ಸಾರಾಂಶ
ಮಸ್ಕಿ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವುದರಿಂದ ಇಲ್ಲಿನ ಪುರಸಭೆ ಆಡಳಿತದಿಂದ ಬೀದಿ ನಾಯಿಗಳಿಗೆ ರೇಬೀಸ್ ಚುಚ್ಚುಮದ್ದು ನೀಡಲಾಗುತ್ತಿದೆ
ಮಸ್ಕಿ: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವುದರಿಂದ ಇಲ್ಲಿನ ಪುರಸಭೆ ಆಡಳಿತದಿಂದ ಬೀದಿ ನಾಯಿಗಳಿಗೆ ರೇಬೀಸ್ ಚುಚ್ಚುಮದ್ದು ನೀಡಲಾಗುತ್ತಿದೆ. ತಾಲೂಕು ಕೇಂದ್ರದ ಹಾದಿ ಬೀದಿಗಳಲ್ಲಿ ಸಿಕ್ಕಸಿಕ್ಕ ಸಾರ್ವಜನಿಕರಿಗೆ, ಶಾಲಾ, ಕಾಲೇಜು ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿ ಗಾಯಗೊಳಿಸುತ್ತಿದ್ದವು. ಬೀದಿ ನಾಯಿಗಳ ಹಾವಳಿಯಿಂದ ಬೇಸತ್ತಿದ್ದ ಸ್ಥಳೀಯ ಪುರಸಭೆ ಆಡಳಿತ ಸಾರ್ವಜನಿಕರಲ್ಲಿ ಭಯ ಹೋಗಲಾಡಿಸಲು ಮುಂದಾಗಿದ್ದು ರೇಬೀಸ್ ಚುಚ್ಚುಮದ್ದು ನೀಡಲು ಮುಂದಾಗಿದೆ.
ಪಟ್ಟಣದ ಪುರಸಭೆ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಸುಮಾರು 300ಕ್ಕೂ ಅಧಿಕ ಬೀದಿ ನಾಯಿಗಳಿದ್ದು, ಇವುಗಳಿಂದ ಸಾರ್ವಜನಿಕರು ರೋಸಿಹೋಗಿದ್ದಾರೆ. ಆದ್ದರಿಂದ ನಾಯಿಗಳ ಕಡಿತದಿಂದ ಕಡಿವಾಣ ಹಾಕಲು ಪಶುಸಂಗೋಪನ ಇಲಾಖೆ ಸಹಯೋಗದಲ್ಲಿ ಕಳೆದ ಎರಡು ದಿನಗಳಲ್ಲಿ 100ಕ್ಕೂ ಅಧಿಕ ನಾಯಿಗಳಿಗೆ ರೇಬೀಸ್ ಚುಚ್ಚುಮದ್ದು ಹಾಕಲಾಗಿದ್ದು, ಇನ್ನುಳಿದ ಬೀದಿ ನಾಯಿಗಳಿಗೂ ಸಹ ಚುಚ್ಚುಮದ್ದು ಹಾಕಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ನರಸ ರೆಡ್ಡಿ ತಿಳಿಸಿದ್ದಾರೆ.ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳು ಸಾರ್ವಜನಿಕರಿಗೆ ಹಾಗೂ ಮಕ್ಕಳಿಗೆ ಕಚ್ಚುತ್ತಿವೆ. ಆದ್ದರಿಂದ ಪುರಸಭೆ ವತಿಯಿಂದ ಬೀದಿ ನಾಯಿಗಳಿಗೆ ರೇಬೀಸ್ ಚುಚ್ಚುಮದ್ದು ಹಾಕಲಾಗುತ್ತಿದೆ.
ಮಲ್ಲಯ್ಯ ಅಂಬಾಡಿ. ಪುರಸಭೆ ಅಧ್ಯಕ್ಷರು ಮಸ್ಕಿ.