ಭಾರತೀ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗಾಗಿ ನಡೆದ ರಸಪ್ರಶ್ನೆ ಸ್ಪರ್ಧೆ

| Published : Mar 07 2025, 12:48 AM IST

ಭಾರತೀ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗಾಗಿ ನಡೆದ ರಸಪ್ರಶ್ನೆ ಸ್ಪರ್ಧೆ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತೀ ವಿದ್ಯಾ ಸಂಸ್ಥೆ ಶೈಕ್ಷಣಿಕವಾಗಿಯು ಪ್ರಗತಿ ಸಾಧಿಸುವ ಜತೆಗೆ ಸಾಮಾಜಿಕ ಚಿಂತನೆಯ ನೆಲೆಗಟ್ಟಿನಲ್ಲಿ ಚಿಂತಿಸುತ್ತ ಹತ್ತು ಹಲವು ಸಾಮಾಜಿಕ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತ ಬಂದಿದೆ. ಮೊದಲ ಭಾಗವಾಗಿ ವಿದ್ಯಾರ್ಥಿನಿಯರಿಗಾಗಿ ಲಿಖಿತ ರಸಪ್ರಶ್ನೆ ಆಯೋಜಿಸಿದ್ದು ಉತ್ತಮ ಸ್ಪಂದನೆ ದೊರತಿದೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಭಾರತೀ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿನಿಯರಿಗೆ ಲಿಖಿತ ರಸಪ್ರಶ್ನೆ ಸ್ಪರ್ಧೆ ನಡೆಯಿತು.

ಭಾರತೀ ಎಜುಕೇಷನ್ ಟ್ರಸ್ಟ್, ಶ್ರೀಮತಿ ಪದ್ಮ ಜಿ. ಮಾದೇಗೌಡ ಪ್ರತಿಷ್ಠಾನ, ಭಾರತಿ ಐಎಎಸ್ ಅಕಾಡೆಮಿ ಮತ್ತು ವೃತ್ತಿ ಮಾರ್ಗದರ್ಶನ ತರಬೇತಿ ಕೇಂದ್ರದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಪದವಿ, ಸ್ನಾತಕೋತ್ತರ ಪದವಿ ಓದುತ್ತಿರುವ ವಿವಿಧ ಕಾಲೇಜುಗಳಿಂದ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೆ ಪ್ರತಿಷ್ಠಾನ ಅಧ್ಯಕ್ಷ ಬಿ.ಎಂ.ನಂಜೇಗೌಡ ಚಾಲನೆ ನೀಡಿ ಮಾತನಾಡಿ, ಭಾರತೀ ವಿದ್ಯಾ ಸಂಸ್ಥೆ ಶೈಕ್ಷಣಿಕವಾಗಿಯು ಪ್ರಗತಿ ಸಾಧಿಸುವ ಜತೆಗೆ ಸಾಮಾಜಿಕ ಚಿಂತನೆಯ ನೆಲೆಗಟ್ಟಿನಲ್ಲಿ ಚಿಂತಿಸುತ್ತ ಹತ್ತು ಹಲವು ಸಾಮಾಜಿಕ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತ ಬಂದಿದೆ ಎಂದರು.

ಮಾಜಿ ಸಂಸದ ದಿ.ಜಿ.ಮಾದೇಗೌಡರ ಪತ್ನಿ ಪದ್ಮ ಜಿ.ಮಾದೇಗೌಡ ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿ ಮಹಿಳೆಯರಿಗೆ ಹಲವು ಜನಪಯೋಗಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಮೊದಲ ಭಾಗವಾಗಿ ವಿದ್ಯಾರ್ಥಿನಿಯರಿಗಾಗಿ ಲಿಖಿತ ರಸಪ್ರಶ್ನೆ ಆಯೋಜಿಸಿದ್ದು ಉತ್ತಮ ಸ್ಪಂದನೆ ದೊರತಿದೆ ಎಂದರು.

ಮಾರ್ಚ್ 19 ರಂದು ನಡೆಯುವ ರಾಜ್ಯ ಮಟ್ಟದ ಶ್ರೀಮತಿ ಪದ್ಮ ಜಿ. ಮಾದೇಗೌಡ ಮಹಿಳಾ ಸೇವಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದರು.

