ರ್ಯಾ ಗಿಂಗ್‌ ಮುಕ್ತ ವಿಶ್ವವಿದ್ಯಾನಿಲಯಗಳು ಅವಶ್ಯ

| Published : Aug 13 2024, 12:50 AM IST

ಸಾರಾಂಶ

ರಾಷ್ಟ್ರೀಯ ರ್ಯಾ ಗಿಂಗ್ ವಿರೋಧಿ ದಿನ

ಕನ್ನಡಪ್ರಭ ವಾರ್ತೆ ತುಮಕೂರುಸಮಾಜದಲ್ಲಿ ಆರೋಗ್ಯಕರ ವಾತಾವರಣ ನಿರ್ಮಿಸುವ, ವಿದ್ಯಾರ್ಥಿಗಳಿಗೆ ಸುರಕ್ಷತೆಯ ಪರಿಸರ ಖಚಿತಪಡಿಸುವ ಉದ್ದೇಶ ಹೊಂದಿರುವ ವಿಶ್ವವಿದ್ಯಾನಿಲಯಗಳು ರ್ಯಾಗಿಂಗ್‌ ತಂಬಾಕು, ಡ್ರಗ್ಸ್ ಮುಕ್ತ ಆವರಣಗಳಾಗಬೇಕು ಎಂದು ಕುಲಪತಿ ಪ್ರೊ. ಎಂ.ವೆಂಕಟೇಶ್ವರಲು ಹೇಳಿದರು.ತುಮಕೂರು ವಿಶ್ವವಿದ್ಯಾನಿಲಯ ರ್ಯಾ ಗಿಂಗ್ ವಿರೋಧಿ ಕೋಶವು ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನ ವಿಭಾಗದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ರ್ಯಾ ಗಿಂಗ್ ವಿರೋಧಿ ದಿನ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.ರ್ಯಾ ಗಿಂಗ್ ಶಿಕ್ಷಾರ್ಹ ಅಪರಾಧವೆಂದು ಭಾರತ ಸರ್ವೋಚ್ಚ ನ್ಯಾಯಲಯವು ಪರಿಗಣಿಸಿದ ನಂತರ 2011 ರಲ್ಲಿ ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗವು (ಯುಜಿಸಿ) ಭಾರತದ ವಿಶ್ವವಿದ್ಯಾನಿಲಯಗಳಿಗೆ ಅನ್ವಯಿಸಿ ರ್ಯಾ ಗಿಂಗ್ ವಿರೋಧಿ ಕಾಯಿದೆಯನ್ನು ಜಾರಿಗೊಳಿಸಿತು ಎಂದು ತಿಳಿಸಿದರು.ನಿಮ್ಹಾನ್ಸ್ ಸಂಸ್ಥೆಯ ಮನೋವೈದ್ಯಕೀಯ ಸಾಮಾಜಿಕ ಕಾರ್ಯ ವಿಭಾಗದ ಡಾ.ಜನಾರ್ದನ ಎನ್. ಮಾತನಾಡಿ, ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ರ್ಯಾ್ಗಿಂಗ್‌ ಹೆಚ್ಚು ಕಾಣಬಹುದು. ರ್ಯಾ ಗಿಂಗ್‌ ಆಘಾತದಿಂದ ಚೇತರಿಸಿಕೊಳ್ಳಲು ಸಾಮಾಜಿಕ ಬೆಂಬಲ ಬಹಳ ಅವಶ್ಯಕ ಎಂದು ತಿಳಿಸಿದರು.ಕುಲಸಚಿವೆ ನಾಹಿದಾ ಜಮ್‌ಜಮ್ ಮಾತನಾಡಿ, ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿರುವ ವೈದ್ಯಕೀಯ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿಯ ಕೇಸಿನಲ್ಲಿ ತಪ್ಪಿತಸ್ತ ಹಿರಿಯ ವಿದ್ಯಾರ್ಥಿಗಳಿಗೆ 2010 ರಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಎಂದರು. ಸ್ನಾತಕೋತ್ತರ ಸಮಾಜಕಾರ್ಯಅಧ್ಯಯನ ಮತ್ತು ಸಂಶೋಧನ ವಿಭಾಗದ ಅಧ್ಯಕ್ಷ ಪ್ರೊ.ರಮೇಶ್ ಬಿ.ಮಾತನಾಡಿ, ಯುಜಿಸಿಗೆ ಪ್ರತಿ ವರ್ಷ ಸುಮಾರು ೧೨೦೦ ಪ್ರಕರಣಗಳು ರ್ಯಾಬಗಿಂಗ್ ವಿರುದ್ಧ ವರದಿಯಾಗುತ್ತವೆ. ರ್ಯಾ ಗಿಂಗ್ ಪರಿಣಾಮ ಸಾವು, ಮಾನಸಿಕವಾಗಿ ತೊಂದರೆ, ಅಧ್ಯಯನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದರು.

ತುಮಕೂರು ವಿವಿರ್ಯಾ ಗಿಂಗ್ ವಿರೋಧಿ ಕೋಶದ ಸಂಯೋಜಕಿ ಡಾ.ಜ್ಯೋತಿ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು.ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್ ಕೆ.ಉಪಸ್ಥಿತರಿದ್ದರು.