ಸಮೀಪದ ಬೇತು ಗ್ರಾಮದ ಎಕ್ಸೆಲ್ ವಿದ್ಯಾಸಂಸ್ಥೆಯಲ್ಲಿ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಸಮೀಪದ ಬೇತು ಗ್ರಾಮದ ಎಕ್ಸೆಲ್ ವಿದ್ಯಾಸಂಸ್ಥೆಯಲ್ಲಿ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ರಸಪ್ರಶ್ನೆ ಕಾರ್ಯಕ್ರಮವನ್ನು 7ನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿತ್ತು. ಒಟ್ಟು 29 ಗುಂಪುಗಳು ಭಾಗವಹಿಸಿದ್ದು ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾದ ನಾಲ್ಕು ಗುಂಪುಗಳನ್ನು ಅಂತಿಮವಾಗಿ ಆಯ್ಕೆ ಮಾಡಲಾಯಿತು. ರಸಪ್ರಶ್ನೆಕಾರ್ಯಕ್ರಮದಲ್ಲಿ ಐದು ಸುತ್ತುಗಳಿದ್ದು ಶಮಂತ್ ಹಾಗೂ ಮೊಹಮ್ಮದ್ ಪ್ರಥಮ ಸ್ಥಾನ , ನಿಶಾಂತ್ ಹಾಗೂ ಅನಸ್ ದ್ವಿತೀಯ ಸ್ಥಾನ ಪಡೆದರು.
ವಿಜೇತರಿಗೆ ಬಹುಮಾನಗಳನ್ನು ನೀಡಿ ಪುರಸ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಕುಟ್ಟಂಜೆಟ್ಟಿರ ಮಾದಪ್ಪ, ಸಂಸ್ಥೆಯ ಸಂಚಾಲಕಿ ವಿಧ್ಯಾ ಸುರೇಶ್ ಹಾಗೂ ಮುಖ್ಯ ಶಿಕ್ಷಕ ಚೋಕಿರ ತಮ್ಮಯ್ಯ ಹಾಜರಿದ್ದರು.ಹತ್ತನೇ ತರಗತಿಯ ವಿದ್ಯಾರ್ಥಿನಿ ದುಂದುಬಿ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಶಿಕ್ಷಕಿ ರಶ್ಮಿ ಬಿ.ಸಿ ಸ್ವಾಗತಿಸಿದರು. ರಸಪ್ರಶ್ನೆ ಆಯೋಜಕರಾಗಿಶಿಕ್ಷಕಿಯರಾದ ಸ್ಪೂರ್ತಿ, ಶಿಲ್ಪ ಕಾರ್ಯನಿರ್ವಹಿಸಿದರು.