ರೈಲ್ವೆ ಸಚಿವ ಸೋಮಣ್ಣಗೆ ಕ್ರೇನ್‌ ಗಳಲ್ಲಿ ಗುಲಾಬಿ ಪುಷ್ಪವೃಷ್ಟಿ ಸ್ವಾಗತ

| Published : Sep 04 2024, 01:46 AM IST

ರೈಲ್ವೆ ಸಚಿವ ಸೋಮಣ್ಣಗೆ ಕ್ರೇನ್‌ ಗಳಲ್ಲಿ ಗುಲಾಬಿ ಪುಷ್ಪವೃಷ್ಟಿ ಸ್ವಾಗತ
Share this Article
  • FB
  • TW
  • Linkdin
  • Email

ಸಾರಾಂಶ

Railway Minister Somanna was greeted with rose petals on cranes

- ಗುರುಮಠಕಲ್‌ ಶಾಸಕ ಶರಣಗೌಡ ಕಂದಕೂರು ಅಭಿಮಾನಿ ಬಳಗದ ಆಯೋಜನೆ

- ಯಾದಗಿರಿಯಲ್ಲಿ ಅದ್ಧೂರಿ ಸನ್ಮಾನ : ಸಚಿವ ಸೋಮಣ್ಣಗೆ ಬೆಳ್ಳಿಗದೆ ನೀಡಿ ಗೌರವ

-----

ಕನ್ನಡಪ್ರಭ ವಾರ್ತೆ ಯಾದಗಿರಿಯಾದಗಿರಿ ಜಿಲ್ಲೆ ಗುರುಮಠಕಲ್‌ ತಾಲೂಕಿನ ಸೈದಾಪುರ ಸಮೀಪದ ಕಡೇಚೂರು -ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ ರೈಲ್ವೆ ಬೋಗಿ ನಿರ್ಮಾಣ ಕಾರ್ಖಾನೆ ವೀಕ್ಷಣೆಗೆಂದು ಇದೇ ಮೊದಲ ಬಾರಿಗೆ ಆಗಮಿಸಿದ್ದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಗುರುಮಠಕಲ್‌ ಶಾಸಕ, ಜೆಡಿಎಸ್‌ನ ಶರಣಗೌಡ ಕಂದಕೂರು ಅಭಿಮಾನಿಗಳ ಬಳಗದಿಂದ ಅದ್ಧೂರಿ ಸ್ವಾಗತ ನೀಡಲಾಯಿತು. ಸಚಿವ ವಿ. ಸೋಮಣ್ಣ ಬರುತ್ತಿದ್ದಂತೆಯೇ, ಎರಡು ಬೃಹತ್‌ ಕ್ರೇನ್‌ಗಳಲ್ಲಿ ಸಂಗ್ರಹಿಸಿಡಲಾಗಿದ್ದ ಗುಲಾಬಿ ಹೂವುಗಳನ್ನು ಪುಷ್ಪವೃಷ್ಟಿ ಮಾಡಲಾಯಿತು.

ಸಚಿವ ಸೋಮಣ್ಣರನ್ನು ಬರಮಾಡಿಕೊಂಡ ಶಾಸಕ ಕಂದಕೂರು, ರೈಲ್ವೆ ಬೋಗಿ ಫ್ಯಾಕ್ಟರಿ ವೀಕ್ಷಣೆಗೆ ಜೊತೆಯಾಗಿ ಹೆಜ್ಜೆ ಹಾಕಿದರು. ಈ ಸಂದರ್ಭದಲ್ಲಿ ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ, ಮುಂತಾದವರಿದ್ದರು.

ನಂತರ, ಶಾಸಕ ಕಂದಕೂರು ಅವರ ವತಿಯಿಂದ ಸಂಜೆ ಯಾದಗಿರಿಯ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ನಡೆದ ಸಚಿವ ಸೋಮಣ್ಣ ಅವರಿಗೆ ಸನ್ಮಾನ ಸಮಾರಂಭದಲ್ಲಿ ಬೃಹತ್‌ ಹೂವಿನ ಹಾರ, ಬೆಳ್ಳಿಗದೆ ನೀಡಿ ಗೌರವಿಸಲಾಯಿತು. ಮಾಜಿ ಸಚಿವ ಡಾ. ಎ. ಬಿ. ಮಾಲಕರೆಡ್ಡಿ, ಚೆನ್ನಪ್ಪಗೌಡ ಮೋಸಂಬಿ, ಲಕ್ಷ್ಮಾರೆಡ್ಡಿ ಅನಪೂರ, ಹಿರಿಯ ನ್ಯಾಯವಾದಿ ಎಸ್‌. ಬಿ. ಪಾಟೀಲ್‌ ಮುಂತಾದವರಿದ್ದರು.

----

ಫೋಟೊ:

3ವೈಡಿಆರ್‌14 : ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ ರೈಲ್ವೆ ಬೋಗಿ ನಿರ್ಮಾಣ ಕಾರ್ಖಾನೆ ವೀಕ್ಷಣೆಗೆಂದು ಆಗಮಿಸಿದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಗುರುಮಠಕಲ್‌ ಶಾಸಕ, ಜೆಡಿಎಸ್‌ನ ಶರಣಗೌಡ ಕಂದಕೂರು ಅಭಿಮಾನಿಗಳ ಬಳಗದಿಂದ ಪುಷ್ಪವೃಷ್ಟಿ ಅದ್ಧೂರಿ ಸ್ವಾಗತ ನೀಡಲಾಯಿತು.

-----

3ವೈಡಿಆರ್‌15 : ಗುರುಮಠಕಲ್‌ ಶಾಸಕ, ಜೆಡಿಎಸ್‌ನ ಶರಣಗೌಡ ಕಂದಕೂರು ಅವರ ವತಿಯಿಂದ ಸಂಜೆ ಯಾದಗಿರಿಯ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ನಡೆದ ರೈಲ್ವೆ ಖಾತೆ ರಾಜ್ಯ ಸಚಿವ ಸೋಮಣ್ಣ ಅವರಿಗೆ ಸನ್ಮಾನ ಸಮಾರಂಭದಲ್ಲಿ ಬೃಹತ್‌ ಹೂವಿನ ಹಾರ, ಬೆಳ್ಳಿಗದೆ ನೀಡಿ ಗೌರವಿಸಲಾಯಿತು