ಗುಂಡ್ಲುಪೇಟೆ ಪಟ್ಟಣ, ಬಂಡೀಪುರ ಗೋಪಾಲಸ್ವಾಮಿ ಬೆಟ್ಟದಲ್ಲಿ ಮಳೆ

| Published : Apr 04 2025, 12:50 AM IST

ಸಾರಾಂಶ

ಗುರುವಾರ ಸಂಜೆ ಗುಂಡ್ಲುಪೇಟೆ ಪಟ್ಟಣ, ಬಂಡೀಪುರ ಗೋಪಾಲಸ್ವಾಮಿ ಬೆಟ್ಟ ಸೇರಿದಂತೆ ತಾಲೂಕಿನ ಹಲವು ಕಡೆ ಮಳೆ ಬಿದ್ದಿದ್ದು, ಬಿಸಿಲಿನ ಬೇಗೆಗೆ ಕೆಲ ಕಾಲ ಮಳೆ ಕೂಲ್‌ ಮಾಡಿದೆ.

ಗುಂಡ್ಲುಪೇಟೆ: ಗುರುವಾರ ಸಂಜೆ ಗುಂಡ್ಲುಪೇಟೆ ಪಟ್ಟಣ, ಬಂಡೀಪುರ ಗೋಪಾಲಸ್ವಾಮಿ ಬೆಟ್ಟ ಸೇರಿದಂತೆ ತಾಲೂಕಿನ ಹಲವು ಕಡೆ ಮಳೆ ಬಿದ್ದಿದ್ದು, ಬಿಸಿಲಿನ ಬೇಗೆಗೆ ಕೆಲ ಕಾಲ ಮಳೆ ಕೂಲ್‌ ಮಾಡಿದೆ.

ಪಟ್ಟಣದಲ್ಲಿ ಸಂಜೆ ಸುರಿದ ಮಳೆಗೆ ಪಟ್ಟಣದ ರಸ್ತೆಯ ತುಂಬೆಲ್ಲ ನೀರು ಹರಿದಾಡಿದ್ದು, ಕಸ ಕಡ್ಡಿಗಳೆಲ್ಲ ಚರಂಡಿಗೆ ಹೋಗಿದ್ದು, ಕೆಲ ಕಡೆ ಕಸ ತುಂಬಿ ತುಳುಕಿದ ಕಾರಣ ವಾಸನೆ ಬೀರಿದೆ.

ಪಟ್ಟಣದ ಮಳೆ ನೀರು ನಿಲ್ಲುವ ತಾಣವಾದ ಮಡಹಳ್ಳಿ ಸರ್ಕಲ್‌ನಲ್ಲಿ ಮಳೆ ನೀರು ನಿಂತು ವಾಹನಗಳು ಹಾಗು ಪಾದಚಾರಿಗಳು ಸಂಚರಿಸಲು ಪರದಾಡಿ ಎಂದಿನಂತೆ ಪುರಸಭೆ ವಿರುದ್ಧ ಜನರು ಹಿಡಿ ಶಾಪ ಹಾಕಿದರು.

ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿಯೂ ಮಳೆ ತುಸು ಬಿರುಸಾಗಿಯೇ ಬಿದ್ದಿದೆ.ತಾಲೂಕಿನ ಬೇಗೂರು ಸುತ್ತಮುತ್ತಲೂ ಕೂಡ ಮಳೆ ಬಿದ್ದಿದೆ.

ಸಂಜೆಯ ವೇಳೆ ಮಳೆ ಸುರಿದ ಕಾರಣ ಗುರುವಾರ ಬೆಳಗ್ಗೆಯಿಂದ ಸಂಜೆ ತನಕ ಬಿಸಿಲಿನ ಬೇಗೆಗೆ ಬೆಂದಿದ್ದ ಜನರಿಗೆ ಸಂಜೆ ಮಳೆ ಬಿದ್ದು ತಂಪಾದ ವಾತಾವರಣ ಕಂಡು ಬಂದಿದೆ.