ಕನ್ನಡಪ್ರಭ ವಾರ್ತೆ ಸವದತ್ತಿ ಉತ್ತರ ಕರ್ನಾಟಕದ ಅಭಿವೃದ್ಧಿಯಾಗಬೇಕಾದರೆ ರೈಲ್ವೆ ಮಾರ್ಗದ ಅವಶ್ಯಕತೆಯಿದ್ದು, ಈ ಹಿಂದೆ ೨೦೧೯ರಲ್ಲಿ ನಡೆದ ಹೋರಾಟದ ಪರಿಣಾಮವಾಗಿ ರೈಲ್ವೆ ಮಾರ್ಗಕ್ಕೆ ಸರ್ವೇ ನಡೆದು ₹೧೬೭೦ ಕೋಟಿಯ ಕ್ರಿಯಾ ಯೋಜನೆ ಮಾಡಿ ಕೊನೆಗಳಿಗೆಯಲ್ಲಿ ಈ ಮಾರ್ಗ ಚಾಲನೆ ಮಾಡದೆ ಬಿಟ್ಟಿರುವುದು ವಿಷಾದದ ಸಂಗತಿ ಎಂದು ರೈಲ್ವೆ ಯೋಜನೆ ಅಭಿವೃದ್ಧಿ ಸಮಿತಿ ರಾಜ್ಯಾಧ್ಯಕ್ಷ ಕುತುಬುದ್ದೀನ್ ಕಾಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಸವದತ್ತಿ

ಉತ್ತರ ಕರ್ನಾಟಕದ ಅಭಿವೃದ್ಧಿಯಾಗಬೇಕಾದರೆ ರೈಲ್ವೆ ಮಾರ್ಗದ ಅವಶ್ಯಕತೆಯಿದ್ದು, ಈ ಹಿಂದೆ ೨೦೧೯ರಲ್ಲಿ ನಡೆದ ಹೋರಾಟದ ಪರಿಣಾಮವಾಗಿ ರೈಲ್ವೆ ಮಾರ್ಗಕ್ಕೆ ಸರ್ವೇ ನಡೆದು ₹೧೬೭೦ ಕೋಟಿಯ ಕ್ರಿಯಾ ಯೋಜನೆ ಮಾಡಿ ಕೊನೆಗಳಿಗೆಯಲ್ಲಿ ಈ ಮಾರ್ಗ ಚಾಲನೆ ಮಾಡದೆ ಬಿಟ್ಟಿರುವುದು ವಿಷಾದದ ಸಂಗತಿ ಎಂದು ರೈಲ್ವೆ ಯೋಜನೆ ಅಭಿವೃದ್ಧಿ ಸಮಿತಿ ರಾಜ್ಯಾಧ್ಯಕ್ಷ ಕುತುಬುದ್ದೀನ್ ಕಾಜಿ ಹೇಳಿದರು.ತಾಲೂಕಿನ ಸುಕ್ಷೇತ್ರ ಶಿರಸಂಗಿಯಲ್ಲಿ ಲೋಕಾಪುರ, ರಾಮದುರ್ಗ, ಸವದತ್ತಿ, ಧಾರವಾಡ ರೈಲ್ವೆ ಮಾರ್ಗದ ಹೋರಾಟದ ಕುರಿತು ನಡೆದ ಸಾರ್ವಜನಿಕರ ಸಭೆಯಲ್ಲಿ ಅವರು ಮಾತನಾಡಿದರು. ಪ್ರತಿ ವರ್ಷ ₹ ೧.೪೮ ಕೋಟಿ ಜನ ಸವದತ್ತಿಯ ಯಲ್ಲಮ್ಮನ ದೇವಸ್ಥಾನಕ್ಕೆ ಬಂದು ಹೋಗುತ್ತಾರೆ. ಅದೇ ರೀತಿ ಶಿರಸಂಗಿ ಕಾಳಮ್ಮ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ದರ್ಶನಕ್ಕೆ ಬರುತ್ತಾರೆ. ರಾಮದುರ್ಗದ ಶಬರಿ ಕೊಳ್ಳಕ್ಕೆ ಮತ್ತು ವೀರಭದ್ರ ದೇವಸ್ಥಾನಕ್ಕೆ ಲಕ್ಷಾಂತರ ಜನ ಬಂದು ಹೋಗುತ್ತಾರೆ. ಈ ಎಲ್ಲ ಭಕ್ತಾದಿಗಳ ಅನುಕೂಲಕ್ಕಾಗಿ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ಹಾಗೂ ಆರ್ಥಿಕವಾಗಿ ತಾಲೂಕು ಬೆಳೆಯಲು ರೈಲ್ವೆ ಮಾರ್ಗದ ಅತಿ ಅವಶ್ಯವಿದೆ ಎಂದರು.