ಮತಗಳ್ಳತನ ಎಂಬ ರಾಹುಲ್ ಗಾಂಧಿ ಆರೋಪ ನಿರಾಧಾರ

| Published : Aug 10 2025, 01:30 AM IST

ಮತಗಳ್ಳತನ ಎಂಬ ರಾಹುಲ್ ಗಾಂಧಿ ಆರೋಪ ನಿರಾಧಾರ
Share this Article
  • FB
  • TW
  • Linkdin
  • Email

ಸಾರಾಂಶ

ಪತ್ರಿಕಾಗೋಷ್ಠಿಯಲ್ಲಿ ಹಿರಿಯೂರು ನಗರದ ಬಿಜೆಪಿ ಕಚೇರಿಯಲ್ಲಿ ಮಹದೇವಪುರ ಚುನಾವಣೆ ಅಕ್ರಮ ಎಂಬ ಬಗ್ಗೆ ಬಿಜೆಪಿ ಅಧ್ಯಕ್ಷ ಅಭಿನಂದನ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂದು ಸಂಸದ ರಾಹುಲ್ ಗಾಂಧಿ ಹೇಳುತ್ತಿರುವುದರಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಅಭಿನಂದನ್ ತಿಳಿಸಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಆರೋಪ ಮಾಡುವಾಗ ದಾಖಲೆಗಳನ್ನು ಇಟ್ಟುಕೊಂಡು ಆರೋಪಿಸಬೇಕು. ಆದರೆ ಕಳೆದ 11 ವರ್ಷಗಳ ಕೇಂದ್ರದ ಬಿಜೆಪಿ ಆಡಳಿತ ಸಹಿಸಲಾಗದೆ ಹಾಗೂ ಮುಂಬರುವ ಗ್ರಾಪಂ, ತಾಪಂ ಹಾಗೂ ಜಿಪಂ ಚುನಾವಣೆಗೆ ಜನರನ್ನು ಸೆಳೆಯಲು ಈಗಿನಿಂದಲೇ ಪ್ರಚಾರ ಪಡೆಯಲು ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದರು.

2023ರಲ್ಲಿ ರಾಜ್ಯದಲ್ಲಿ ತಮ್ಮದೇ ಕಾಂಗ್ರೆಸ್ ಸರ್ಕಾರವಿತ್ತು. ಹಾಗಾದ್ರೆ ಮತಗಳ್ಳತನ ನಡೆದಿದೆ ಎನ್ನುವುದಾದರೆ ನಿಮ್ಮ ಅಧಿಕಾರಿಗಳ ವಿರುದ್ಧ ಕ್ರಮ ಏಕಿಲ್ಲ ಎಂದು ಪ್ರಶ್ನಿಸಿದರು.

ಕಾರ್ಯಕ್ರಮ ನಡೆದ ಕೂಗಳತೆ ದೂರದಲ್ಲಿ ಚುನಾವಣಾ ಆಯೋಗ ಕಚೇರಿಯಿತ್ತು. ಕಚೇರಿಗೆ ತೆರಳಿ ಸಹಿ ಮಾಡಿ ಪತ್ರ ಕೊಡದೇ ಯಾಕೆ ಪಲಾಯನ ಮಾಡಿದಿರಿ. ಮತಗಳ್ಳತನ ನಡೆದಿದೆ ಎಂಬ ನಿಮ್ಮ ಆರೋಪ ಸಾಬೀತಾವಾದರೆ ಕಲಂ 20/3ಬಿ ಆಕ್ಟ್ ಪ್ರಕಾರ ಚುನಾವಣಾ ಆಯೋಗ ಕ್ರಮ ಕೈಗೊಳ್ಳಲಿದೆ. ನೀವು ದಾಖಲೆ ಒದಗಿಸಬೇಕು ಅಷ್ಟೇ. ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರು ಪೋಟೋ ಸಮೇತ ಉತ್ತರ ನೀಡಿದ್ದಾರೆ. ಸಂಸದ ರಾಹುಲ್ ಗಾಂಧಿರವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದರು.

1975ರಲ್ಲಿ ಅಲಹಾಬಾದ್ ಕ್ಷೇತ್ರದಲ್ಲಿ ಚುನಾವಣೆ ನಡೆದಾಗ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ಚುನಾವಣೆಯಲ್ಲಿ ಅಕ್ರಮ ಎಸಗಿದ್ದಾರೆ ಎಂದು ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿತ್ತು. ಅಕ್ರಮ ಹಿನ್ನೆಲೆಯಲ್ಲಿ ಸಂಸದರ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕೋರ್ಟ್ ಆದೇಶಿಸಿತ್ತು. ಆದರೆ ಅವರು ರಾಜೀನಾಮೆ ನೀಡಲಿಲ್ಲ ಯಾಕೆ? ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗಿವೆ. ಕೆಎಸ್ಆರ್ ಟಿಸಿ ನೌಕರರು ಸೇರಿದಂತೆ ಹಲವಾರು ಇಲಾಖೆಗಳ ನೌಕರರಿಗೆ ಪ್ರತಿ ತಿಂಗಳು ವೇತನ ನೀಡಲು ಆಗುತ್ತಿಲ್ಲ. ರೈತರಿಗೆ ಯೂರಿಯಾ ಗೊಬ್ಬರ ಪೂರೈಕೆ ಮಾಡಲು ಆಗುತ್ತಿಲ್ಲ. ಜನರಿಗೆ ಇನ್ನಿಲ್ಲದ ಆಸೆಗಳನ್ನು ತೋರಿಸಿ ಅಧಿಕಾರಕ್ಕೆ ಬಂದಿರುವ ನಿಮಗೆ ಮತದಾರರು ಉತ್ತರ ನೀಡಲಿದ್ದಾರೆ ಎಂದರು. ಈ ವೇಳೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಿತಿನ್ ಗೌಡ, ಎಸ್‌ಸಿ ಮೋರ್ಚಾ ಅಧ್ಯಕ್ಷ ಮಂಜುನಾಥ್, ಒಬಿಸಿ ಮೋರ್ಚಾ ಅಧ್ಯಕ್ಷ ನರೇಂದ್ರ ಸಿಂಗ್ ಜೋದ ಹಾಜರಿದ್ದರು.