ಸಾರಾಂಶ
ಆನಂದಪುರದಲ್ಲಿ ಮಂಗಳವಾರ ಚುನಾವಣೆ ಫಲಿತಾಂಶ ಬಳಿಕ ಹಮ್ಮಿಕೊಂಡಿದ್ದ ಬಿಜೆಪಿ ವಿಜಯೋತ್ಸವದ ಈ ಸಂದರ್ಭದಲ್ಲಿ ಮಾತನಾಡಿ ಪ್ರತಿಯೊಬ್ಬ ಕಾರ್ಯಕರ್ತರು ಪಕ್ಷ ನಿಷ್ಠೆಯಿಂದ ಹಗಲು ರಾತ್ರಿ ಶ್ರಮಿಸಿ, ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದ ಕಾರ್ಯಕರ್ತರ ಪ್ರತಿಫಲವಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಘವೇಂದ್ರ ಗೆಲುವು ಸಾಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಆನಂದಪುರ
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಗೆಲುವು ಕಾರ್ಯಕರ್ತರ ಗೆಲುವು ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ತಿಳಿಸಿದರು.ಆನಂದಪುರದಲ್ಲಿ ಮಂಗಳವಾರ ಚುನಾವಣೆ ಫಲಿತಾಂಶ ಬಳಿಕ ಹಮ್ಮಿಕೊಂಡಿದ್ದ ಬಿಜೆಪಿ ವಿಜಯೋತ್ಸವದ ಈ ಸಂದರ್ಭದಲ್ಲಿ ಮಾತನಾಡಿ ಪ್ರತಿಯೊಬ್ಬ ಕಾರ್ಯಕರ್ತರು ಪಕ್ಷ ನಿಷ್ಠೆಯಿಂದ ಹಗಲು ರಾತ್ರಿ ಶ್ರಮಿಸಿ, ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದ ಕಾರ್ಯಕರ್ತರ ಪ್ರತಿಫಲವಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಘವೇಂದ್ರ ಗೆಲುವು ಸಾಧಿಸಿದ್ದಾರೆ ಎಂದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರತ್ನಾಕರ ಹೊನಗೋಡು ಮಾತನಾಡಿ, ಬಿಜೆಪಿ ಪಕ್ಷಕ್ಕೆ ಸಾಗರ ವಿಧಾನಸಭಾ ಕ್ಷೇತ್ರದಿಂದ 26 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ ನೀಡಿದ್ದು ಮುಂದಿನ ದಿನಗಳಲ್ಲಿ ಬಿಜೆಪಿಗೆ ಮತ್ತೆ ಉತ್ತಮ ವಾತಾವರಣ ನೀಡಿದೆ. ರಾಘವೇಂದ್ರನ ಗೆಲುವಿನಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರ ಇನ್ನಷ್ಟು ಹೆಚ್ಚಿನ ಅಭಿವೃದ್ಧಿಯಾಗಲಿದೆ ಎಂದರು.ಡಾ.ರಾಜ ನಂದಿನಿ ಮಾತನಾಡಿ, ರಾಘವೇಂದ್ರ ಗೆಲುವಿಗೆ ಕಾರಣರಾದ ಕಾರ್ಯಕರ್ತರ ಶ್ರಮ ಮಹತ್ವದ ತೀರ್ಪನ್ನು ಬಂದಿದೆ. ಬಿಜೆಪಿಯ ಗೆಲುವಿಗೆ ಶ್ರಮಿಸಿದ ಕ್ಷೇತ್ರದ ಎಲ್ಲಾ ಕಾರ್ಯಕರ್ತರಿಗೆ ಅಭಿನಂದಿಸಿದರು. ಪ್ರಶಾಂತ್ ಸಾಗರ್, ಭರ್ಮಪ್ಪ, ರೇವಪ್ಪ ಹೊಸಕೊಪ್ಪ, ಮೋಹನ್ ಕುಮಾರ್ ,ಶಾಂತಕುಮಾರ್, ಕೊಟ್ರಪ್ಪ ನೇದರವಳ್ಳಿ, ಮಧು , ಚಂದ್ರಶೇಖರ್, ಹಿರಣ್ಣಯ್ಯ, ಸುಬ್ರಹ್ಮಣ್ಯ, ಶಿವಕುಮಾರ್, ದೇವು, ಹಾಗೂ ನೂರಾರು ಕಾರ್ಯಕರ್ತರು ವಿಜಯೋತ್ಸವದಲ್ಲಿ ಭಾಗವಹಿಸಿದ್ದರು.