ಸಾರಾಂಶ
ಕನ್ನಡಪ್ರಭವಾರ್ತೆ, ಹನೂರು
ತಾಲೂಕಿನಲ್ಲಿ ಮಳೆ ಇಲ್ಲದೆ ಕಂಗಲಾಗಿರುವ ರೈತರು ಜಾನುವಾರುಗಳ ಮೇವಿನ ಸಂಗ್ರಹಣೆಗೆ ಪರದಾಡುವಂಥ ಸ್ಥಿತಿ ನಿರ್ಮಾಣವಾಗಿದೆ.ರಾಜ್ಯಾದ್ಯಂತ ಹಲವಾರು ಜಿಲ್ಲೆಯ ತಾಲೂಕುಗಳಲ್ಲಿ ಮಳೆಯ ಅಬ್ಬರದಿಂದ ಜನಜೀವನ ಹಸ್ತವ್ಯಸ್ತಗೊಂಡಿದೆ. ಆದರೆ ಹನೂರು ತಾಲೂಕಿನಲ್ಲಿ ಮಳೆ ಇಲ್ಲದೆ ಅನ್ನದಾತ ಜಾನುವಾರುಗಳ ಮೇವಿಗಾಗಿ ಫಲಿತಪಿಸುತ್ತಿದ್ದು, ಕೂಡಲೇ ಸರ್ಕಾರ ಇತ್ತ ಗಮನ ಇರಿಸಿ ಹನೂರು ತಾಲೂಕನ್ನು ಬರಪಿಡಿತ ತಾಲೂಕು ಎಂದು ಘೋಷಣೆ ಮಾಡಬೇಕು. ಹೆಚ್ಚುವರಿ ಅನುದಾನ ನೀಡಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಕೊರತೆ ಆಗದಂತೆ ಕ್ರಮ ಕೈಗೊಳ್ಳಲು ಸರ್ಕಾರ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ನೆರೆ ತಾಲೂಕಿನಿಂದ ಮೇವಿನ ಸಂಗ್ರಹಣೆ:ಮಳೆ ಇಲ್ಲದೆ ಕಂಗಲಾಗಿರುವ ಅನ್ನದಾತ ತನ್ನ ಜಾನುವಾರುಗಳ ರಕ್ಷಣೆಗೆ ಮತ್ತು ಮುಂದೆ ಜಾನುವಾರುಗಳಿಗೆ ಬೇವಿನ ಕೊರತೆ ಉಂಟಾಗುವುದರಿಂದ ಈಗಾಗಲೇ ತಾಲೂಕಿನ ರೈತಾಪಿ ವರ್ಗದವರು ನೆರೆಯ ತಾಲೂಕಿನಿಂದ ಮುಸುಕಿನ ಜೋಳದ ಕಡ್ಡಿ ಹಾಗೂ ಭತ್ತದ ಹುಲ್ಲು ಸಾಗಣೆ ಮಾಡುತ್ತಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಗಮನ ಹರಿಸಿ ಸರ್ಕಾರಕ್ಕೆ ತಾಲೂಕಿನಲ್ಲಿ ಹಾಗಿರುವ ಮೇವು ಹಾಗೂ ನೀರಿನ ಕೊರತೆ ಆಗದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮುಂದಾಗಬೇಕಿದೆ.ಸರ್ಕಾರ ಇತ್ತ ಗಮನ ಹರಿಸಿ ಜನಪ್ರತಿನಿಧಿಗಳು ಹನೂರು ತಾಲೂಕನ್ನು ಬರಪಿಡಿತ ತಾಲೂಕು ಎಂದು ಘೋಷಣೆ ಮಾಡಲು ಒತ್ತಾಯಿಸಬೇಕು. ಜೊತೆಗೆ ಜಿಲ್ಲಾಡಳಿತದ ಮೂಲಕ ತಾಲೂಕಿನಲ್ಲಿ ಗೋವುಗಳಿಗೆ ಮೇವಿನ ಬ್ಯಾಂಕ್ ತೆರೆಯಬೇಕು. ನೀರಿನ ಸಮಸ್ಯೆ ಉಂಟಾಗದಂತೆ ಗ್ರಾಮಗಳಲ್ಲಿ ಕ್ರಮ ಕೈಗೊಳ್ಳಬೇಕು. ರಾಜ್ಯಾದ್ಯಂತ ಮಳೆ ಅಬ್ಬರ ಜೋರಾಗಿದೆ. ಆದರೆ ತಾಲೂಕಿನಲ್ಲಿ ಮಳೆ ಇಲ್ಲದೆ ಅಂತಕಕ್ಕೀಡಾಗಿರುವ ಅನ್ನದಾತನ ನೆರವಿಗೆ ಜನಪ್ರತಿನಿಧಿಗಳು ಅಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಛಲವಾದಿ ಮಹಾಸಭಾ ಹನೂರು ಅಧ್ಯಕ್ಷ ಬಸವರಾಜ್ ಒತ್ತಾಯಿಸಿದ್ದಾರೆ.ಗಾಯದ ಮೇಲೆ ಬರೆ ಇಲ್ಲದಂತೆ ಅನ್ನದಾತನಿಗೆ ಮಳೆ ಇಲ್ಲದೆ ಕಂಗಾಗಳಾಗಿರುವ ರೈತನಿಗೆ ತನ್ನ ಜೀವನ ನಿರ್ವಹಣೆ ಮಾಡುವುದೇ ಕಷ್ಟಕರವಾಗಿರುವ ಇತ್ತೀಚಿನ ದಿನಗಳಲ್ಲಿ ಮೇವಿನ ಸಂಗ್ರಹಣೆ ವಿವಿಧ ತಾಲೂಕುನಿಂದ ಸಾಗಾಟ ಮಾಡಲು ದುಬಾರಿ ವೆಚ್ಚ ಹಾಗಿರುವುದರಿಂದ ಕೂಡಲೇ ಇತ್ತ ಗಮನ ಹರಿಸಿ ಜಿಲ್ಲಾಡಳಿತ ರೈತನಿಗೆ ಮೇವಿನ ಕೊರತೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡರು ಸಹ ಇದೇ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.ಹನೂರು ತಾಲೂಕಿನಲ್ಲಿ ವಾಡಿಕೆಯಷ್ಟು ಮಳೆಯಾಗದ ಪರಿಣಾಮ ನಿಗಧಿತ ಪ್ರಮಾಣದಲ್ಲಿ ಬಿತ್ತನೆಯಾಗಿಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಮೇವು ಮತ್ತು ನೀರಿನ ಕೊರತೆ ಉಂಟಾಗುತ್ತದೆ. ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಲು ಸರ್ಕಾರ ಮುಂದಾಗಬೇಕಿದೆ.
ಅಮ್ಜಾದ್ ಖಾನ್, ರೈತ ಮುಖಂಡ, ಹನೂರು ತಾಲೂಕು.