ಲೋಕಸಭೆಗೆ ರವೀಂದ್ರ ನಾಯ್ಕ ಸ್ಪರ್ಧೆ

| Published : Mar 16 2024, 01:50 AM IST

ಸಾರಾಂಶ

ರವೀಂದ್ರ ನಾಯ್ಕ ಅವರನ್ನು ಚುನಾವಣೆಗೆ ಸ್ಪರ್ಧಿಸಲು ಸಮ್ಮತಿಸಲು ಅರಣ್ಯ ಅತಿಕ್ರಮಣದಾರರು ತೀರ್ಮಾನಿಸಲು ನಿರ್ಣಯಿಸಲಾಯಿತು ಎಂದು ಹೋರಾಟಗಾರರ ವೇದಿಕೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶಿರಸಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇಚ್ಛಿಸಿದ ರಾಜಕೀಯ ಪಕ್ಷದಿಂದ ಸ್ಪರ್ಧಿಸಿ, ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಅರಣ್ಯವಾಸಿಗಳ ಶಕ್ತಿ ಪ್ರದರ್ಶಿಸಲು ಸನ್ನದ್ಧರಾಗಿದ್ದೇವೆ. ಪಕ್ಷ ಟಿಕೆಟ್ ನಿರಾಕರಿಸಿದ್ದಲ್ಲಿ ಸ್ವತಂತ್ರವಾಗಿ ಸ್ಫರ್ಧಿಸಿ ಎಂಬ ನಿರ್ಣಯ ಅರಣ್ಯವಾಸಿಗಳಿಂದ ತೀರ್ಮಾನಿಸುವುದೊಂದಿಗೆ, ರವೀಂದ್ರ ನಾಯ್ಕ ಅವರನ್ನು ಚುನಾವಣೆಗೆ ಸ್ಪರ್ಧಿಸಲು ಸಮ್ಮತಿಸಲು ಅರಣ್ಯ ಅತಿಕ್ರಮಣದಾರರು ತೀರ್ಮಾನಿಸಲು ನಿರ್ಣಯಿಸಲಾಯಿತು ಎಂದು ಹೋರಾಟಗಾರರ ವೇದಿಕೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಜಿಲ್ಲಾದ್ಯಂತ ಆಗಮಿಸಿದ ಅರಣ್ಯ ಅತಿಕ್ರಮಣದಾರರ ಹೋರಾಟಗಾರರ ಪ್ರಮುಖರು ಶಿರಸಿ ಹೋರಾಟಗಾರರ ಸಭೆಯಲ್ಲಿ ಮಾ. ೧೫ರಂದು ಅಧ್ಯಕ್ಷ ರವೀಂದ್ರ ನಾಯ್ಕ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾಮಟ್ಟದ ಅರಣ್ಯ ಅತಿಕ್ರಮಣದಾರರ ಸಭೆಯಲ್ಲಿ ತೀರ್ಮಾನಿಸಲಾಯಿತು.ವಿವಿಧ ತಾಲೂಕು ಅಧ್ಯಕ್ಷರಾದ ರಮಾನಂದ ನಾಯ್ಕ ಅಂಕೋಲಾ, ಲಕ್ಷ್ಮಣ ಮಾಳ್ಳಕ್ಕನವರ ಶಿರಸಿ, ಮಾಭ್ಲೇಶ್ವರ ನಾಯ್ಕ ಸಿದ್ಧಾಪುರ, ಭೀಮ್ಸಿ ವಾಲ್ಮಿಕಿ ಯಲ್ಲಾಪುರ, ಶಿವಾನಂದ ಜೋಗಿ ಮುಂಡಗೋಡ, ರತ್ನಾಕರ ಜೋಯಿಡಾ, ಮಹೇಂದ್ರ ನಾಯ್ಕ ಕತಗಾಲ, ದೇವರಾಜ ಗೊಂಡ ಭಟ್ಕಳ, ರಾಮ ಮರಾಠಿ ಹೊನ್ನಾವರ, ನೆಹರೂ ನಾಯ್ಕ ಬಿಳೂರು, ದಿನೇಶ್ ನಾಯ್ಕ ಬೇಡ್ಕಣಿ, ಎಂ.ಆರ್. ನಾಯ್ಕ ಕಂಡ್ರಾಜಿ, ರಾಘು ಕವಂಚೂರು, ಸ್ವಾತಿ ಜೈನ್, ಮಲ್ಲೇಶಿ ಸಂತೊಳ್ಳಿ, ಲಲಿತ ದೊಡ್ನಳ್ಳಿ ನಾಗರಾಜ ಮರಾಠಿ ದೊಡ್ಮನೆ, ಕೆ.ಟಿ. ನಾಯ್ಕ ಹೇರೂರ್, ಇಬ್ರಾಹಿಂ ಗೌಡಳ್ಳಿ, ಹರಿಹರ ನಾಯ್ಕ ಹುಕ್ಕಳಿ, ಶೇಖಯ್ಯ ಹಿರೇಮಠ, ಕಿರಣ ಮರಾಠಿ ದೇವನಳ್ಳಿ, ರಾಜು ನರೇಬೈಲ್, ಯಾಕೂಬ ಬೆಟ್ಕುಳಿ, ಸಚಿನ್ ನಾಯ್ಕ ಮುಂತಾದವರು ಮಾತನಾಡಿದರು. ಸಭೆಯಲ್ಲಿ ಜಿಲ್ಲಾದ್ಯಂತ ೫೦೦ಕ್ಕೂ ಮಿಕ್ಕಿ ಹೋರಾಟಗಾರ ಪ್ರಮುಖರು ಭಾಗವಹಿಸಿದ್ದರು.