ಸಾರಾಂಶ
ಕಡೂರು ಶಾಸಕರ ಕಚೇರಿಗೆ ತೆರಳಿ ಆಪ್ತ ಕಾರ್ಯದರ್ಶಿ ಶಿಕ್ಷಕ ಪ್ರಕಾಶ್ , ಮಂಜುನಾಥ್ ಗೆ ಮನವಿ ಸಲ್ಲಿಕೆ
ಕನ್ನಡಪ್ರಭ ವಾರ್ತೆ ಕಡೂರುಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಗೌರವಧನ ನೀಡುವ ವಿಷಯದಲ್ಲಿ ಪ್ರಿಯಾಂಕಾ ಗಾಂಧಿ ಘೋಷಿಸಿದ್ದ 6 ನೇ ಗ್ಯಾರಂಟಿಯಾದ ಗೌರವ ಧನ ಜಾರಿಗೊಳಿಸಿ ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ ಎಂದು ಕನಾಟಕ ರಾಜ್ಯ ಹೊರಗುತ್ತಿಗೆ ನೌಕರ ಒಕ್ಕೂಟದ ರಾಜ್ಯಾಧ್ಯಕ್ಷೆ ರಾಧ ಸುಂದರೇಶ್ ಹೇಳಿದರು.ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್‍ನ ಸದಸ್ಯರು ಬುಧವಾರ ಕಡೂರು ಪ್ರವಾಸಿ ಮಂದಿರದಿಂದ ಶಾಸಕರ ಕಚೇರಿಗೆ ತೆರಳಿ ತಮ್ಮ ಬೇಡಿಕೆ ಈಡೇರಿಸಲು ಶಾಸಕರ ಆಪ್ತ ಕಾರ್ಯದರ್ಶಿ ಶಿಕ್ಷಕ ಪ್ರಕಾಶ್ ಮತ್ತು ಮಂಜುನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಮುಖ್ಯಮಂತ್ರಿಗಳು ಇತ್ತೀಚೆಗೆ ಮಂಡಿಸಿದ ಬಜೆಟ್ ಜನಪರವಾಗಿದೆ ಇದಕ್ಕಾಗಿ ಸ್ವಾಗತಿಸುತ್ತೇವೆ. ಆದರೆ ವಿವಿಧ ಯೋಜನೆಗಳಲ್ಲಿ ದುಡಿಯುತ್ತಿರುವ ಮಹಿಳಾ ಸಮುದಾಯವನ್ನು ಸಬಲೀಕರಣಗೊಳಿಸುವ ಬಗ್ಗೆ ನಿರ್ಲಕ್ಷಿಸಿರುವುದು ನಿರಾಸೆ ತಂದಿದೆ.ಕಳೆದ ಚುನಾವಣಾ ಸಂದರ್ಭದಲ್ಲಿ ತಮ್ಮ ಪ್ರಣಾಳಿಕೆಯಲ್ಲಿ ಪ್ರಿಯಾಂಕಾಗಾಂಧಿ ಅವರು 6ನೇ ಗ್ಯಾರಂಟಿಯಾಗಿ ಅಂಗನ ವಾಡಿ ಕಾರ್ಯಕರ್ತೆಯರಿಗೆ 15 ಸಾವಿರ ಹಾಗೂ ಸಹಾಯಕಿಯರಿಗೆ 10 ಸಾವಿರ ಮಾಸಿಕ ಗೌರವ ಧನ ಹೆಚ್ಚಳ ಮಾಡುವ ಮತ್ತು ನಿವೃತ್ತರಿಗೆ 3 ಲಕ್ಷ ಇಡುಗಂಟು ನೀಡುವ ಭರವಸೆ ನೀಡಿದ್ದರು. ರಾಜ್ಯ ಸರ್ಕಾರ ಅದನ್ನು ಮರೆತಿದೆ. ಇದು ನಮಗೆ ಬೇಸರ ಮೂಡಿಸಿದೆ. ಮಂಡಿಸಿರುವ ಬಜೆಟ್‍ನ ಅನುಮೋದನೆ ಪಡೆಯುವ ಪೂರ್ವದಲ್ಲೇ ಅಂಗನವಾಡಿಗಳಲ್ಲಿ ದುಡಿಯುತ್ತಿರುವ ಮಹಿಳಾ ಸಮುದಾಯಕ್ಕೆ ಗೌರವ ಧನ ಹೆಚ್ಚಿಸಲು ಸೂಕ್ತ ಕ್ರಮ ಕ್ರಮಗೊಳ್ಳಬೇಕೆಂದು ಮನವಿ ಮಾಡಿದ್ದೇವೆ ಎಂದರು.
ಫೆಡರೇಷನ್‍ನ ಅಧ್ಯಕ್ಷೆ ಯು.ಆರ್. ಪಾರ್ವತಮ್ಮ, ಕಾರ್ಯದರ್ಶಿ ಶಾಹೀನಾ, ಪ್ರಧಾನ ಕಾರ್ಯದರ್ಶಿ ಭಾಗ್ಯ, ಮೀನಾಕ್ಷಿ, ಹೇಮಾವತಿ,ಕಾಂತಮಣಿ, ಸುನಂದ,ಶಾಂತಮ್ಮ, ಗಿರಿಜಾ ಮತ್ತು ತಾಲೂಕಿನ ವಿವಿಧ ಅಂಗನವಾಡಿಗಳಿಂದ ಬಂದಿದ್ದ ಅಂಗನವಾಡಿ ಶಿಕ್ಷಕಿಯರು ಇದ್ದರು.21ಕೆಕೆಡಿಯು2.
ಕಡೂರು ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಎಐಟಿಯುಸಿಯ ಕಾರ್ಯಕರ್ತೆಯರು ಶಾಸಕರ ಕಚೇರಿಗೆ ತೆರಳಿ ಮನವಿ ಪತ್ರವನ್ನು ಶಾಸಕರ ಆಪ್ತ ಸಹಾಯಕರಾದ ಸಿ. ಪ್ರಕಾಶ್ ಮತ್ತು ಮಂಜುನಾಥ್ ಅವರಿಗೆ ನೀಡಿದರು.