್ಚಟ ಮುಕ್ತ ಸಮಾಜದ ನಿರ್ಮಾಣ ನಿಮ್ಮೆಲ್ಲರ ಹೊಣೆ. ಇಂತಹ ಮದ್ಯವ್ಯಸನ ದೂರ ಮಾಡಲು ಧರ್ಮಸ್ಥಳ ಜನಜಾಗೃತಿ ವೇದಿಕೆ, ಸ್ವ- ಸಹಾಯ ಸಂಘಗಳ ಒಕ್ಕೂಟಗಳು ವ್ಯಸನ ಮುಕ್ತಿ ಇನ್ನಿತರ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿರುವುದಕ್ಕೆ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.ಅರಕಲಗೂಡು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಎ.ಪಿ. ಶಂಕರ್ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳದ ವ್ಯವಸ್ಥಾಪನಾ ಸಮಿತಿಯಿಂದ ಮದ್ಯಸರ್ಜನ ವ್ಯಸನ ಮುಕ್ತಿ ಕಾರ್ಯಕ್ರಮ ಮಾಡಿಕೊಂಡು ಬರುತ್ತಿದ್ದು, ಇದಕ್ಕೆ ತಮ್ಮ ಎಲ್ಲಾ ದುಚ್ಚಟಗಳನ್ನು ದೂರ ಮಾಡಿ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕೆ ನಮ್ಮ ನಿಮ್ಮೆಲ್ಲರ ಹೊಣೆಯ ಜೊತೆಯಲ್ಲಿ ಸುಖ ಸಂಸ್ಕಾರದಲ್ಲಿ ನಡೆಯಿರಿ ಎಂದು ಶಂಕರ್‌ ಹೇಳಿದರು. ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷರು ಆರ್‌.ಎಸ್. ನರಸಿಂಹಮೂರ್ತಿ, ಶರಣ ಸಾಹಿತ್ಯ ಪರಿಷತ್ ನಿರ್ದೇಶಕರು, ಜಿಲ್ಲಾಧ್ಯಕ್ಷ ಎಂ.ಎನ್. ಕುಮಾರಸ್ವಾಮಿ, ವಿರುಪಾಕ್ಷ, ಸಿದ್ದರಾಜು ಮುಂತಾದವರು ಇದ್ದರು.