ಸಾರಾಂಶ
ಸಮಾಜದಲ್ಲಿ ನಡೆಯುವ ಪ್ರತಿಯೊಂದು ಸತ್ಕಾರ್ಯಗಳಿಗೆ ಹೂಗಾರ ಸಮಾಜದ ಕೊಡುಗೆ ಅಪಾರವಾಗಿದ್ದು, ಅನಾದಿ ಕಾಲದಿಂದಲೂ ಅವರು ಮಾಡಿಕೊಂಡು ಬರುತ್ತಿರುವ ವೃತ್ತಿಗೆ ಪ್ರತಿಯೊಬ್ಬರು ಗೌರವ ಸಲ್ಲಿಸಬೇಕಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಕನ್ನಡಪ್ರಭ ವಾರ್ತೆ ಸವದತ್ತಿ
ಸಮಾಜದಲ್ಲಿ ನಡೆಯುವ ಪ್ರತಿಯೊಂದು ಸತ್ಕಾರ್ಯಗಳಿಗೆ ಹೂಗಾರ ಸಮಾಜದ ಕೊಡುಗೆ ಅಪಾರವಾಗಿದ್ದು, ಅನಾದಿ ಕಾಲದಿಂದಲೂ ಅವರು ಮಾಡಿಕೊಂಡು ಬರುತ್ತಿರುವ ವೃತ್ತಿಗೆ ಪ್ರತಿಯೊಬ್ಬರು ಗೌರವ ಸಲ್ಲಿಸಬೇಕಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.ಪಟ್ಟಣದ ಮಾಮನಿ ಕಲ್ಯಾಣ ಮಂಟಪದಲ್ಲಿ ಹೂಗಾರ, ಗುರವ, ಜೀರ, ಪೂಜಾರ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಶಿವಶರಣ ಹೂಗಾರ ಮಾದಯ್ಯನವರ ಜಯಂತಿ ಹಾಗೂ ಹೂಗಾರ ಸಮಾಜದ ಜಿಲ್ಲಾ ಮಟ್ಟದ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು,
ನಿತ್ಯ ಪತ್ರಿ ಮತ್ತು ಹೂವನ್ನು ಮನೆ ಮನೆಗೆ ತಲುಪಿಸಿ ತಮ್ಮ ವೃತ್ತಿ ಬದುಕನ್ನು ನಡೆಸಿಕೊಂಡು ಬರುತ್ತಿರುವ ಹೂಗಾರ ಸಮಾಜದ ಶ್ರೇಯೋಭಿವೃದ್ಧಿಗೆ ಸಂಪೂರ್ಣ ಸಹಕಾರ ನಿಡುವುದರ ಜೊತೆಗೆ ಆ ಜನಾಂಗಕ್ಕೆ ಸಿಗಬೇಕಾದ ಸರ್ಕಾರದ ಸೌಲಭ್ಯಗಳನ್ನು ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.ಸಂಸದ ಜಗದೀಶ ಶೆಟ್ಟರ ಮಾತನಾಡಿ, ಸಂಘಟನೆಯಿಂದ ನಮ್ಮೆಲ್ಲ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗಲಿದ್ದು, ಹೂಗಾರ ಸಮಾಜದ ಜನರಿಗೆ ರಾಜಕೀಯದಲ್ಲಿ ಪ್ರಾಧಾನ್ಯತೆ ದೊರಕಿಸಿಕೊಡುವಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.ಬಿಜೆಪಿ ತಾಲೂಕು ಅಧ್ಯಕ್ಷ ವಿರುಪಾಕ್ಷ ಮಾಮನಿ ಮಾತನಾಡಿ, ಹೂಗಾರ ಸಮಾಜದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವುದರ ಜೊತೆಗೆ ಎಲ್ಲರನ್ನು ಅಕ್ಷರಸ್ಥರನ್ನಾಗಿಸುವಲ್ಲಿ ವಿಶೇಷ ಆಸಕ್ತಿ ತೋರಬೇಕು. ಸಮಾಜದ ಜನರ ಸಮಸ್ಯೆಗಳಿಗೆ ಸ್ಪಂದಿಸುವುದರ ಜೊತೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.ಹೂಗಾರ ಸಮಾಜದ ಜಿಲ್ಲಾ ಉಪಾಧ್ಯಕ್ಷ ಶಿವಲಿಂಗಪ್ರಭು ಹೂಗಾರ ಮಾತನಾಡಿ, ರಾಜ್ಯದಲ್ಲಿ ೧೫ ಲಕ್ಷ ಜನ ಹೂಗಾರ ಸಮಾಜದವರಿದ್ದು, ಜಿಲ್ಲೆಯಲ್ಲಿ ೧.೮ಲಕ್ಷ ಜನಸಂಖ್ಯೆಯನ್ನು ಈ ಸಮಾಜ ಹೊಂದಿದೆ. ಆದರೆ ಹೂ ಮಾರಿ ಜೀವನ ಸಾಗಿಸುತ್ತಿರುವ ನಮ್ಮ ಜನಾಂಗಕ್ಕೆ ಯಾವುದೆ ಸೌಲಭ್ಯತೆಗಳು ಇಲ್ಲದಿರುವುದು ವಿಷಾದದ ಸಂಗತಿ ಎಂದರು.ಹೂಗಾರ ಸಮಾಜದ ಜಿಲ್ಲಾಧ್ಯಕ್ಷ ಶಿವಾನಂದ ಪಿ. ಹೂಗಾರ ಅಧ್ಯಕ್ಷತೆವಹಿಸಿದ್ದರು. ಕಾಗವಾಡದ ಶ್ರೀ ಯತೀಶ್ವರಾನಂದ ಮಹಾಸ್ವಾಮೀಜಿ, ಸವದತ್ತಿ ಮೂಲಿಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.ಎಪಿಎಂಸಿಯಿಂದ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಶಿವಶರಣ ಹೂಗಾರ ಮಾದಯ್ಯನವರ ಭಾವಚಿತ್ರದ ಮೆರವಣಿಗೆ ಹಾಗೂ ಕುಂಭಮೇಳವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪುರಸಭೆ ಅಧ್ಯಕ್ಷೆ ಚಿನ್ನವ್ವ ಹುಚ್ಚನ್ನವರ, ತಾಲೂಕು ಅಧ್ಯಕ್ಷ ಶಿವಾನಂದ ಚನ್ನಪ್ಪ ಹೂಗಾರ, ಮೋಹನ ಹೂಗಾರ, ಮೃಣಾಲ್ ಹೆಬ್ಬಾಳಕರ, ಮಾರುತಿ ಗುರವ, ಉದಯ ಹೂಗಾರ, ಸಿ.ಬಿ.ಪೂಜಾರ, ಬಿ.ಎಂ.ಹೂಗಾರ, ಆರ್.ಟಿ.ಹೂಗಾರ, ಶಿವಪುತ್ರಪ್ಪ ಹೂಗಾರ, ವಿವೇಕ ಪೂಜಾರ, ಬಸವರಾಜ ಹೂಗಾರ, ಚನ್ನಬಸಪ್ಪ ಹೂಗಾರ ಇತರರು ಉಪಸ್ಥಿತರಿದ್ದರು. ಶಿವಾನಂದ ಹೂಗಾರ ಸ್ವಾಗತಿಸಿದರು.