ಸಾರಾಂಶ
ಉತ್ಸವ ಮೂರ್ತಿಗೆ ಕನಕಾಭಿಷೇಕ, ಸರ್ವಸೇವೆ, ಮಹಾಪೂಜೆ ಬಳಿಕ ಹಸ್ತೋದಕ, ನೇವೈದ್ಯ, ಮಹಾಮಂಗಳರಾತಿ ಜರುಗಿತು.
ಹೊಸಪೇಟೆ: ನಗರ ಸೇರಿದಂತೆ ಜಿಲ್ಲಾದ್ಯಂತ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ 353ನೇ ಉತ್ತರಾರಾಧನೆ ನಿಮಿತ್ತ ಮಹಾರಥೋತ್ಸವ ಗುರುವಾರ ಜರುಗಿತು.
ನಗರದ ನಂಜನಗೂಡು ರಾಣಿಪೇಟೆ, ಗಾಂಧಿ ಕಾಲೋನಿ, ಕಮಲಾಪುರ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಶಾಖಾ ಮಠಗಳಲ್ಲಿ ಬೆಳಗ್ಗೆ ವಿಶೇಷವಾಗಿ ಫಲಪಂಚಾಮೃತಾ ಭಿಷೇಕ, ರಾಯರ ಬೃಂದಾವನಗಳಿಗೆ ರಜತ, ರೇಷ್ಮೆ ಹಾಗೂ ವಿಶೇಷ ವಿವಿಧ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು.ಉತ್ಸವ ಮೂರ್ತಿಗೆ ಕನಕಾಭಿಷೇಕ, ಸರ್ವಸೇವೆ, ಮಹಾಪೂಜೆ ಬಳಿಕ ಹಸ್ತೋದಕ, ನೇವೈದ್ಯ, ಮಹಾಮಂಗಳರಾತಿ ಜರುಗಿತು. ಉತ್ತರಾರಾಧನೆ ಪ್ರಯುಕ್ತ ಮಹಾರಥೋತ್ಸವ ನಡೆಯಿತು. ವಿವಿಧ ಮಹಿಳಾ ಭಜನಾ ಮಂಡಳಿಗಳ ಸದಸ್ಯರು ನೃತ್ಯ ಗೀತೆಗಳೊಂದಿಗೆ ವಿಶೇಷ ಭಕ್ತಿ ಅರ್ಪಿಸಿದರು.
ಬಳಿಕ ಅಲಂಕಾರ ಬ್ರಾಹ್ಮಣರ ಸಂತರ್ಪಣೆ ಹಾಗೂ ಬಂದ ಭಕ್ತರಿಗೆ ಅನ್ನದಾನ ಜರುಗಿತು.ಶ್ರೀಮಠದ ಆವರಣದಲ್ಲಿ ಸಾಮೂಹಿಕ ಭಜನೆ, ಅಷ್ಟೋತ್ತರ ಪಾರಾಯಣ, ಕೋಲಾಟ, ನೃತ್ಯ ಪ್ರದರ್ಶನ ನಡೆಯಿತು. ಶ್ರೀಮಠದ ವಿಭಾಗೀಯ ವ್ಯವಸ್ಥಾಪಕ ಗುರುರಾಜ್ ದಿಗ್ಗಾವಿ, ಶಾಖಾ ವ್ಯವಸ್ಥಾಪಕರಾದ ಕೃಷ್ಣಮೂರ್ತಿ, ಟೀಕಾಚಾರ್ಯ ಗುಂಜಳ್ಳಿ, ಅನಂತ ಪದ್ಮನಾಭ, ವಿಜಯ್ ಕುಮಾರ್, ಶಿರೆಕೊಳ್ಳ ಗುರುರಾಜ್ ಇದ್ದರು.
ಹೊಸಪೇಟೆ ನಗರದ ವಿಜಯಾ ಚಿತ್ರಮಂದಿರ ಸಮೀಪದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ ಬೃಂದಾವನಕ್ಕೆ ಬೆಳಗ್ಗೆ ಅಷ್ಟೋತ್ತರ ಪಾರಾಯಣ, ಪಂಚಾಮೃತಾಭಿಷೇಕ, ಅರ್ಚನೆ, ಕನಕಾಭಿಷೇಕ, ಸರ್ವಸೇವೆ ನಡೆಯಿತು. ಪುಷ್ಪಾರ್ಚನೆ, ಹಸ್ತೋದಕ ಮಹಾಮಂಗಳರಾತಿ ಜರುಗಿತು. ಪವಮಾನ ಹೋಮ ಜರುಗಿತು. ಬಂದ ಭಕ್ತರಿಗೆ ಅನ್ನದಾನ ನಡೆಯಿತು. ಶ್ರೀಮಠದ ಆವರಣದಲ್ಲಿ ರಥೋತ್ಸವ ನಡೆಯಿತು.ಮಠಾಧಿಕಾರಿ ಭೀಮಸೇನಾರ್ಚಾ, ಪವಾನಾರ್ಚ, ಪ್ರಹ್ಲಾದಾಚಾರ್ಯ, ಅನಿಲಾಚಾರ್ಯ ಇತರರಿದ್ದರು.