ಕನ್ನಡಪ್ರಭ ವಾರ್ತೆ ಗೋಕಾಕ ಮನುಷ್ಯನಿಗೆ ನೆಮ್ಮದಿ ಮುಖ್ಯ, ಕಠಿಣ ವೃತಾಚರಣೆ ಮೂಲಕ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಅಯ್ಯಪ್ಪನ ನಾಮಸ್ಮರಣೆ ಮಾಡಿದರೆ ಸ್ವಾಮಿಯ ಕೃಪೆಯಾಗುತ್ತದೆ. ದೇವರ ಮೇಲಿನ ಭಕ್ತಿ ತಮಗೆ ಶಕ್ತಿಯಾಗುತ್ತದೆ ಎಂದು ಸುಕ್ಷೇತ್ರ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಮನುಷ್ಯನಿಗೆ ನೆಮ್ಮದಿ ಮುಖ್ಯ, ಕಠಿಣ ವೃತಾಚರಣೆ ಮೂಲಕ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಅಯ್ಯಪ್ಪನ ನಾಮಸ್ಮರಣೆ ಮಾಡಿದರೆ ಸ್ವಾಮಿಯ ಕೃಪೆಯಾಗುತ್ತದೆ. ದೇವರ ಮೇಲಿನ ಭಕ್ತಿ ತಮಗೆ ಶಕ್ತಿಯಾಗುತ್ತದೆ ಎಂದು ಸುಕ್ಷೇತ್ರ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಹೇಳಿದರು.