ಈ ವೇಳೆ ಪ್ರಾಂಶುಪಾಲ ಡಾ.ಎಂ.ಎಸ್. ಮಹದೇವಸ್ವಾಮಿ, ಕಾರ್ಯಕ್ರಮದ ಸಂಚಾಲಕಿ ಮಮತಾ ನಾಗ್, ಎಂ.ಸುಂದರೇಶ್. ಕೆ.ಸಿ.ಶೃತಿ , ಎಚ್.ಎಲ್. ಶೃತಿ, ಸುಜಾತ, ಭವಾನಿ, ಗೀತಾ ಸೇರಿದಂತೆ ಬಿಇಟಿ ಅಂಗ ಸಂಸ್ಥೆಗಳ ಅಧ್ಯಾಪಕ ಅಧ್ಯಾಪಕೇತರರು ಭಾಗವಹಿಸಿದ್ದರು.

ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ

ಮಂಡ್ಯ:

ವಿ.ಸಿ.ಫಾರಂ ವಿದ್ಯುತ್ ವಿತರಣಾ ಕೇಂದ್ರ ಮತ್ತು ಹಂಪಾಪುರ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತ್ರೈಮಾಸಿಕ ಕಾರ್ಯನಿರ್ವಹಣೆ ಹಮ್ಮಿಕೊಂಡಿರುವುದರಿಂದ ಮಾರ್ಚ್ 8 ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ತಾಲೂಕಿನ ಗ್ರಾಮಾಂತರ ಪ್ರದೇಶಗಳ ಹಲವು ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ತಾಲೂಕಿ ಕೊಲಕಾರನದೊಡ್ಡಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಗೆ ಒಳಪಡುವ ತಗ್ಗಹಳ್ಳಿ, ಕೋಲಕಾರನದೊಡ್ಡಿ, ಹೆಮ್ಮಿಗೆ, ಸೂನಗನಹಳ್ಳಿ, ಪುರ, ಲೋಕಸರ, ಹಳುವಾಡಿ, ಕಮ್ಮನಾಯಕನಹಳ್ಳಿ, ಟಿ. ಮಲ್ಲಿಗೆರೆ, ಕಬ್ಬನಹಳ್ಳಿ, ತಿಮ್ಮನಹೊಸೂರು, ಬಿ.ಹೊಸೂರು , ಗೋಪನಹಳ್ಳಿ ಯಡಗನಹಳ್ಳಿ, ಮಾದರಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳು.

ಹಂಪಾಪುರ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯ ಕೆರಗೋಡು, ದೊಡ್ಡಗರುಡನಹಳ್ಳಿ, ಬಿಳಿದೇಗಲು, ಮುದಗಂದೂರು, ಮಾರಗೌಡನಹಳ್ಳಿ, ಬಿ.ಹೊಸೂರು, ಹಂಪಾಪುರ, ಕಲ್ಮಂಟಿದೊಡ್ಡಿ, ಸೌದೇನಹಳ್ಳಿ, ಬೆಟ್ಟಹಳ್ಳಿ, ಬೀಚನಹಳ್ಳಿ, ಪುರದಕೊಪ್ಪಲು, ಎಂ.ಹೊನ್ನೇನಹಳ್ಳಿ , ಬಿದರಕಟ್ಟೆ, ಬೆನ್ನಹಟ್ಟಿ, ಮನುಗನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು.

ವಿ.ಸಿ.ಫಾರಂ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯ ವಿ.ಸಿ.ಫಾರಂ, ಶಿವಳ್ಳಿ, ದುದ್ದ, ಬಿ.ಹಟ್ನ, ಬೇವಕಲ್ಲು, ಹುಲಿಕೆರೆ, ಚಂದಗಾಲು, ಹುಲ್ಲೇನಹಳ್ಳಿ, ಹೊಳಲು ಹಾಗೂ ಈ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಕಂಪನಿಯೊಂದಿಗೆ ಸಹಕರಿಸಬೇಕೆಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಜಿಲ್ಲಾ ಕಾರ್ಯ ನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.