ಸಾರಾಂಶ
ಕನ್ನಡಪ್ರಭ ವಾರ್ತೆ, ಮುಧೋಳ
ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಅಭಿಮಾನ ಮತ್ತು ಆರ್ಶೀವಾದದಿಂದ ನಾನು ಮತ್ತೊಮ್ಮೆ ಕ್ಷೇತ್ರದ ಶಾಸಕನಾಗಿ, ರಾಜ್ಯದ ಸಚಿವನಾಗಿದ್ದೇನೆ. ಈ ಋಣವನ್ನು ನಾನೆಂದಿಗೂ ಮರೆಯುವುದಿಲ್ಲ. ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ತಾವೆಲ್ಲರೂ ನನ್ನನ್ನು ತಮ್ಮ ಮಗನಂತೆ, ಸಹೋದರನಂತೆ ನೋಡುತ್ತಾ ಬಂದಿದ್ದಿರಿ. ಅದಕ್ಕಾಗಿ ತಮಗೆಲ್ಲರಿಗೂ ಚಿರಋಣಿಯಾಗಿರುವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.ನಗರದ ದಾನಮ್ಮದೇವಿ ಕಲ್ಯಾಣ ಮಂಟಪದ ಆವರಣದಲ್ಲಿ ಸೋಮವಾರ ಮುಧೋಳ ಮತ್ತು ಲೋಕಾಪೂರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಆಯೋಜಿಸಿದ್ದ 64ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನಿಮ್ಮೆಲ್ಲರ ಆಶೀರ್ವಾದದಿಂದ ನನಗೆ ಚುನಾವಣೆಯಲ್ಲಿ ಮತ್ತೊಮ್ಮೆ ಸ್ಪರ್ಧಿಸಲು ಅವಕಾಶ ಸಿಕ್ಕಿದೆ. ತಾವು ನನ್ನನ್ನು ಬಹುಮತದಿಂದ ಗೆಲ್ಲಿಸಿದ್ದಿರಿ. ನಾನು ಚುನಾವಣೆ ವೇಳೆ ಕೊಟ್ಟ ಮಾತಿನಂತೆ ನಡೆದು ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಹಂತ ಹಂತವಾಗಿ ಮಾಡುತ್ತಿದ್ದೇನೆಂದು ಹೇಳಿದರು.
ನಿರಾವರಿ, ವಿದ್ಯುತ್, ಆರೋಗ್ಯ, ಶಿಕ್ಷಣ, ರಸ್ತೆ, ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗಾಗಿ ನಿರಂತರ ಕೆಲಸ ಕಾರ್ಯ ಮಾಡುತ್ತಿರುವುದು ನನಗೆ ತೃಪ್ತಿ ತಂದಿದೆ. ನನ್ನ ಹುಟ್ಟುಹಬ್ಬವನ್ನು ವಿನೂತನ ಮಾದರಿಯಲ್ಲಿ ಅರ್ಥಪೂರ್ಣವಾಗಿ ಆಚರಿಸುವಂತೆ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದೆ. ಯಾವುದೇ ರೀತಿಯ ಆಡಂಬರ ಮತ್ತು ಶಾಲು, ಮಾಲೆ, ತುರಾಯಿ ಸ್ವಿಕರಿಸುವದಿಲ್ಲವೆಂದು ತಿಳಿಸಿದ್ದೆ ಈಗ ಅದರಂತೆ ನಡೆದುಕೊಂಡಿದ್ದೇನೆ ಎಂದು ತಿಳಿಸಿದರು.ಆರ್.ಬಿ.ತಿಮ್ಮಾಪೂರ ಫೌಂಡೇಶನ್ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ವಿವಿಧ ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮ ಹಮ್ಮಿಕೊಂಡಿರುವುದು, ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸಲು ಬ್ಯೂಟಿಷಿಯನ್ ತರಬೇತಿ, ಉಚಿತ ವಾಹನ ಚಾಲಕರಿಗೆ ಅಪಘಾತ ವಿಮೆ, ರಕ್ತದಾನ ಶಿಬಿರ, ನಿರುದ್ಯೋಗಿಗಳಿಗೆ ಉದ್ಯೋಗ ನೀಡಲು ಉದ್ಯೋಗ ಮೇಳ, ಐಎಎಸ್, ಕೆಎಎಸ್ ಓದುಗರಿಗೆ ರನ್ನ ಗ್ರಂಥಾಲಯದಲ್ಲಿ ಉಚಿತ ವೈ ಫೈ ಸೌಲಭ್ಯ, ವಿಕಲಚೇತನರ (ಅಂಗವಿಕಲ) ಮಕ್ಕಳಿಗೆ ಸಲಕರಣೆ ವಿತರಣೆ, ಪೌರಕಾರ್ಮಿಕರಿಗೆ ಭಟ್ಟೆ ಹಾಗೂ ವಿಕಲಚೇತನರಿಗೆ ಯಂತ್ರಚಾಲಿತ ತ್ರಿಚಕ್ರ ವಾಹನಗಳ ವಿತರಣೆ, ತೋಟಗಾರಿಕೆ ಇಲಾಖೆಯಿಂದ ಫಲಪುಷ್ಪ ಪ್ರದರ್ಶನ, ವಿಶೇಷ ಚೇತನ ಮಕ್ಕಳಿಗೆ ಟ್ರ್ಯಾಕ್ ಸೂಟ್, ಮದರಸಾ ಮಕ್ಕಳಿಗೆ ನೋಟ್ ಬುಕ್ ಮತ್ತು ಪೆನ್ನುಗಳ ವಿತರಣೆ, ಕೃಷಿ ಇಲಾಖೆಯಿಂದ ರೈತರಿಗೆ ಹೈಟೆಕ್ ಕೃಷಿ ಯಂತ್ರೋಪಕರಣ, ಕಾರ್ಮಿಕ ಇಲಾಖೆಯಿಂದ ವಿಮಾ ಯೋಜನೆ ಸೇರಿದಂತೆ ಇನ್ನಿತರ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅತೀವ ಸಂತಸ ತಂದಿದೆ ಎಂದು ಹೇಳಿದರು.