ಅಧಿಕಾರಿಗಳು ಹಾಗೂ ಈ ಭಾಗದ ಚುನಾಯಿತ ಪ್ರತಿನಿಧಿಗಳು ೨೦೧೯ರ ಕಡತವನ್ನು ಅನುಮೋದಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವುದರ ಜೊತೆಗೆ ಲೋಕಾಪುರದಿಂದ ಧಾರವಾಡದವರಿಗೆ ರೈಲ್ವೆ ಮಾರ್ಗ ಆಗಲೇಬೇಕೆಂದು ಒತ್ತಾಯ ಮಾಡಬೇಕಿದೆ. ಕಳೆದ ೨ ದಶಕಗಳಿಂದಲೂ ಈ ಭಾಗದಲ್ಲಿ ರೈಲ್ವೆ ಮಾರ್ಗ ಆಗಬೇಕೆಂದು ಹೋರಾಟ ಮಾಡಲಾಗುತ್ತಿದೆ. ಈ ಭಾಗದ ಚುನಾಯಿತ ಪ್ರತಿನಿಧಿಗಳ ಇಚ್ಛಾಶಕ್ತಿ ಇಲ್ಲದೆ ಈ ಮಾರ್ಗ ನೆನೆಗುದಿಗೆ ಬಿದ್ದಿದೆ. ಮುಂಬರುವ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಲೋಕಾಪುರದಿಂದ ಧಾರವಾಡಕ್ಕೆ ರೈಲ್ವೆ ಮಾರ್ಗಕ್ಕೆ ಒತ್ತಾಯಿಸಿ ಅನುದಾನ ಬಿಡುಗಡೆಗೆ ಒತ್ತಾಯಿಸು ಪ್ರಯತ್ನ ಮಾಡಬೇಕಿದೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರಗಳು ಮತ್ತು ಚುನಾಯಿತ ಪ್ರತಿನಿಧಿಗಳು ಮುಂದಾಗಬೇಕು ಎಂದು ಹೇಳಿದರು. ಲೋಕಾಪುರದಿಂದ ರಾಮದುರ್ಗದವರಿಗೆ ರೈಲ್ವೆ ಮಾರ್ಗಕ್ಕೆ ಈ ಸಲದ ಬಜೆಟ್‌ನಲ್ಲಿ ಅನುಮೋದನೆ ನೀಡಲು ಒತ್ತಾಯಿಸಿ ಸವದತ್ತಿಯಲ್ಲಿ ಮತ್ತೆ ಸತ್ಯಾಗ್ರಹದ ಮೂಲಕ ಉಗ್ರವಾದ ಹೋರಾಟವನ್ನು ಮಾಡಲಾಗುತ್ತಿದೆ ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ಪಿ.ಬಿ.ಬಡಿಗೇರ, ಮಹಾರಾಜ, ಮುತ್ತಪ್ಪ ಭಜಂತ್ರಿ, ಮಲ್ಲಿಕಾರ್ಜುನ, ಪ್ರಕಾಶ ಗುಗ್ಗರಿ, ಬಿ.ಎಸ್.ಪಾಟೀಲ, ಸಿದ್ದು ಪಟ್ಟೇದ ಇತರರು ಉಪಸ್ಥಿತರಿದ್ದರು.