ಸಾರಾಂಶ
ತಾಲೂಕಿನ ಕಾಳಗಿ, ಮಿರಿಯಾಣ, ಚಿಂಚೋಳಿ ಪಟ್ಟಣದ ಕಾರ್ಯಕರ್ತರ ಮನೆಗಳಿಗೆ ಮತ್ತು ಮಠಗಳಿಗೆ ಭೇಟಿ ನೀಡಲಿದ್ದಾರೆ. ನಂತರ ಚಂದಾಪೂರ ನಗರದಲ್ಲಿರುವ ಶಾಸಕ ಡಾ.ಅವಿನಾಶ ಜಾಧವ್ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಲಿದ್ದಾರೆ. ಅಲ್ಲದೇ ತಾಲೂಕಿನ ಬಿಜೆಪಿ ಕಾರ್ಯಕರ್ತರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಗಿರಿರಾಜ ನಾಟೀಕಾರ ಮಾತನಾಡಿ ತಿಳಿಸಿದರು.
ಚಿಂಚೋಳಿ: ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಚಿಂಚೋಳಿ ಮೀಸಲು ವಿಧಾನಸಭಾ ಮತಕ್ಷೇತ್ರಕ್ಕೆ ಮಾ.೨೪ರಂದು ಭೇಟಿ ನೀಡಿ, ಬೀದರ್ ಲೋಕಸಭೆ ಚುನಾವಣೆ ಸಿದ್ಧತೆ ಬಗ್ಗೆ ಬಿಜೆಪಿ ಕಾರ್ಯಕರ್ತರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯಿದರ್ಶಿ ಗಿರಿರಾಜ ನಾಟೀಕಾರ ತಿಳಿಸಿದ್ದಾರೆ.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಬೀದರ್ ಲೋಕಸಭೆ ಚುನಾವಣೆ ಮೇ ೭ರಂದು ನಡೆಯಲಿರುವುದರಿಂದ ಬಿಜೆಪಿ ಕಾರ್ಯಕರ್ತರರೊಂದಿಗೆ ಸಭೆ ನಡೆಸಲು ಮತ್ತು ಪೂರ್ವ ತಯಾರಿಗಾಗಿ ಮಾ.೨೪ರಂದು ಚಿಂಚೋಳಿಗೆ ಭೇಟಿ ನೀಡಲಿದ್ದಾರೆ. ತಾಲೂಕಿನ ಕಾಳಗಿ, ಮಿರಿಯಾಣ, ಚಿಂಚೋಳಿ ಪಟ್ಟಣದ ಕಾರ್ಯಕರ್ತರ ಮನೆಗಳಿಗೆ ಮತ್ತು ಮಠಗಳಿಗೆ ಭೇಟಿ ನೀಡಲಿದ್ದಾರೆ. ನಂತರ ಚಂದಾಪೂರ ನಗರದಲ್ಲಿರುವ ಶಾಸಕ ಡಾ.ಅವಿನಾಶ ಜಾಧವ್ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಲಿದ್ದಾರೆ. ಅಲ್ಲದೇ ತಾಲೂಕಿನ ಬಿಜೆಪಿ ಕಾರ್ಯಕರ್ತರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಹೇಳಿದರು.ಕೇಂದ್ರ ಸಚಿವರು ಬೀದರ ಲೋಕಸಭಾ ಬಿಜೆಪಿ ಅಭ್ಯರ್ಥಿ ಭಗವಂತ ಖುಬಾ, ಕಲಬುರಗಿ ಸಂಸದ ಡಾ.ಉಮೇಶ ಜಾಧವ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ರದ್ದೇವಾಡ, ಮಾಜಿ ಶಾಸಕ ಪಿ.ರಾಜೀವ್, ಬೀದರ್ ಜಿಲ್ಲಾ ಬಿಜೆಪಿ ಅಧ್ಯಕ್ಷ ಸೋಮನಾಥ ಪಾಟೀಲ, ಬೀದರ್ ಜಿಲ್ಲೆಯ ಬಿಜೆಪಿ ಮುಖಂಡರು ಆಗಮಿಸಲಿದ್ದಾರೆ ಎಂದು ಹೇಳಿದರು.
ತಾಲೂಕು ಬಿಜೆಪಿ ಅಧ್ಯಕ್ಷ ವಿಜಯಕುಮಾರ ಚೆಂಗಟಿ, ರಾಮರೆಡ್ಡಿ ಪಾಟೀಲ ಚಿಮ್ಮನಚೋಡ, ಉಮಾ ಪಾಟೀಲ ನೀಲಮ್ಮ, ಮಹಾದೇವಿ ರೊಟ್ಟಿ, ಅಭಿಷೇಕ ಮಲಕಾನೂರ ಇನ್ನಿತರಿದ್ದರು.