ಇಂದಿನಿಂದ ರಾಘವೇಂದ್ರರ 354ನೇ ಆರಾಧನಾ ಮಹೋತ್ಸವ

| Published : Aug 10 2025, 01:33 AM IST

ಇಂದಿನಿಂದ ರಾಘವೇಂದ್ರರ 354ನೇ ಆರಾಧನಾ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಆ.೧೧ರಂದು ಬೆಳಿಗ್ಗೆ ೭.೩೦ಕ್ಕೆ ದೇವತಾ ಪ್ರಾರ್ಥನೆ, ಭಕ್ತರ ಹಸ್ತದಿಂದ ಪಾದ್ಯಪೂಜೆ

ಭಟ್ಕಳ: ಪಟ್ಟಣದ ಮಾರುತಿ ನಗರದಲ್ಲಿರುವ "ಮನುಪ್ರಭು ಸಂಕಲ್ಪದ ರಾಘವೇಂದ್ರ ಮಠ " ದಲ್ಲಿ ರಾಘವೇಂದ್ರ ಸ್ವಾಮೀಜಿಯವರ ೩೫೪ನೇ ಆರಾಧನಾ ಮಹೋತ್ಸವವು ಆ.೧೦ರಿಂದ ಆ.೧೨ರತನಕ ವಿಜೃಂಭಣೆಯಿಂದ ನಡೆಯಲಿದೆ.

ಆರಾಧನಾ ಮಹೋತ್ಸವದ ಅಂಗವಾಗಿ ಪ್ರತಿದಿನ ದೇವತಾ ಪ್ರಾರ್ಥನೆ, ಭಕ್ತರಿಂದ ಹಸ್ತದಿಂದ ಸಾರ್ವಭೌಮರ ಪಾದ್ಯಪೂಜೆ, ವಿಶೇಷ ಪಂಚಾಮೃತ ಅಭಿಷೇಕ, ಮಹಾಪೂಜೆ ನಡೆಯಲಿದೆ ಎಂದು ತಿಳಿಸಲಾಗಿದೆ.

ಆ.೧೦ರಂದು ಬೆಳಿಗ್ಗೆ ೮ ಗಂಟೆಗೆ ದೇವತಾ ಪ್ರಾರ್ಥನೆ, ೮.೩೦ರಿಂದ ೧೧ ಗಂಟೆಯ ತನಕ ಭಕ್ತರ ಹಸ್ತದಿಂದ ಶ್ರೀಗುರು ಸಾರ್ವಭೌಮರ ಪಾದ್ಯಪೂಜೆ ಹಾಗೂ ಸಾಮೂಹಿಕ ಸತ್ಯನಾರಾಯಣ ವೃಥ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ಸಂಜೆ ೭ ಗಂಟೆಗೆ ಭಜನೆ ಹಾಗೂ ೮ ಗಂಟೆಗೆ ರಥೋತ್ಸವ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ಆ.೧೧ರಂದು ಬೆಳಿಗ್ಗೆ ೭.೩೦ಕ್ಕೆ ದೇವತಾ ಪ್ರಾರ್ಥನೆ, ಭಕ್ತರ ಹಸ್ತದಿಂದ ಪಾದ್ಯಪೂಜೆ, ೯ ಗಂಟೆಗೆ ವಿಶೇಷ ಪಂಚಾಮೃತ ಅಭಿಷೇಕ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ಅಖಂಡ ಭಜನೆ ಪ್ರಾರಂಭ, ಮಧ್ಯಾಹ್ನ ೧ ರಿಂದ ೩ ಗಂಟೆಯ ತನಕ ಮಹಾ ಅನ್ನಸಂತರ್ಪಣೆ, ರಾತ್ರಿ ೮ಕ್ಕೆ ರಥೋತ್ಸವ, ಮಹಾಪೂಜೆ, ಪ್ರಸಾದ ವಿತರಣೆ, ಆ.೧೨ ರಂದು ಬೆಳಿಗ್ಗೆ ೮ ಗಂಟೆಗೆ ದೇವತಾ ಪ್ರಾರ್ಥನೆ, ಭಕ್ತಾದಿಗಳ ಹಸ್ತದಿಂದ ಪಾದ್ಯಪೂಜೆ, ವಿಶೇಷ ಕ್ಷೀರಾಭಿಷೇಕ, ೧೦ ಗಂಟೆಯಿಂದ ಸಾಮೂಹಿಕ ಗಣಹೋಮ, ಮಧ್ಯಾಹ್ನ ೧೨.೩೦ ಗಂಟೆಗೆ ಮಹಾಪೂಜೆ, ಸಂಜೆ ೭ ರಿಂದ ಭಜನೆ, ೮ ಗಂಟೆಗೆ ರಥೋತ್ಸವ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಫಲಮಂತ್ರಾಕ್ಷತೆ ಸ್ವೀಕರಿಸಿ, ಸಾರ್ವಭೌಮರ ಅನುಗ್ರಹಕ್ಕೆ ಪಾತ್ರರಾಗುವಂತೆ ಶ್ರೀ ಮಠದ ಆಡಳಿತ ಮಂಡಳಿ ತಿಳಿಸಿದೆ.