ಶಾಸಕ ಜೆ.ಟಿ.ಪಾಟೀಲ ಮಾತನಾಡಿ ಸಚಿವ ಆರ್.ಬಿ.ತಿಮ್ಮಾಪೂರ ಅವರ ಸರಳ ಜೀವನ ಮತ್ತು ವ್ಯಕ್ತಿತ್ವ ಕುರಿತು ಮನಮುಟ್ಟುವಂತೆ ಮಾತನಾಡಿದರು.ತಿಮ್ಮಾಪೂರ ಕುಟುಂಬದವರು ವೇದಿಕೆ ಮೇಲಿದ್ದ ಮಠಾಧೀಶರಿಗೆ ಪಾದಪೂಜೆ ನೆರವೇರಿಸಿದರು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಿಗೆ ಸನ್ಮಾನಿಸಲಾಯಿತು.
ಸಚಿವ ಆರ್.ಬಿ. ತಿಮ್ಮಾಪೂರ, ಪತ್ನಿ ಶಶಿಕಲಾ, ಪುತ್ರ ವಿನಯ, ಸಹೋದರರಾದ ಶಂಕರ, ಹನುಮಂತ, ಸಹೋದರಿ ಕವಿತಾ, ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ, ನಗರ ಘಟಕ ಅಧ್ಯಕ್ಷ ರಾಘು ಮೋಕಾಶಿ ಸೇರಿದಂತೆ ಇತರೆ ಕಾಂಗ್ರೆಸ್ ಮುಖಂಡರು ಮತ್ತು ಮಠಾಧೀಶರು ವೇದಿಕೆ ಮೇಲಿದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮುಂಚೆ ಮಸೀದಿ, ಮಂದಿರಗಳಿಗೆ ಭೇಟಿ ನೀಡಿ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಕಾಂಗ್ರೆಸ್ ಮುಖಂಡರಾದ ಗೋವಿಂದಪ್ಪ ಗುಜ್ಜನ್ನವರ, ವೆಂಕಣ್ಣ ಗಿಡಪ್ಪನವರ, ಗಿರೀಶಗೌಡ ಪಾಟೀಲ, ಉದಯಕುಮಾರ ಸಾರವಾಡ, ಅಪ್ಪಣ್ಣ ರೂಗಿ, ರಾಜು ಬಾಗವಾನ, ಮಹಾಂತೇಶ ಮಾಚಕನೂರ, ಸಂಜಯ ತಳೇವಾಡ, ಡಾ.ತಿಮ್ಮಣ್ಣ ಅರಳಿಕಟ್ಟಿ, ಸುಧಾಕರ ಸಾರವಾಡ, ಗಿರೀಶ ಲಕ್ಷಾಣಿ, ಹೆಚ್.ಎ.ಕಡಪಟ್ಟಿ, ದಾನೇಶ ತಡಸಲೂರ, ಎಸ್.ಪಿ.ದಾನಪ್ಪಗೋಳ, ನಾರಾಯಣ ಹವಾಲ್ದಾರ, ಮಹಾದೇವ ಹೊಸಟ್ಟಿ, ಕಲ್ಮೇಶ ಸಾರವಾಡ, ಮಾರುತಿ ಮಾನೆ, ಕೃಷ್ಣಾ ನಲವಡೆ, ಹಣಮಂತ ತೇಲಿ, ಸಂತೋಷ ಪಾಲೋಜಿ, ಸಿದ್ರಾಮ ಕುರಿ, ಮಹೇಶ ಬಿಳ್ಳೂರ, ಹಣಮಂತ ಗುರವ, ನಗರಸಭೆ ಸದಸ್ಯರು, ಅಧಿಕಾರಿಗಳು ಸೇರಿದಂತೆ ನೂರಾರು ಅಭಿಮಾನಿಗಳು, ಕಾರ್ಯಕರ್ತರು ಹೂ ಗುಚ್ಚ ನೀಡಿ ಅಭಿನಂದಿಸಿದರು.