ಸಾರಾಂಶ
ಮುದ್ದೇಬಿಹಾಳ: ಪಟ್ಟಣದ ವಿವಿಧ ಪಾನ್ ಶಾಪ್ ಸೇರಿದಂತೆ ವಿವಿಧ ಕಡೆ ಅನಧಿಕೃತವಾಗಿ ಮಾವಾ ಮಾರಾಟದಲ್ಲಿ ತೊಡಗಿದ್ದ ಅಡ್ಡೆ ಮೇಲೆ ವಿಜಯಪುರ ಸೈಬರ್ ವಿಭಾಗದ ಪೊಲೀಸರು ದಾಳಿ ನಡೆಸಿ ಮಾವಾ ತಯಾರಿಕೆ ವಸ್ತುಗಳು ಜಪ್ತಿ ಮಾಡಿದ್ದಾರೆ. ಅಲ್ಲದೇ, ಇಬ್ಬರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಟ್ಟಣದಲ್ಲಿ ಹಲವು ವರ್ಷಗಳಿಂದ ಪಾನ್ ಶಾಪ್ ಹಾಗೂ ಗೌಪ್ಯ ಸ್ಥಳದಲ್ಲಿ ಮಾವಾ ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ವಿಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರ ಆದೇಶದಂತೆ ಹೆಚ್ಚುವರಿ ಅಧೀಕ್ಷಕರಾದ ರಾಮನಗೌಡ ಹಟ್ಟಿ ಮಾರ್ಗದರ್ಶನದಲ್ಲಿ ಸೈಬರ್ ವಿಭಾಗದ ಪೊಲೀಸ್ ಠಾಣೆಯ ಡಿಎಸ್‌ಪಿ ಸುನೀಲ ಕಾಂಬಳೆ, ಪಿ.ಐ.ರವಿ ಯಡವನ್ನವರ ನೇತೃತ್ವದ ತಂಡ ಪಟ್ಟಣದ ಪಾನ್ ಶಾಪ್ ಗಳು ಸೇರಿದಂತೆ ಇತರೆ ಕಡೆಗಳಲ್ಲಿ ದಾಳಿ ನಡೆಸಿದೆ. ಈ ವೇಳೆ ಸಂಗಮೇಶ ನಗರ ಬಡಾವಣೆಯಲ್ಲಿ ಮಾರಾಟ ಮಾಡುತ್ತಿದ್ದ ಖುದಾನಸಾಬ ಪಡೇಕನೂರ, ರಮೇಶ ಗಣಪ್ಪ ಪೂಜಾರಿ ಎಂಬುವರ ಅಂಗಡಿಗಳು ಸೇರಿದಂತೆ ಪಾನ್ ಶಾಪ್‌ಗಳ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ 14 ಕೆಜಿ ಕಚ್ಚಾ ಮಾವಾ, ₹ 6.210 ವೆಚ್ಚದ 175 ಕೆಜಿ ತಯಾರಿಸಿದ ಮಾವಾ, ಅಡಿಕೆ ಚೂರು 12 ಕೆಜಿ, ತಂಬಾಕು 5.8 ಕೆಜಿ, ಮಿಕ್ಸರ್ ಯಂತ್ರ, ಡಿಜಿಟಲ್ ತೂಕದ ಯಂತ್ರ ಸೇರಿದಂತೆ ಸುಮಾರು ₹ 27,840 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.ಈ ವೇಳೆ ಎಎಸ್‌ಐಗಳಾದ ಬಿ.ಎಮ್.ಪವಾರ, ವೈ.ಎಸ್.ಜಮಖಂಡಿ, ಪಿ.ಎಂ.ಟಕ್ಕೋಡ, ಎಸ್.ಬಿ.ಬಿರಾದಾರ, ಆರ್.ಐ.ಲೋಣಿ, ಆರ್.ಡಿ.ಅಂಜುಟಗಿ, ಅಬುಬಕರ ಗದ್ಯಾಳ, ಡಿ.ಆರ್.ಪಾಟೀಲ, ಎಸ್.ಆರ್.ಬಡಚಿ ಸೇರಿ ಹಲವರು ದಾಳಿಯಲ್ಲಿ ಪಾಲ್ಗೊಂಡಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))