ತಾಲೂಕಿನ ಬೆಟಗೇರಿ ಗ್ರಾಮದ ಓಂ ಶ್ರೀಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಆಶ್ರಯದಲ್ಲಿ ನಡೆದ 28ನೇ ವರ್ಷದ ಅಯ್ಯಪ್ಪಸ್ವಾಮಿ ಮಹಾಪೂಜೆ, ಅನ್ನಸಂತರ್ಪಣೆ, ದಾನಿಗಳಿಗೆ ಸತ್ಕಾರ ಸಮಾರಂಭ ಹಾಗೂ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು. ಅಯ್ಯಪ್ಪಸ್ವಾಮಿ ಬಗ್ಗೆ ನನಗೆ ಬಹಳ ಒಲವು. ಅಯ್ಯಪ್ಪನಿಗೆ ಇಂಥವರು ಭಕ್ತರು ಅಂತ ಯಾರು ಇಲ್ಲ. ಎಲ್ಲಾ ಜನಾಂಗದ ಜನ ಅಯ್ಯಪ್ಪಸ್ವಾಮಿ ಮಾಲೆ ಧರಿಸುತ್ತಾರೆ. ಸತತ 28 ವರ್ಷಗಳಿಂದ ಅಯ್ಯಪ್ಪಸ್ವಾಮಿ ಮಹಾಪೂಜಾ ಕಾರ್ಯಕ್ರಮ ಆಯೋಜಿಸುತ್ತಿರುವ ಕಾರ್ಯ ಸಂತೋಷ ತಂದಿದೆ. ಬೇಗ ಸಮುದಾಯ ಭವನ ನಿರ್ಮಿಸಿ ನೂತನ ಕಟ್ಟಡದ ಉದ್ಘಾಟನೆಗೆ ನಾನೇ ಬರುತ್ತೇನೆ ಎಂದು ಹೇಳಿದರು.ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಮಾತನಾಡಿ, ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಬಹುದಿನದ ಕನಸು ಅಯ್ಯಪ್ಪಸ್ವಾಮಿ ಸನ್ನಿದಾನದ ಸ್ಥಳದಲ್ಲಿ ಸುಮಾರು ₹ 25 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಲು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಗಮನಕ್ಕೆ ತಂದು, ಕಟ್ಟಡ ನಿರ್ಮಾಣದ ಕುರಿತು ಚರ್ಚಿಸಿ ನೂತನ ಸಮುದಾಯ ಭವನ ನಿರ್ಮಿಸಲು ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ಭಾಗೋಜಿಕೊಪ್ಪದ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಚೇತನದೇವರು, ಬೊಮ್ಮನಹಳ್ಳಿ ಶ್ರೀಗಳು, ಸುಣಧೋಳಿಯ ಅಭಿನವ ಶಿವಾನಂದ ಸ್ವಾಮೀಜಿ, ಕಡಕೋಳ ಸಿದ್ದರಾಯಜ್ಜನವರು, ವೇದಮೂರ್ತಿ ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ, ಹನುಮಂತ ವಡೇರ, ಮುತ್ತೆಪ್ಪ ವಡೇರ, ಗುರುಸ್ವಾಮಿಗಳಾದ ವೀರನಾಯ್ಕ ನಾಯ್ಕರ, ಬಸವರಾಜ ಬೆಟಗೇರಿ ಸೇರಿ ಹಲವರು ಹಾಜರಿದ್ದರು. ತಾಪಂ ಮಾಜಿ ಸದಸ್ಯ ಬಸವಂತ ಕೋಣಿ ಅಧ್ಯಕ್ಷತೆ ವಹಿಸಿದ್ದರು.ವೈಭವದ ಕಾರ್ಯಕ್ರಮ: ಸಂಜೆ 6 ಗಂಟೆಗೆ ಬಸವೇಶ್ವರ ವೃತ್ತದಿಂದ ಅಯ್ಯಪ್ಪಸ್ವಾಮಿ ಸನ್ನಿದಾನದ ತನಕ ಒಂಟೆ, ಸುಮಂಗಲೆಯರಿಂದ ಆರತಿ, ಕುಂಭ, ಕರಡಿ ಮಜಲು, ಜಾಂಜ್‌ಪಥ್‌ಕ ಸೇರಿ ಸಕಲ ವಾದ್ಯ ಮೇಳಗಳೊಂದಿಗೆ ಅಯ್ಯಪ್ಪಸ್ವಾಮಿ ಮೂರ್ತಿಯೊಂದಿಗೆ ಕೋಡಿಮಠದ ಶ್ರೀಗಳ ಮೆರವಣಿಗೆ ನಡೆಯಿತು. ಬಳಿಕ ಅಗ್ನಿಪೂಜೆ, ಮಾಲಾಧಾರಿಗಳಿಂದ ಬೆಂಕಿಪಾದ, ಅಯ್ಯಪ್ಪ ಸ್ವಾಮಿ ಮಹಾಪೂಜೆ, ಮಹಾಭಿಷೇಕ ನಡೆದು, ಗಣ್ಯರಿಗೆ, ದಾನಿಗಳಿಗೆ ಸತ್ಕಾರ ನಡೆಸಲಾಯಿತು.ತಾಪಂ ಮಾಜಿ ಸದಸ್ಯ ಲಕ್ಷ್ಮಣ ನೀಲಣ್ಣವರ, ಸುಭಾಷ ಕರೆನ್ನವರ, ರಾಜು ಪತ್ತಾರ, ಬಸವರಾಜ ಪಣದಿ, ಲಕ್ಷ್ಮಣ ಸೋಮಗೌಡ್ರ, ಸದಾಶಿವ ಕುರಿ, ವಿವಿಧ ಹಳ್ಳಿಗಳ, ಸಂಘ-ಸಂಸ್ಥೆಗಳ ಹಾಗೂ ಸ್ಥಳೀಯ ಜನಪ್ರತಿನಿಧಿಗಳು, ರಾಜಕೀಯ ಮುಖಂಡರು, ಯುವಕ ಸಂಘದ ಪದಾಧಿಕಾರಿಗಳು, ಸದಸ್ಯರು, ಅಯ್ಯಪ್ಪ ಸ್ವಾಮಿ ಮಾಲಾಧಾರಿ ಗ್ರಾಮಸ್ಥರು ಇದ್ದರು.------

ಕೋಟ್‌

ಎಲ್ಲಾ ಜನಾಂಗದ ಪ್ರತೀಕ ಅಯ್ಯಪ್ಪಸ್ವಾಮಿ, ಎಲ್ಲಾ ಕಡೆ ನೋಡಬೇಕು, ಜಾತಿ ಹೆಚ್ಚು ಮೆರೆಯುತ್ತಿದೆ. ಜಾತಿಯಿಂದ ವಿನಾಶವಾಗುತ್ತದೆ. ಜಾತಿ, ಮತ, ಪಂಥ ಎನ್ನದೇ ಎಲ್ಲರೂ ಒಂದಾಗಿ ಬಾಳಿರಿ, ಮುಂದಿನ ವರ್ಷ ಮಳೆ ಬೆಳೆ ಚನ್ನಾಗಿದೆ. ಜಾತಿ, ಧರ್ಮದಿಂದಾಗಿ ಯುದ್ಧ, ಬಾಂಬು, ಪ್ರಳಯ ಹೇಗಾಗುತ್ತೆ ನೋಡಿ. ಎಲ್ಲವನ್ನು ಯುಗಾದಿ ನಂತರ ಹೇಳುತ್ತೇನೆ.ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀ, ಕೋಡಿಮಠ